For Quick Alerts
  ALLOW NOTIFICATIONS  
  For Daily Alerts

  ಗುಲ್ಬರ್ಗದಲ್ಲಿ 'ರೋಮಿಯೋ'ಗೆ ಅದ್ದೂರಿ ಸ್ವಾಗತ

  By Rajendra
  |

  ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಭಾವನಾ ಜೊತೆಯಾಗಿ ಅಭಿನಯಿಸಿರುವ 'ರೋಮಿಯೋ' ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡ ಪ್ರಚಾರಯಾತ್ರೆ ಆರಂಭಿಸಿದೆ. ಇದರ ಆರಂಭವಾಗಿ ತಂಡ ಇತ್ತೀಚೆಗೆ ಗುಲ್ಬರ್ಗದತ್ತ ಪ್ರಯಾಣ ಬೆಳೆಸಿತು.

  ಅಲ್ಲಿನ ಮಾಲ್‌ವೊಂದರಲ್ಲಿ ನಾಯಕ ಗಣೇಶ್‌ನನ್ನು ನೋಡಲು ಅಭಿಮಾನಿಗಳ ಮಹಾಪೂರವೇ ಹರಿದು ಬಂದಿತು. ಜನರನ್ನು ನಿಯಂತ್ರಿಸಲು ಆರಕ್ಷಕರು ಹರಸಾಹಸ ಪಡಬೇಕಾಯಿತು. ಗಣೇಶ್ ಅಭಿಮಾನಿಗಳಿಗಾಗಿ "ಬೆಳಗ್ಗೆ ಎದ್ದು ಕಾಫಿ ಕುಡಿ..." ಎಂಬ ಪ್ರಚಾರ ಗೀತೆಯನ್ನು ಹಾಡಿದರು. ಈ ಹಾಡು ಎಷ್ಟರ ಮಟ್ಟಿಗೆ ಜನಪ್ರಿಯವಾಗಿದೆ ಎಂದರೆ ಗಣೇಶ್ ಅವರೊಟ್ಟಿಗೆ ಅಭಿಮಾನಿಗಳು ಧ್ವನಿಗೂಡಿಸಿದರು ಎನ್ನುತ್ತಾರೆ ನಿರ್ದೇಶಕ ಶೇಖರ್.

  ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕೂಡ ಚಿತ್ರದ ಎರಡು ಹಾಡುಗಳನ್ನು ಹಾಡಿದರು. ಚಿತ್ರತಂಡ ಮುಂದೆ ಮೈಸೂರು, ಹುಬ್ಬಳ್ಳಿ ಮುಂತಾದ ನಗರಗಳಿಗೂ ಭೇಟಿ ನೀಡಲಿದೆ. ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ನಟರಾಜ್ ಸಂಭಾಷಣೆ ಬರೆದಿದ್ದಾರೆ. ಕೆ.ಎಸ್.ಪಿಕ್ಚರ್ಸ್ ಲಾಂಛನದಲ್ಲಿ ನವೀನ್(ನಾಯಕ) ಹಾಗೂ ರಮೇಶ್‌ಕುಮಾರ್ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ.

  ಗೋಲ್ಡನ್ ಸ್ಟಾರ್ ಅಭಿನಯದ 18ನೇ ಅದ್ದೂರಿ ಚಿತ್ರವಿದು. ಈಗಾಗಲೆ ಬಿಡುಗಡೆಯಾಗಿರುವ ಈ ಚಿತ್ರ ಟ್ರೇಲರ್ ವಿಭಿನ್ನವಾಗಿದ್ದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಮನರಂಜನೆ ಹಾಗೂ ವಿಭಿನ್ನ ಕತೆಯೇ ಚಿತ್ರದ ಜೀವಾಳ ಎಂದಿದ್ದಾರೆ ಗಣೇಶ್.

