»   » ಅರ್ಧ ಸೆಂಚುರಿ ಮಾಡ್ಬಿಟ್ಟೈತೆ ಗೋವಿಂದಾಯ ನಮಃ

ಅರ್ಧ ಸೆಂಚುರಿ ಮಾಡ್ಬಿಟ್ಟೈತೆ ಗೋವಿಂದಾಯ ನಮಃ

Posted By:
Subscribe to Filmibeat Kannada

ಕೋಮಲ್ ಚಿತ್ರ ಅರ್ಧ ಸೆಂಚುರಿ ಮಾಡ್ಬಿಟ್ಟೈತೆ ಗೋವಿಂದ! ಇದೇ ಶುಕ್ರವಾರಕ್ಕೆ (ಮೇ 18) ಕೋಮಲ್ ಅಭಿನಯದ 'ಗೋವಿಂದಾಯ ನಮಃ' ಚಿತ್ರ ಯಶಸ್ವಿ ಐವತ್ತು ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಭಾರಿ ಬಜೆಟ್ ಚಿತ್ರಗಳಾದ 'ಅಣ್ಣಾಬಾಂಡ್' ಹಾಗೂ 'ಕಠಾರಿವೀರ ಸುರಸುಂದರಾಂಗಿ' ಚಿತ್ರಗಳ ತೀವ್ರ ಸ್ಪರ್ಧೆಯ ನಡುವೆಯೂ ಗೋವಿಂದ ಮುನ್ನುಗ್ಗಿರುವುದು ವಿಶೇಷ.

ಬೆಂಗಳೂರಿನ ತ್ರಿವೇಣಿ ಚಿತ್ರ ಸೇರಿದಂತೆ ರಾಜ್ಯದಾದ್ಯಂತ 30 ಚಿತ್ರಮಂದಿರಗಳಲ್ಲಿ ಗೋವಿಂದ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದಾನೆ. ಪವನ್ ಒಡೆಯರ್ ನಿರ್ದೇಶನದ ಚೊಚ್ಚಲ ಚಿತ್ರ ಬಾಕ್ಸಾಫೀಸ್ ಗಳಿಕೆಯಲ್ಲೂ ಸದ್ದು ಮಾಡಿದ್ದಾನೆ. ಮೂಲಗಳ ಪ್ರಕಾರ ಐವತ್ತು ದಿನಗಳಲ್ಲಿ ಎಂಟು ಕೋಟಿ ಬಾಚಿದ್ದಾನೆ ಗೋವಿಂದ.

ಕೇವಲ ಕರ್ನಾಟದಕದಲ್ಲಷ್ಟೇ ಅಲ್ಲದೆ ಹೊರ ರಾಜ್ಯಗಳಲ್ಲೂ ಗೋವಿಂದ ಪ್ಯಾರ್‌ಗೆ ಆಗ್ಬಿಟ್ಟವ್ನೆ. ದೆಹಲಿ, ಗೋವಾ, ಹೈದರಾಬಾದ್ ಸೇರಿದಂತೆ ಮುಂಬೈ ಹಾಗೂ ಚೆನ್ನೈನ ಪಿವಿಆರ್‌ಗಳಲ್ಲಿ ಗೋವಿಂದನಿಗೆ ಒಳ್ಳೆಯ ಕಲೆಕ್ಷನ್ ಆಗಿದೆ ಎನ್ನುತ್ತವೆ ಮೂಲಗಳು. 'ಗೋವಿಂದಾಯ ನಮಃ' ಚಿತ್ರ ಕಳ್ಳತನ ಆರೋಪಕ್ಕೂ ಗುರಿಯಾಗಿತ್ತು. ಗೋವಿಂದಾಯ ನಮಃ ಚಿತ್ರ ವಿಮರ್ಶೆ ಓದಿ. (ಒನ್‌ಇಂಡಿಯಾ ಕನ್ನಡ)

English summary
Kannada comedy actor Komal Kumar lead Kannada film Govindaya Namaha completes 50 days and running successfully all over Karnataka. The movie showing successfully Bangalore Triveni and 30 other theaters in Karnataka said the producer Suresh.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada