For Quick Alerts
  ALLOW NOTIFICATIONS  
  For Daily Alerts

  ಅಣ್ಣಾವ್ರ ಹುಟ್ಟುಹಬ್ಬವನ್ನ ಸಂಭ್ರಮಿಸುತ್ತಿರುವ ಗೂಗಲ್

  By Bharathkumar
  |

  ಇಂದು (ಏಪ್ರಿಲ್ 24) ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬ. ನಾಡಿನಾದ್ಯಂತ ಅಭಿಮಾನಿಗಳು ಅವರ ಜನ್ಮದಿನವನ್ನು ಆಚರಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಜಾಲತಾಣಗಳ ದೈತ್ಯ ಸಂಸ್ಥೆ ಸರ್ಚ್ ಇಂಜಿನ್ ಗೂಗಲ್, ಸುಂದರವಾದ ಡೂಡಲ್ ಮೂಲಕ ಬಂಗಾರದ ಮನುಷ್ಯನಿಗೆ ವಿಶೇಷ ಗೌರವ ಅರ್ಪಿಸಿದೆ.[ಜನರಿಂದ ಮನ್ನಣೆ ಪಡೆದ ಡಾ.ರಾಜ್ ಜನರಿಗೆ ಕೊಟ್ಟಿದ್ದೇನು?]

  'ಗೂಗಲ್‌ ಡೂಡಲ್'ನಲ್ಲಿ ತುಂಬಿರುವ ಚಿತ್ರಮಂದಿರ ಜೊತೆ ದೊಡ್ಡ ಪರದೆಯ ಮೇಲೆ ಡಾ.ರಾಜ್‌ಕುಮಾರ್ ಅವರು ನಗೆ ಬೀರುತ್ತಿದ್ದಾರೆ. ಅಣ್ಣಾವ್ರ ಹಿಂದೆ ತಿಳಿ ನೀಲಿ ಬಣ್ಣದಲ್ಲಿ 'ಗೂಗಲ್‌' ಎಂದು ಕಾಣಿಸುತ್ತಿದೆ.[ಅಣ್ಣಾವ್ರು ನನ್ನ ಪಾದ ಮುಟ್ಟಿದ ಆ ಕ್ಷಣ ನಾ ಮರೆಯುಲಾರೆ]

  ಸರ್ಚ್ ಇಂಜಿನ್ ಗೂಗಲ್‌ ಪ್ರಪಂಚದ ಗಣ್ಯ ವ್ಯಕ್ತಿಗಳು, ಶ್ರೇಷ್ಠ ನಾಯಕರು, ನಟರು ಸ್ಮರಣಾರ್ಥ ಹಾಗೂ ವಿಶೇಷ ದಿನಗಳಂದು ಈ ರೀತಿ ವಿಶೇಷ ಚಿತ್ರಗಳನ್ನು ಪ್ರಕಟಿಸುವ ಮೂಲಕ ಗೌರವ ಸೂಚಿಸುತ್ತದೆ. ಇದೀಗ ಡಾ.ರಾಜ್ ಕುಮಾರ್ ಗೂ ಗೂಗಲ್‌ ಡೂಡಲ್ ಮೂಲಕ ವಿಶೇಷ ಗೌರವ ಸೂಚಿಸಿದೆ.['ಗೋಕಾಕ್ ಚಳವಳಿ' ವೇಳೆ ಕನ್ನಡಿಗರಿಗಾಗಿ ಪತ್ರ ಬರೆದಿದ್ದ ಡಾ.ರಾಜ್]

  ಈ ಡೂಡಲ್ ಮೇಲೆ ಕ್ಲಿಕ್ ಮಾಡಿದರೆ, ಡಾ.ರಾಜ್ ಕುಮಾರ್ ಹಾಗೂ ಅವರಿಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡಬಹುದಾದ ಲಿಂಕ್ ಗಳ ಪುಟ ತೆರೆದುಕೊಳ್ಳುತ್ತದೆ. ಈ ಮೂಲಕ ಇಂದಿನ ದಿನವನ್ನ ಕನ್ನಡದ ಮೇರು ನಟನಿಗಾಗಿ ಗೂಗಲ್ ಸಂಸ್ಥೆ ಮುಡಿಪಾಗಿಟ್ಟಿದೆ ಎಂಬುದು ಕನ್ನಡ ಚಿತ್ರರಂಗಕ್ಕೆ ಸಂತಸದ ವಿಚಾರ.

  English summary
  Today’s (24 April) Google Doodle marks the 88th birthday of late Kannada actor Rajkumar. Born on 24 April, 1929, as Singanalluru Puttaswamayya Muthuraju in Gajanur, the Kannada icon used the screen name Rajkumar and was also fondly called Appaji, among several other nicknames.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X