»   » ಪೂಜಾಗಾಂಧಿಯನ್ನ ಎತ್ತಿದ ಗಣೇಶ್ ಈಗ ಮತ್ತೆ ರೆಡಿ!

ಪೂಜಾಗಾಂಧಿಯನ್ನ ಎತ್ತಿದ ಗಣೇಶ್ ಈಗ ಮತ್ತೆ ರೆಡಿ!

By: ಜೀವನರಸಿಕ
Subscribe to Filmibeat Kannada

ನಾವು, ನೀವು ಗೋಲ್ಡನ್ ಸ್ಟಾರ್ ಗಣೇಶ್ ರನ್ನ ಗುಂಡಾಡಿ ಗುಂಡನ ಹಾಗೆ ನೋಡಿರ್ತೀವಿ. ಮಸಲ್ ಮ್ಯಾನ್ ಆಗದೆ ಬಯಲು ಸೀಮೆ ಸೀಬೇಹಣ್ಣಿನ ತರಹ ಇರೋ ಗಣೇಶ್ ಇತ್ತೀಚೆಗೆ ಫಿಟ್ ಅಂಡ್ ಫೈನ್ ಆಗೋ ಮನಸ್ಸು ಮಾಡಿದ್ದಾರೆ. ಕನ್ನಡದ ಹೊಸ ಹೊಸ ಹುಡುಗರೆಲ್ಲಾ ಸಿಕ್ಸ್ ಪ್ಯಾಕ್ ಬಾಡಿ ಬಿಲ್ಡ್ ಮಾಡ್ತಾ ಇರೋವಾಗ ನಾನೂ ಯಾಕಾಗ ಬಾರದು ಅಂತ ಬಾಡಿ ಬಿಲ್ಡ್ ಮಾಡೋಕೆ ಹೊರಟಿದ್ದಾರೆ.

ಗಣೇಶ್ ಮಾಡೋ ಪಾತ್ರಗಳು ಇಲ್ಲೆ ಎಲ್ಲೋ ಮಲ್ಲೇಶ್ವರಂನಿಂದ ಮೆಜೆಸ್ಟಿಕ್ ಹೋಗುವಾಗ ಬಸ್ಸಲ್ಲಿ ಸಿಕ್ಕೋ ಕಾಲೇಜು ಹುಡುಗನೊಬ್ಬನ ತರಹದ ಪಕ್ಕದ್ಮನೆ ಹುಡುಗನ ಪಾತ್ರಗಳು. ಅದಕ್ಕೆಲ್ಲಾ ಯಾಕ್ ಬೇಕು ಸಿಕ್ಸ್ ಪ್ಯಾಕ್, ಬಾಡಿ ಬಿಲ್ಡಿಂಗ್ ಅಂತ ತಲೆಕೆಡಿಸಿಕೊಂಡಿರಲಿಲ್ಲ ಗೋಲ್ಡನ್ ಸ್ಟಾರ್.

ಆದರೆ ಈಗ ಜಿಮ್ಮಲ್ಲಿ ಸಿಕ್ಕಾಪಟ್ಟೆ ಬೆವರು ಸುರಿಸ್ತಿದ್ದಾರೆ. ಗಣೇಶ್ ಟ್ರೈನರ್ ಹೇಳಿದಂತೆ ಕೇಳ್ತಾ ಪ್ರತೀ ದೀನವೂ ಹಾರ್ಡ್ ವರ್ಕ್ ಮಾಡ್ತಿದ್ದಾರೆ. 'ದಿಲ್ ರಂಗೀಲಾ' ಸಿನಿಮಾಗಾಗಿ ಗಣೇಶ್ ಬಾಡಿಯನ್ನ ಹುರಿಮಾಡಿದ್ದಾರೆ. ಗಣೇಶ್ ಸಿಕ್ಸ್ ಪ್ಯಾಕ್ ಬಾಡಿ ಬಿಲ್ಡಿಂಗ್ ಝಲಕ್ ಸ್ಲೈಡ್ ನಲ್ಲಿ ನೋಡಿ. [ಗಣೇಶ್ 'ದಿಲ್ ರಂಗೀಲಾ' ಗೀತೆಗೆ ರು.35 ಲಕ್ಷ]

ದಿಲ್ ರಂಗೀಲಾದಲ್ಲಿ ಗಣೇಶ್ ಭರ್ಜರಿ ಬಾಡಿ

ಗಣೇಶ್ ಬಾಡಿಯನ್ನ ಹೇಗೆ ಬಿಲ್ಡ್ ಮಾಡಿದ್ದಾರೆ ಅನ್ನೋದು ನಿಮಗೆ ಈ ವಾರ (ಮಾರ್ಚ್ 7ಕ್ಕೆ) ತೆರೆಗೆ ಬರಲಿರೋ 'ದಿಲ್ ರಂಗೀಲಾ' ಸಿನಿಮಾದಲ್ಲಿ ಗೊತ್ತಾಗಲಿದೆ.