  ಎಲ್ಲ ವರ್ಗದ ಪ್ರೇಕ್ಷಕರನ್ನು ದೃಷ್ಟಿಯಲ್ಲಿಟ್ಟು ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಪ್ರೀತಿ, ಪ್ರೇಮ, ಹಾಸ್ಯ, ಗಂಡ ಹೆಂಡತಿ ಸಂಸಾರ, ಸಮಕ್ಕೊಂದು ಸುಳ್ಳು ಹೀಗೆ ಚಿತ್ರದ ವಿಭಿನ್ನ ಸನ್ನಿವೇಶಗಳು ಪ್ರೇಕ್ಷಕರನ್ನು ಖಂಡಿತ ಸೆಳೆಯುತ್ತವೆ ಎನ್ನುತ್ತಾರೆ ಗಣೇಶ್.

  ಇದೇ ಸಂದರ್ಭದಲ್ಲಿ ಅವರು ತಮ್ಮ ಹೋಂ ಬ್ಯಾನರ್‌ನಲ್ಲಿ ಮತ್ತಷ್ಟು ಚಿತ್ರಗಳನ್ನು ನಿರ್ಮಿಸುವ ಯೋಜನೆ ಇದೆ ಎಂದರು. ಮಿ.420 ಹಾಗೂ ಸಕ್ಕರೆ ಚಿತ್ರಗಳು ಇನ್ನೂ ನಿರ್ಮಾಣ ಹಂತದಲ್ಲಿವೆ ಎಂದು ಗಣೇಶ್ ವಿವರ ನೀಡಿದರು.

  ಚಿತ್ರದ ಒಂದು ಡೈಲಾಗ್ ಹೀಗಿದೆ. ಭಾವನಾ: ಎಲ್ಲಾರೂ ಅವರವರು ದುಡಿದ ದುಡ್ಡಲ್ಲಿ ರಾಜರ ತರಹ ಬದುಕ ಬೇಕು.....ರೋಮಿಯೋ: ಮೇಡಂ ಕಾಡ್ನಲ್ಲಿ ಸಿಂಹ 16 ಗಂಟೆ ಮಲಗುತ್ತಂತೆ...ಆದ್ರೆ ಕತ್ತೆ 18 ಗಂಟೆ ಕೆಲಸ ಮಾಡುತ್ತಂತೆ....ನೀವು ಹೇಳೋ ತರ ದುಡಿದವರೆ ರಾಜರು ತರಹ ಇದ್ದಿದ್ರೆ ಕತ್ತೆನೇ ರಾಜ ಆಗ್ಬೇಕಾಗಿತ್ತು ಮತ್ತೆ ಏನಕ್ಕೆ ಸಿಂಹ ಆಗ್ತಿತ್ತು....

  ಸಾಲು ಸಾಲು ಚಿತ್ರಗಳ ಸೋಲಿನಿಂದ ಕಂಗೆಟ್ಟಿರುವ ಗಣೇಶ್‌ ಅವರು ರೋಮಿಯೋ ಚಿತ್ರದ ಮೇಲೆ ಭಾರಿ ಭರವಸೆಗಳನ್ನು ಇಟ್ಟುಕೊಂಡಿದ್ದಾರೆ. ಚಿತ್ರ ಗಣೇಶ್‌ಗೆ ಬ್ರೇಕ್ ಕೊಡುತ್ತಾ ಇಲ್ಲಾ ಕೈಕೊಡುತ್ತಾ ಯಾವೋನಿಗ್ ಗೊತ್ತು.

  ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ವೈದಿ ಅವರ ಛಾಯಾಗ್ರಹಣವಿರುವ ಈ ಚಿತ್ರದ ತಾರಾಬಳಗದಲ್ಲಿ ಗೋಲ್ಡನ್‌ಸ್ಟಾರ್ ಗಣೇಶ್, ಭಾವನಾ(ಜಾಕಿ), ಅವಿನಾಶ್, ಸಾಧುಕೋಕಿಲಾ, ರಮೇಶ್‌ಭಟ್, ಮಿತ್ರ ರಂಗಾಯಣ ರಘು, ಸುಧಾಬೆಳವಾಡಿ ಮುಂತಾದವರಿದ್ದಾರೆ. (ಏಜೆನ್ಸೀಸ್)

  English summary
  Golden Star Ganesh latest film Romeo Promotion held in Gulbarga. Actro Ganesh said that Romeo would be a complete commercial entertainer. Ganesh is pairing up the delicate beauty Bhavana in this one.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X