twitter
    For Quick Alerts
    ALLOW NOTIFICATIONS  
    For Daily Alerts

    ಶಾಲಾ ಮಕ್ಕಳಿಗೆ 'ವಿಕ್ರಾಂತ್ ರೋಣ' ಪೈರಸಿ ಸಿನಿಮಾ ತೋರಿಸಿದ ವಾರ್ಡನ್; ಚಿತ್ರತಂಡ ಆಕ್ರೋಶ

    |

    ವಿಶ್ವದಾದ್ಯಂತ 'ವಿಕ್ರಾಂತ್ ರೋಣ' ಬಾಕ್ಸಾಫೀಸ್‌ ಶೇಕ್ ಮಾಡ್ತಿದ್ದು, ಪೈರಸಿ ಕಾಟವೂ ಚಿತ್ರತಂಡಕ್ಕೆ ಬೇಸರ ಮೂಡಿಸಿದೆ. ಇದೀಗ ಮುಳಬಾಗಿಲು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅಲ್ಲಿನ ವಾರ್ಡನ್ ಪೈರಸಿ ಸಿನಿಮಾ ತೋರಿಸಿರುವುದು ಬೆಳಕಿಗೆ ಬಂದಿದೆ. ಈ ವಿಚಾರಕ್ಕೆ ಸಂಬಂಧಿಸಿ ನಿರ್ಮಾಪಕರು ಕಾನೂನು ಹೋರಾಟಕ್ಕೆ ಚಿಂತನೆ ನಡೆಸಿದ್ದಾರೆ.

    ಅನೂಪ್ ಭಂಡಾರಿ ನಿರ್ದೇಶನದ ಸಿನಿಮಾ ದೇಶ ವಿದೇಶಗಳಲ್ಲಿ ಭರ್ಜರಿ ಸೌಂಡ್ ಮಾಡ್ತಿದ್ದು, ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿದೆ. ಕಿಚ್ಚ ಸುದೀಪ್ ಆರ್ಭಟಕ್ಕೆ ಪ್ರೇಕ್ಷಕರು ಫಿದಾ ಆಗಿದ್ದು, ಫ್ಯಾಮಿಲಿ ಸಮೇತ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಇದೆಲ್ಲದರ ನಡುವೆ ಆನ್‌ಲೈನ್‌ನಲ್ಲಿ ಸಿನಿಮಾ ಸೋರಿಕೆಯಾಗಿ ಸಿನಿಮಾ ಕಲೆಕ್ಷನ್‌ಗೆ ಪೆಟ್ಟು ಕೊಟ್ಟಿದೆ. ಚಿತ್ರತಂಡ ಎಷ್ಟೇ ಎಚ್ಚರಿಕೆ ವಹಿಸಿದ್ರು, ಪೈರಸಿಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ.

    ಇಂತಹ ಸಿನಿಮಾ ಮಾಡೋಕೆ ಧೈರ್ಯ ಬೇಕು ಎಂದ ಜಕ್ಕಣ್ಣ: 'ವಿಕ್ರಾಂತ್ ರೋಣ'ದಲ್ಲಿ ಇಷ್ಟ ಆಗಿದ್ದೇನು?ಇಂತಹ ಸಿನಿಮಾ ಮಾಡೋಕೆ ಧೈರ್ಯ ಬೇಕು ಎಂದ ಜಕ್ಕಣ್ಣ: 'ವಿಕ್ರಾಂತ್ ರೋಣ'ದಲ್ಲಿ ಇಷ್ಟ ಆಗಿದ್ದೇನು?

    ಚಿತ್ರದ ಥಿಯೇಟರ್‌ ಪ್ರಿಂಟ್‌ಗಳು ಆನ್‌ಲೈನ್‌ನಲ್ಲಿ ಹರಿದಾಡ್ತಿದ್ದು, ಪ್ರೇಕ್ಷಕರು ಮಾತ್ರ ಬಿಗ್‌ ಸ್ಕ್ರೀನ್‌ನಲ್ಲೇ ಅಸಲಿ ಮಜಾ ಅನುಭವಿಸಬೇಕು ಅಂತ ಥಿಯೇಟರ್‌ಗೆ ಹೋಗುತ್ತಿದ್ದಾರೆ. ಇದೆಲ್ಲದರ ನಡುವೆ ಮುಳಬಾಗಿಲು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅಲ್ಲಿನ ವಾರ್ಡನ್‌ 'ವಿಕ್ರಾಂತ್ ರೋಣ' ಸಿನಿಮಾ ಪೈರಸಿ ಪ್ರಿಂಟ್ ಪ್ರದರ್ಶಿಸಿರುವ ಬಗ್ಗೆ ವರದಿಯಾಗಿದೆ. ಈ ವಿಚಾರ ಚಿತ್ರತಂಡದ ಬೇಸರಕ್ಕೆ ಕಾರಣವಾಗಿದ್ದು, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಚಿತ್ರದ ನಿರ್ಮಾಪಕ ಜಾಕ್ ಮಂಜು ಹೇಳಿದ್ದಾರೆ.

     ಶಾಲೆಯಲ್ಲಿ 'ವಿಕ್ರಾಂತ್ ರೋಣ' ಪೈರಸಿ ಸಿನಿಮಾ

    ಶಾಲೆಯಲ್ಲಿ 'ವಿಕ್ರಾಂತ್ ರೋಣ' ಪೈರಸಿ ಸಿನಿಮಾ

    ಮುಳಬಾಗಿಲಿನ ಮೂರಾರ್ಜಿ ಸ್ಕೂಲ್ ಕುತಂಡ್ಲಹಳ್ಳಿಯಲ್ಲಿ ಈ ಕೃತ್ಯ ನಡೆದಿರುವುದಾಗಿ ಹೇಳಲಾಗುತ್ತಿದೆ. ಅದಕ್ಕೆ ಸಂಬಂಧಿಸಿದ ಫೋಟೊಗಳು, ವಿಡಿಯೋಗಳು ಹರಿದಾಡ್ತಿದೆ. ಮಕ್ಕಳಿಗೆ ಪೈರಸಿಯಲ್ಲಿ 'ವಿಕ್ರಾಂತ್ ರೋಣ' ಸಿನಿಮಾ ತೋರಿಸಿದ್ದಕ್ಕೆ ಆಕ್ರೋಶ ವ್ಯಕ್ತವಾಗ್ತಿದ್ದು, ಕಾರಣರಾದವರಿಗೆ ಬುದ್ಧಿ ಕಲಿಸುವುದಾಗಿ ಸುದೀಪ್ ಅಭಿಮಾನಿಗಳು ಹೇಳುತ್ತಿದ್ದಾರೆ.

    'ವಿಕ್ರಾಂತ್ ರೋಣ' ಮುಂದೆ ಅಂಗಾತ ಮಲಗಿದ 'ರಾಮಾ ರಾವ್' & 'ಏಕ್ ವಿಲನ್'!'ವಿಕ್ರಾಂತ್ ರೋಣ' ಮುಂದೆ ಅಂಗಾತ ಮಲಗಿದ 'ರಾಮಾ ರಾವ್' & 'ಏಕ್ ವಿಲನ್'!

     3 ದಿನದ ಕಲೆಕ್ಷನ್ 80 ಕೋಟಿ

    3 ದಿನದ ಕಲೆಕ್ಷನ್ 80 ಕೋಟಿ

    ಗುರುವಾರವೇ ರಿಲೀಸ್ ಆಗಿರೋ 'ವಿಕ್ರಾಂತ್ ರೋಣ' ಚಿತ್ರಕ್ಕೆ ದೊಡ್ಡ ವೀಕೆಂಡ್ ಕಲೆಕ್ಷನ್ ಪ್ಲಸ್ ಆಗಲಿದೆ. ಮೊದಲ 3 ದಿನಕ್ಕೆ 80 ಕೋಟಿ. ರೂಗೂ ಅಧಿಕ ಕಲೆಕ್ಷನ್ ಮಾಡಿ ರೋಣ ಮುನ್ನುಗ್ಗುತ್ತಿದ್ದಾನೆ. ಇವತ್ತು ಭಾನುವಾರ ದೊಡ್ಡಮಟ್ಟದ ಕಲೆಕ್ಷನ್ ನಿರೀಕ್ಷೆ ಮಾಡಲಾಗುತ್ತಿದೆ.