ದಿಲ್ ರಂಗೀಲಾಗೆ ಗಣೇಶ್ ಫಿಟ್ ಅಂಡ್ ಫೈನ್

ಇಲ್ಲಿಯರೆಗೂ ಫಿಟ್ ಅಂಡ್ ಫೈನ್ ಬಾಡಿಯ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದಿದ್ದ ಗಣೇಶ್ ಅವರು ದಿಲ್ ರಂಗೀಲಾ ಸಿನಿಮಾಗೆ ದಿಲ್ದಾರ್ ಆಗಿ ಎಕ್ಸರ್ಸೈಸ್ ಮಾಡಿದ್ದಾರೆ.

ಕೇಜಿಗಟ್ಟಲೇ ಬಾರ ಎತ್ತುತ್ತಾರೆ ಈ ರೋಮಿಯೋ

ಮುಂಗಾರುಮಳೆಯಲ್ಲಿ ಪೂಜಾಗಾಂಧಿಯನ್ನ ಎತ್ತಿದ ಮೇಲೆ ಬಹುಶಃ ಇಷ್ಟು ಭಾರವನ್ನ ಗಣೇಶ್ ಎತ್ತಿಲ್ಲ. ದೊಡ್ಡ ದೊಡ್ಡ ಡಂಬಲ್ ಗಳನ್ನ ಎತ್ತಿ ಬೈಸೆಪ್ಸ್ ಗಾಗಿ ಶ್ರಮಪಟ್ಟಿದ್ದಾರೆ.

ದಿನಾ ಜಿಮ್ ಗೆ ಹೋಗೋದನ್ನ ಮಿಸ್ ಮಾಡಲ್ಲ

ಮೊದಲೆಲ್ಲ ಗಣೇಶ್ ಜಿಮ್ ಬಗ್ಗೆ ಯೋಚನೆ ಮಾಡಿದವರಲ್ಲ. ಈಗ ಗೋಲ್ಡನ್ ಸ್ಟಾರ್ ಜಿಮ್ ಗೆ ಹೋಗೀನೇ ಉಳಿದ ಕೆಲಸಗಳನ್ನ ಶುರುಮಾಡೋದು.

ಸುಸ್ತಾದ್ರು ಶಿಸ್ತಾಗಿ ಜಿಮ್ ಮಾಡ್ತಾರೆ

ಗಣೇಶ್ ಅಂದರೆ ಸದಾ ಸಿಂಪಲ್ಲಾಗಿರೋ ಹುಡುಗ, ಪಕ್ಕದ್ಮನೆ ಹುಡುಗನ ಸ್ಟೈಲ್ ನಲ್ಲೇ ಕಾಣಿಸಿಕೊಳ್ಳೋ ಗಣೇಶ್ ಈಗ ಮೈಕಟ್ಟನ್ನ ಕಟ್ಟುಮಸ್ತಾಗಿ ಮಾಡಿಕೊಳ್ತಿದ್ದಾರೆ. ಜಿಮ್ ನಲ್ಲಿ ಸುಸ್ತಾದ್ರೂ ತಲೆ ಕೆಡಿಸಿಕೊಳ್ಳಲ್ಲವಂತೆ.

ಸಿಕ್ಸ್ ಪ್ಯಾಕ್ ಮಾಡೋಕೆ ಹೊರಟಿದ್ದಾರಾ ಗಣೇಶ್

ಗಣೇಶ್ ಸಿಕ್ಸ್ ಪ್ಯಾಕ್ ಮಾಡ್ತಿದ್ದಾರಾ ಏನೋ ಗೊತ್ತಿಲ್ಲ. ಆದರೆ ದಿಲ್ ರಂಗೀಲಾ ಸಿನಿಮಾಗಾಗಿ ಬಾಡಿಬಿಲ್ಡ್ ಮಾಡಿದ ಗಣೇಶ್ ಮುಂದಕ್ಕೂ ಅದನ್ನ ಕಂಟಿನ್ಯೂ ಮಾಡಿ ಸ್ವಲ್ಪ ಡಯಟ್ ಮಾಡಿದ್ರೆ ಸಿಕ್ಸ್ ಪ್ಯಾಕ್ ಫಿಕ್ಸ್.

ಎಂ ಡಿ ಶ್ರೀಧರ್ ಸಿನಿಮಾಗೆ ನಡೀತಿದ್ಯಾ ತಯಾರಿ

ಗಣೇಶ್ ಮುಂದಿನ ಸಿನಿಮಾ ಎಂ ಡಿ ಶ್ರೀಧರ್ ಜೊತೆಗೆ ಅನ್ನೋದು ಸುದ್ದಿಯಾಗಿದೆ. ಆ ಸಿನಿಮಾಗೇನಾದ್ರೂ ಗೋಲ್ಡನ್ ಸ್ಟಾರ್ ಸಿಕ್ಸ್ ಪ್ಯಾಕ್ ಹುಡುಗನಾಗ್ತಾರಾ ಕಾದುನೋಡ್ಬೇಕು.

English summary
Golden Star Ganesh's 'Dil Rangeela' releases on 7th March all over Karnataka. Ganesh is playing the role of lover boy, and will even flaunt his six pack abs in the movie directed by Preetham Gubbi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada