For Quick Alerts
  ALLOW NOTIFICATIONS  
  For Daily Alerts

  'ರಾಬರ್ಟ್' ಟೀಸರ್ ಯಶಸ್ಸಿನ ಹಿಂದಿರುವ ಈ ಗೌತಮ್ ರಾಜ್ ಯಾರು?

  |
  ಡಿ ಬಾಸ್ ಗೆ ಇಷ್ಟವಾದ ಈ ಗೌತಮ್ ರಾಜ್ ಯಾರು..?

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ ರಾಬರ್ಟ್ ಸಿನಿಮಾ ಟೀಸರ್ ರಿಲೀಸ್ ಮಾಡಿ ಟ್ರೆಂಡ್ ಹುಟ್ಟುಹಾಕಿದೆ. ಡಿ ಬಾಸ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಗಿದ್ದ ಟೀಸರ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

  ಯ್ಯೂಟ್ಯೂಬ್ ನಲ್ಲಿ 2 ಮಿಲಿಯನ್ ಗೂ ಅಧಿಕ ವೀಕ್ಷಣೆ ಕಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡ್ತಿದೆ. ತರುಣ್ ಸುಧೀರ್ ನಿರ್ದೇಶನ ಈ ಚಿತ್ರದಲ್ಲಿ ಕೆಎಂ ಪ್ರಕಾಶ್ ಸಂಕಲನವಿದೆ. ಆದರೆ, ರಾಬರ್ಟ್ ಟೀಸರ್ ಕಟ್ ಮಾಡಿರುವುದು ಗೌತಮ್ ರಾಜ್. ರಾಬರ್ಟ್ ಟೀಸರ್ ಕಟ್ ಮಾಡಿ ಸದ್ದು ಮಾಡ್ತಿರುವ ಈ ಗೌತಮ್ ಯಾರು? ಮುಂದೆ ಓದಿ...

  ರಾಬರ್ಟ್ ಟೀಸರ್ ಕಟ್ ಮಾಡಿದ್ದು ಗೌತಮ್ ರಾಜ್

  ರಾಬರ್ಟ್ ಟೀಸರ್ ಕಟ್ ಮಾಡಿದ್ದು ಗೌತಮ್ ರಾಜ್

  ಡಿ ಬಾಸ್ ನಟನೆ ರಾಬರ್ಟ್ ಟೀಸರ್ ಬಿಡುಗಡೆಯಾಗಿ ಭರ್ಜರಿ ಸದ್ದು ಮಾಡ್ತಿದೆ. ಇಂತಹ ಸ್ಟೈಲಿಶ್ ಟೀಸರ್ ಕಟ್ ಮಾಡಿರುವುದು ಗೌತಮ್ ರಾಜ್ (ಸಿಂಗಲ್ ಫ್ರೆಮ್ ಸ್ಟುಡಿಯೋ). ತರುಣ್ ಸುಧೀರ್ ಅವರ ಹಲವು ಪ್ರಾಜೆಕ್ಟ್ ಗಳಲ್ಲಿ ಗೌತಮ್ ಕೆಲಸ ಮಾಡಿದ್ದಾರೆ. ಅವರ ಕೆಲಸ ನೋಡಿಯೇ ರಾಬರ್ಟ್ ಟೀಸರ್ ಕಟ್ ಗೂ ಅವಕಾಶ ಸಿಕ್ಕಿದೆ. ''ನನ್ನ ಇಂದಿನ ಬೆಳವಣಿಗೆಗೆ ತರುಣ್ ಸುಧೀರ್ ಅವರೇ ಕಾರಣ. ನನ್ನ ಪ್ರತಿ ಕೆಲಸವನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ, ಅವರಿಗೆ ನನ್ನ ಮೊದಲ ಥ್ಯಾಂಕ್ಸ್'' ಎನ್ನುತ್ತಾರೆ ಗೌತಮ್.

  ಡಿ ಬಾಸ್ ಬರ್ತಡೇ 'ರಾಬರ್ಟ್' ನಾಯಕಿಗೂ ವಿಶೇಷವಾಗಿತ್ತು ಏಕೆ?