     'ವಿಕ್ರಾಂತ್ ರೋಣ' ಚಿತ್ರಕ್ಕೆ ಮೌಳಿ ಬಹುಪರಾಕ್

    'ವಿಕ್ರಾಂತ್ ರೋಣ' ಚಿತ್ರಕ್ಕೆ ಮೌಳಿ ಬಹುಪರಾಕ್

    'ವಿಕ್ರಾಂತ್ ರೋಣ' ಸಿನಿಮಾ ನೋಡಿ ಟ್ವೀಟ್ ಮಾಡಿರುವ ನಿರ್ದೇಶಕ ರಾಜಮೌಳಿ "ಸಿನಿಮಾ ಯಶಸ್ಸು ಕಂಡಿದ್ದಕ್ಕೆ ಅಭಿನಂದನೆಗಳು. ಇಂತಹ ಎಳೆಯನ್ನು ಸಿನಿಮಾ ಮಾಡುವುದಕ್ಕೆ ಧೈರ್ಯ ಹಾಗೂ ನಂಬಿಕೆ ಎರಡೂ ಬೇಕು. ನೀವು ಅದನ್ನು ಮಾಡಿದ್ರಿ, ಅದಕ್ಕೆ ಬೆಲೆ ಸಿಕ್ಕಿದೆ. ಸಿನಿಮಾದ ಪ್ರೀ ಕ್ಲೈಮ್ಯಾಕ್ಸ್ ಹೃದಯವಿದ್ದಂತೆ. ಅದು ಬರುತ್ತೆ ಎಂದು ನಾವು ಅಂದುಕೊಂಡಿರಲಿಲ್ಲ. ಆದರೂ ಅದು ಅದ್ಭುತವಾಗಿದೆ. ಭಾಸ್ಕರ್ ಪಾತ್ರದ ಬಗ್ಗೆ ವಿಶೇಷವಾಗಿ ಹೇಳಲೇಬೇಕು" ಎಂದು ರಾಜಮೌಳಿ ಬರೆದುಕೊಂಡಿದ್ದಾರೆ.

     ಫಸ್ಟ್‌ ವೀಕೆಂಡ್‌ನಲ್ಲಿ 100 ಕೋಟಿ ರೂ. ಗಳಿಕೆ

    ಫಸ್ಟ್‌ ವೀಕೆಂಡ್‌ನಲ್ಲಿ 100 ಕೋಟಿ ರೂ. ಗಳಿಕೆ

    ಗುರುವಾರ, ಶುಕ್ರವಾರ, ಶನಿವಾರ ಸೇರಿ 80 ಕೋಟಿ ಗಳಿಸಿರೋ ಸಿನಿಮಾ ಫಸ್ಟ್‌ ವೀಕೆಂಡ್‌ನಲ್ಲಿ 100 ಕೋಟಿ ರೂ. ಗಳಿಕೆ ಕಂಡಿರುವ ಸುಳಿವು ಸಿಗುತ್ತಿದೆ. ಹಿಂದಿ ಬೆಲ್ಟ್ ಹಾಗೂ ಆಂಧ್ರ, ತೆಲಂಗಾಣದಲ್ಲಿ 'ಕೆಜಿಎಫ್‌- 2' ನಂತರ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಅನ್ನುವ ಹೆಗ್ಗಳಿಕೆಗೆ 'ವಿಕ್ರಾಂತ್ ರೋಣ' ಪಾತ್ರವಾಗಿದೆ.

    English summary
    Govt School Warden Showed Children To Vikrant Rona Piracy Copy. Know More.
    Monday, August 1, 2022, 8:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X