Don't Miss!
- News
ಸನಾತನ ಧರ್ಮ ಭಾರತದ ರಾಷ್ಟ್ರೀಯ ಧರ್ಮ: ಯೋಗಿ ಆದಿತ್ಯನಾಥ್ ಮತ್ತೆ ವಿವಾದ
- Finance
ವಿಶ್ವದ ಶ್ರೀಮಂತ ವ್ಯಕ್ತಿ: 3ರಿಂದ 7ನೇ ಸ್ಥಾನಕ್ಕೆ ಇಳಿದ ಅದಾನಿ, ಹೂಡಿಕೆದಾರರ ನಂಬಿಕೆ ಗಳಿಸುವಲ್ಲಿ ಸೋತರೇ?
- Technology
ಜಿಯೋಗೆ ಸೆಡ್ಡು ಹೊಡೆಯುತ್ತಿದೆಯಾ ಏರ್ಟೆಲ್; ಜಿಯೋ ಸೇವೆ ಬೇಡ ಎಂದವರ ಸಂಖ್ಯೆ ಎಷ್ಟು ಗೊತ್ತಾ!?
- Sports
ನಾವು ಆಡುವುದನ್ನು ನೋಡಲು ಜನ ಬಂದಿಲ್ಲ: ಆತನಿಗಾಗಿ ಜನ ಬಂದಿದ್ದಾರೆ ಎಂದ ನ್ಯೂಜಿಲೆಂಡ್ ಕ್ರಿಕೆಟಿಗ
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿನಯ್ ರಾಜ್ ಕುಮಾರ್ ಹುಟ್ಟುಹಬ್ಬದ ಸಂಭ್ರಮ: 'ಗ್ರಾಮಾಯಣ'ದ ಟೀಸರ್ ಉಡುಗೊರೆ
ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ನಟ ವಿನಯ್ ರಾಜ್ ಕುಮಾರ್ ಅಭಿನಯದ 'ಗ್ರಾಮಾಯಣ' ಚಿತ್ರದ ಎರಡನೆಯ ಟೀಸರ್ ಬಿಡುಗಡೆಯಾಗಿದೆ. ಕುತೂಹಲಕಾರಿ ದೃಶ್ಯಗಳು ಹಾಗೂ ಗಮನ ಸೆಳೆಯುವ ಛಾಯಾಗ್ರಹಣ ಇರುವ 'ಗ್ರಾಮಾಯಣ' ಈಗಾಗಲೇ ಸಾಕಷ್ಟು ಮೆಚ್ಚುಗೆಗೆ ಒಳಗಾಗಿದೆ.
ದೇವನೂರು ಚಂದ್ರು ನಿರ್ದೇಶನದ ಚಿತ್ರದಲ್ಲಿ ವಿನಯ್ ರಾಜ್ ಕುಮಾರ್, ಅಮೃತಾ ಅಯ್ಯರ್, ಸಂಪತ್ ಕುಮಾರ್, ಧರ್ಮಣ್ಣ ಮುಂತಾದವರು ನಟಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ, ಅಭಿಷೇಕ್ ಕಾಸರಗೋಡು ಛಾಯಾಗ್ರಹಣ ಇದೆ.
ಬಾಕ್ಸಿಂಗ್
ಅಖಾಡಕ್ಕೆ
ಇಳಿದ
ವಿನಯ್
ಮುಂದಿನ
ಚಿತ್ರಕ್ಕೆ
ಟೈಟಲ್
ಫಿಕ್ಸ್
ಹಳ್ಳಿಯ ಬದುಕಿನ ಚಿತ್ರಣ ಟೀಸರ್‌ನಲ್ಲಿದೆ. ಹಳ್ಳಿಯೊಂದರಲ್ಲಿ ನಡೆಯುವ ಕಥೆಯನ್ನು ಇದು ಒಳಗೊಂಡಿದೆ ಎಂಬುದನ್ನು ಶೀರ್ಷಿಕೆಯೇ ಹೇಳುತ್ತದೆ. ಹಾಗೆಯೇ ಟೀಸರ್‌ನಲ್ಲಿನ ದೃಶ್ಯಗಳು ಹೊಸತನದ ಕಥೆಯ ನಿರೀಕ್ಷೆ ಮೂಡಿಸುತ್ತದೆ.