  ಸೆಕೆಂಡ್ ಲುಕ್ ಆದ್ಮೇಲೆ ಟೀಸರ್ ಗೆ ಪ್ಲಾನ್

  ಸೆಕೆಂಡ್ ಲುಕ್ ಆದ್ಮೇಲೆ ಟೀಸರ್ ಗೆ ಪ್ಲಾನ್

  ರಾಬರ್ಟ್ ಚಿತ್ರದ ಮೊದಲ ಮೋಷನ್ ಪೋಸ್ಟರ್ ಮತ್ತು ಎರಡನೇ ಮೋಷನ್ ಪೋಸ್ಟರ್ ಮಾಡಿದ್ದು ಇದೇ ಗೌತಮ್ ರಾಜ್. ''ಆಂಜನೇಯನ ಅವತಾರದ ಲುಕ್ ಬಳಿಕ ಟೀಸರ್ ಕಟ್ ಗೆ ರೆಡಿ ಆಗು ಎಂದು ತರುಣ್ ಸರ್ ಆದಾಗಲೇ ಹೇಳಿದರು. ಅಲ್ಲಿಂದ ರಾಬರ್ಟ್ ಟೀಸರ್ ಹೇಗಿರಬೇಕು, ಹೇಗೆ ಕಟ್ ಮಾಡಬೇಕು ಎಂಬ ಐಡಿಯಾ ಮಾಡಿ, ಅದಕ್ಕೊಂದು ಕಾನ್ಸೆಪ್ಟ್ ರೆಡಿ ಮಾಡಿ ಕೊನೆಗೆ ಈ ಟೀಸರ್ ಮಾಡಿದ್ವಿ'' ಎಂದು ಫಿಲ್ಮಿಬೀಟ್ ಕನ್ನಡ ಜೊತೆ ಖುಷಿ ಹಂಚಿಕೊಂಡಿದ್ದಾರೆ.

  ಯಜಮಾನ ಪೋಸ್ಟರ್ ಮಾಡಿದ್ದು ಇವರೇ

  ಯಜಮಾನ ಪೋಸ್ಟರ್ ಮಾಡಿದ್ದು ಇವರೇ

  ಈ ಹಿಂದೆ ತರುಣ್ ಸುಧೀರ್ ಮತ್ತು ನಂದಕಿಶೋರ್ ಅವರ ಪ್ರಾಜೆಕ್ಟ್ ಗಳಲ್ಲಿ ಗೌತಮ್ ಕೆಲಸ ಮಾಡಿದ್ದಾರೆ. ಅಧ್ಯಕ್ಷ ಇನ್ ಅಮೆರಿಕಾ, ಟೈಗರ್, ವಿಕ್ಟರಿ-2, ನೆನಪಿರಲಿ ಪ್ರೇಮ್ ನಟನೆಯ ಪ್ರೇಮಂ ಪೂಜ್ಯಂ, ಬಿಚ್ಚುಗತ್ತಿ, ಖಾಕಿ, ತಮಿಳು ಸಿನಿಮಾ ಮಾಳಿಗೈ ಇನ್ನು ಸಾಹಸ ನಿರ್ದೇಶಕ ಪೀಟರ್ ಹೇನ್ ನಿರ್ದೇಶನದ ಇಂಗ್ಲಿಷ್ ಚಿತ್ರ 'ಸಂಹೋಯಿ'ಗೂ ಗೌತಮ್ ಕೆಲಸ ಮಾಡಿದ್ದಾರೆ. ಕಳೆದ ವರ್ಷ ಬಂದ ಯಜಮಾನ ಸಿನಿಮಾದ ಮೋಷನ್ ಪೋಸ್ಟರ್ ಮಾಡಿದ್ದು ಕೂಡ ಇದೇ ಗೌತಮ್. 'ಯಜಮಾನ ಪೋಸ್ಟರ್ ಅಷ್ಟು ದೊಡ್ಡ ಸಕ್ಸಸ್ ಆಗಲು ನಿರ್ದೇಶಕ ಹರಿಕೃಷ್ಣ ಮತ್ತು ನಿರ್ಮಾಪಕಿ ಶೈಲಜಾ ನಾಗ್ ಸಪೋರ್ಟ್ ಕಾರಣ' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

  ವಿಡಿಯೋ: ಈ 'ರಾಬರ್ಟ್' ರಾಮನೂ ಹೌದು.. ರಾವಣನೂ ಹೌದು..

