For Quick Alerts
  ALLOW NOTIFICATIONS  
  For Daily Alerts

  Triple Riding Trailer: ಲವ್, ಫನ್, ಸಸ್ಪೆನ್ಸ್, ಎಮೋಷನಲ್ ರೈಡ್

  |

  ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ತ್ರಿಬಲ್ ರೈಡಿಂಗ್' ಸಿನಿಮಾ ಅಫೀಷಿಯಲ್ ಟ್ರೈಲರ್ ರಿಲೀಸ್ ಆಗಿದೆ. ಲವ್, ಕಾಮಿಡಿ, ಎಮೋಷನ್ ಮಿಕ್ಸ್ ಮಾಡಿ ಮಹೇಶ್ ಗೌಡ ಸಿನಿಮಾ ಕಟ್ಟಿಕೊಟ್ಟಿದ್ದಾರೆ. 'ಗಾಳಿಪಟ - 2' ನಂತರ ಗಣಿ ಮತ್ತೊಂದು ಸಕ್ಸಸ್ ನಿರೀಕ್ಷೆಯಲ್ಲಿದ್ದಾರೆ.

  ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್‌ಗೆ ನಾಯಕಿಯರಾಗಿ ಒಬ್ಬರಲ್ಲ ಇಬ್ಬರಲ್ಲ ಮೂವರು ಸಾಥ್ ಕೊಟ್ಟಿದ್ದಾತೆ. ಅದಿತಿ ಪ್ರಭುದೇವ, ಮೇಘಾ ಶೆಟ್ಟಿ, ರಚನಾ ಇಂದರ್ ನಾಯಕಿಯರಾಗಿ ಮಿಂಚಿದ್ದಾರೆ. ಸಾಧು ಕೋಕಿಲ, ರವಿಶಂಕರ್, ಶರತ್ ಲೋಹಿತಾಶ್ವ, ರಂಗಾಯಣ ರಘು,ಅಚ್ಚುತ್ ಕುಮಾರ್, ಶೋಭರಾಜ್, ಕುರಿ ಪ್ರತಾಪ್ ಸೇರಿದಂತೆ ದೊಡ್ಡ ಕಲಾವಿದರ ದಂಡೇ ಸಿನಿಮಾದಲ್ಲಿದೆ. ರಾಮ್‌ ಗೋಪಾಲ್ ವೈ ಎಂ 'ತ್ರಿಬಲ್ ರೈಡಿಂಗ್' ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಾಯಿ ಕಾರ್ತಿಕ್ ಬಿಜಿಎಂ ಹಿನ್ನಲೆಯಲ್ಲಿ ಚಿತ್ರತಂಡ ಟ್ರೈಲರ್ ಕಟ್ ಮಾಡಿದೆ.

  'ತ್ರಿಬಲ್ ರೈಡಿಂಗ್' ಮಾಡ್ತಾನೇ ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಅಂತ ಹೆಜ್ಜೆ ಹಾಕಿದ 'ಗೋಲ್ಡನ್ ಸ್ಟಾರ್'!'ತ್ರಿಬಲ್ ರೈಡಿಂಗ್' ಮಾಡ್ತಾನೇ ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಅಂತ ಹೆಜ್ಜೆ ಹಾಕಿದ 'ಗೋಲ್ಡನ್ ಸ್ಟಾರ್'!

  ಒಂದೊಂದೇ ಸಾಂಗ್ ರಿಲೀಸ್ ಮಾಡಿ ಸಿನಿಮಾ ಬಗ್ಗೆ ಕುತೂಹಲ ಮೂಡಿಸಿದ್ದ ಚಿತ್ರತಂಡ ಈಗ ಟ್ರೈಲರ್ ರಿಲೀಸ್ ಮಾಡಿ ಗಮನ ಸೆಳೆದಿದೆ. ಮುಂದಿನ ವಾರ ಈ ರೊಮ್ಯಾಂಟಿಕ್ ಕಾಮಿಡಿ ಎಂಟರ್‌ಟೈನರ್ ಸಿನಿಮಾ ತೆರೆಗೆ ಬರಲಿದೆ.

  ಡಾ. ರಾಮ್ 4 ಲವ್‌ಸ್ಟೋರಿಗಳು

  ಡಾ. ರಾಮ್ 4 ಲವ್‌ಸ್ಟೋರಿಗಳು

  'ತ್ರಿಬಲ್ ರೈಡಿಂಗ್' ಚಿತ್ರದಲ್ಲಿ ಗಣಿ ಮತ್ತೊಮ್ಮೆ ಸ್ಥೆತಸ್ಕೋಪ್ ಹಿಡಿದು ಡಾಕ್ಟರ್ ರಾಮ್ ಎನ್ನುವ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಒಬ್ಬರಲ್ಲ ಇಬ್ಬರಲ್ಲ 3 ಹುಡುಗಿಯರು ಡಾ. ರಾಮ್ ಹಿಂದೆ ಬೀಳುತ್ತಾರೆ. ಯಾರ ಕಥೆ ಏನು? ಕೊನೆಗೆ ರಾಮ್ ಯಾರಿಗೆ ಸಿಗುತ್ತಾನೆ ಎನ್ನುವುದು ಸಿನಿಮಾ ಕತೆ. ಎಲ್ಲಾ ಕಮರ್ಷಿಯಲ್ ಎಲಿಮೆಂಟ್ಸ್ ಸೇರಿಸಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.

  ಲವ್, ಫನ್, ಸಸ್ಪೆನ್ಸ್, ಎಮೋಷನಲ್ ರೈಡ್

  ಲವ್, ಫನ್, ಸಸ್ಪೆನ್ಸ್, ಎಮೋಷನಲ್ ರೈಡ್

  ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳಿಗೇ ಹೇಳಿ ಮಾಡಿಸಿದ ಸಿನಿಮಾ 'ತ್ರಿಬಲ್ ರೈಡಿಂಗ್'. ಲವ್, ಕಾಮಿಡಿ, ಸಸ್ಪೆನ್ಸ್, ಆಕ್ಷನ್ ಜೊತೆಗೆ ಎಮೋಷನಲ್ ಅಂಶಗಳನ್ನು ಸೇರಿಸಿ ಈ ಲವ್ ಸ್ಟೋರಿ ಹೇಳಲಾಗಿದೆ. ಗಣೇಶ್ ಎಂದಿನ ತಮ್ಮ ಲವಲವಿಕೆಯ ಅಭಿನಯದಿಂದ ಮೋಡಿ ಮಾಡುವ ಸುಳಿವು ಸಿಗುತ್ತಿದೆ. ಎಮೋಷನಲ್ ಸನ್ನಿವೇಶಗಳಲ್ಲಿ ಕೊಂಚ ಹೆಚ್ಚೇ ಸ್ಕೋರ್ ಮಾಡುವಂತೆ ಕಾಣುತ್ತಿದೆ.

  ಚಿತ್ರದಲ್ಲಿ 3 ನಾಯಕಿಯರು

  ಚಿತ್ರದಲ್ಲಿ 3 ನಾಯಕಿಯರು

  ಚಿತ್ರದಲ್ಲಿ ಅದಿತಿ ಪ್ರಭುದೇವ, ಮೇಘಾ ಶೆಟ್ಟಿ, ರಚನಾ ಇಂದರ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಕಿರುತೆರೆಯ 'ಜೊತೆ ಜೊತೆಯಲಿ' ಧಾರಾವಾಹಿಯ ಅನು ಪಾತ್ರದಿಂದ ಮನೆ ಮಾತಾಗಿರುವ ಮೇಘಾ ಶೆಟ್ಟಿಗೆ ಚಿತ್ರದಲ್ಲಿ ಹೆಚ್ಚು ಅವಕಾಶ ಸಿಕ್ಕಿದಂತೆ ಕಾಣುತ್ತಿದೆ. ಶ್ರೀಮಂತರ ಮನೆಯ ಹುಡುಗಿಯಾಗಿ ಅದಿತಿ ಮಿಂಚಿದ್ರೆ, 'ಲವ್ ಮಾಕ್ಟೇಲ್' ಚಿತ್ರದ ಹೆಂಗೆ ನಾವು ಡೈಲಾಗ್ ಖ್ಯಾತಿಯ ರಚನಾ ಮತ್ತೊಮ್ಮೆ ತಮ್ಮ ಚಿನಕುರಳಿ ಡೈಲಾಗ್‌ಗಳಿಂದ ಪ್ರೇಕ್ಷಕರ ಮನಗೆಲ್ಲುವ ಸಾಧ್ಯತೆ ಇದೆ.

  ಮುಂದಿನ ವಾರ ಗಣಿ 'ತ್ರಿಬಲ್ ರೈಡಿಂಗ್'

  ಮುಂದಿನ ವಾರ ಗಣಿ 'ತ್ರಿಬಲ್ ರೈಡಿಂಗ್'

  ಪೊಲೀಸ್ ಆಫೀಸರ್ ಪಾತ್ರದಲ್ಲಿ ಆರ್ಮುಗ ರವಿಶಂಕರ್ ಅಬ್ಬರಿಸಿದ್ದಾರೆ. ಕುರಿ ಪ್ರತಾಪ್, ಸಾಧು ಕೋಕಿಲ ನಗಿಸುವ ಕಾಯಕ ಮಾಡುತ್ತಿದ್ದಾರೆ. ಜೈ ಆನಂದ್ ಛಾಯಾಗ್ರಹಣ ಚಿತ್ರಕ್ಕಿದೆ. ಮುಂದಿನ ವಾರ ರಾಜ್ಯಾದ್ಯಂತ 'ತ್ರಿಬಲ್ ರೈಡಿಂಗ್' ಸಿನಿಮಾ ತೆರೆಗೆ ಬರ್ತಿದೆ. ಗಣಿ ಅಭಿಮಾನಿಗಳಿಗೆ ಟ್ರೈಲರ್ ಇಷ್ಟವಾಗಿದೆ. ಸಿನಿಮಾ ಹೇಗಿರುತ್ತದೋ ಕಾದು ನೋಡಬೇಕು.

  English summary
  Golden Star Ganesh Starrer Triple Riding Trailer Released. Movie Releasing On November 25th. Bankrolled by Ramgopal, Tribble Riding has Sai Kartheek composing the music. Know More.
  Wednesday, November 16, 2022, 20:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X