  ಯಜಮಾನಕ್ಕಿಂತ ಮೇಲೆ ರಾಬರ್ಟ್!

  ಯಜಮಾನಕ್ಕಿಂತ ಮೇಲೆ ರಾಬರ್ಟ್!

  ''ಮೊದಲಿನಿಂದಲೂ ತರುಣ್ ಸುಧೀರ್ ಮತ್ತು ನಂದಕಿಶೋರ್ ಅವರ ಬಳಿ ನಾನು ಕೆಲಸ ಮಾಡ್ತಿದ್ದೀನಿ. ಅವರ ಪ್ರಾಜೆಕ್ಟ್ ಗಳಲ್ಲಿ ನಾನು ಕೆಲಸ ಮಾಡ್ತೀನಿ. ಯಜಮಾನ ಮೋಷನ್ ಪೋಸ್ಟರ್ ಮಾಡಿದ್ಮೇಲೆ ಅದಕ್ಕೂ ಮೇಲೆ ರಾಬರ್ಟ್ ಇರಬೇಕು ಎಂಬುದು ನಮ್ಮ ಗಮನದಲ್ಲಿತ್ತು. ಅದಕ್ಕೆ ತಕ್ಕ ಕಾನ್ಸೆಪ್ಟ್ ಮಾಡಿ ಕೆಲಸ ಮಾಡಿದ್ದೀವಿ. ರಾಬರ್ಟ್ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಚೆನ್ನಾಗಿ ಬಂತು. ಆಂಜನೇಯನ ಗೆಟಪ್ ಸೆಕೆಂಡ್ ಲುಕ್ ತುಂಬಾ ಚಾಲೆಂಜಿಂಗ್ ಆಗಿತ್ತು. ಈಗ ಟೀಸರ್ ಅಂದುಕೊಂಡಂತೆ ಬಂದಿದೆ'' ಎಂದು ತಿಳಿಸಿದ್ದಾರೆ.

  'ರಾಬರ್ಟ್'ನಲ್ಲಿ ಮೈಸೂರು ಹುಡುಗಿ: ಯಾರೀ ಸುಂದರಿ?

  ಗೌತಮ್ ರಾಜ್ ಕುರಿತು

  ಗೌತಮ್ ರಾಜ್ ಕುರಿತು

  ಪತ್ರಿಕೋದ್ಯಮದಲ್ಲಿ ಪದವಿ ಪಡೆದುಕೊಂಡಿರುವ ಗೌತಮ್ ರಾಜ್, ನಂತರ ಖಾಸಗಿ ಟಿವಿ ವಾಹಿನಿಯಲ್ಲಿ ಕೆಲಸ ಮಾಡಿದ್ದಾರೆ. ಬಳಿಕ ಸಿನಿಮಾ ಇಂಡಸ್ಟ್ರಿ ಪ್ರವೇಶಿಸಿ ಸಿನಿಮಾಗಳ ಪ್ರಮೋಷನ್ ಕಂಟೆಂಟ್ ಗೆ ಸಂಬಂಧಪಟ್ಟಂತೆ ಎಡಿಟಿಂಗ್ ಕೆಲಸ ಮಾಡ್ತಿದ್ದಾರೆ. ಟೈಟಲ್ ಆನಿಮೇಷನ್, ಮೋಷನ್ ಪೋಸ್ಟರ್, ಲಿರಿಕಲ್ ವಿಡಿಯೋ, ಟೀಸರ್, ಟ್ರೈಲರ್, ಟೈಟಲ್ ಕಾರ್ಡ್ ಗೆ ಸಂಬಂಧ ಪಟ್ಟಂತ ಕೆಲಸಗಳನ್ನು ಗೌತಮ್ ರಾಜ್ (ಸಿಂಗಲ್ ಫ್ರೇಮ್ ಸ್ಟುಡಿಯೋ) ಮಾಡ್ತಿದ್ದಾರೆ.

  English summary
  Challenging star darshan starrer Robert movie teaser has released and its creating mazic in industry. goutham raj is the real person behind the robert movie teaser success.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X