ಟೀಸರ್‌ನಲ್ಲಿ ಒಂದೇ ಡೈಲಾಗ್
ಎರಡನೆಯ ಟೀಸರ್‌ನಲ್ಲಿ ಇರುವುದು ಒಂದೇ ಒಂದು ಡೈಲಾಗ್. 'ಬದುಕು ಬಗ್ಗಿಸ್ಕೊಂಡ ಅ ಆ ಇ ಕಲಿಸಕ್ಕಿಂತ ಮುಂಚೆ. ನಾವೇ ಕೆಡುಕೊಂಡು ಕಾಗುಣಿತ ಕಲಿಸಬೇಕು' ಎಂಬ ಡೈಲಾಗ್ ಈಗಾಗಲೇ ವೈರಲ್ ಆಗಿದೆ. ಉಳಿದಂತೆ ಟೀಸರ್‌ನಲ್ಲಿ ಪುಟ್ಟದೊಂದು ಫೈಟ್ ದೃಶ್ಯವಿದೆ. ಟೀಸರ್ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ಸರಳ ಆಚರಣೆ
ವಿನಯ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬ ಅದ್ಧೂರಿಯಾಗಿ ನಡೆಯುತ್ತಿಲ್ಲ. ಲಾಕ್ ಡೌನ್ ಕಾರಣದಿಂದ ಸರಳವಾಗಿ ಅವರು ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ಅವರಿಗೆ ಇದೇನೂ ಹೊಸತಲ್ಲ. ಈ ಹಿಂದೆಯೂ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರಿಂದ ಈ ಸಮಯದಲ್ಲಿ ಯಾವುದೇ ವ್ಯತ್ಯಾಸದ ಅನುಭವ ಅವರಿಗಾಗಿಲ್ಲ.
ವಿನಯ್
ರಾಜ್
ಕುಮಾರ್
ಸಿನಿಮಾಗೆ
ತಾತನ
ಚಿತ್ರದ
ಟೈಟಲ್

ನಮಗೆ ವರ್ಕ್ ಫ್ರಂ ಹೋಮ್ ಇಲ್ಲ!
ಕಲಾವಿದರಿಗೆ ವರ್ಕ್ ಫ್ರಂ ಹೋಮ್ ಎಂಬ ಸೌಲಭ್ಯ ಇರುವುದಿಲ್ಲ. ಕೆಲಸದ ಜಾಗದಲ್ಲಿ ಮಾತ್ರವೇ ನಾವು ಕೆಲಸ ಮಾಡಬೇಕಾಗುತ್ತದೆ. ಚಿತ್ರೀಕರಣದ ಬಳಿಕ ಸಿನಿಮಾದ ಅನೇಕ ಕೆಲಸಗಳು ಒಳಾಂಗಣದಲ್ಲಿ ನಡೆಯುತ್ತವೆ. ಆದರೆ ಹೊರಾಂಗಣದ ಚಿತ್ರೀಕರಣವೇ ಮುಖ್ಯ ಎಂದು ಹೇಳಿದ್ದಾರೆ.

ಗೆಟಪ್ ಕಾಪಾಡಿಕೊಳ್ಳಬೇಕು
ಒಂದು ಸಿನಿಮಾ ಎಂದಾಗ ನಟರು ಅದಕ್ಕಾಗಿ ಒಂದು ನಿರ್ದಿಷ್ಟ ಗೆಟಪ್ ಹೊಂದಿರಬೇಕು. ಆ ಗೆಟಪ್ ಬೆಳೆಸುವುದಕ್ಕೆ ಅರ್ಧದಷ್ಟು ಶ್ರಮ ಹಾಕಬೇಕು. ಚಿತ್ರೀಕರಣ ಆರಂಭವಾದಾಗಿನಿಂದ ಅದನ್ನು ಮುಗಿಯುವವರೆಗೂ ಆ ಗೆಟಪ್ ಉಳಿಸಿಕೊಳ್ಳುವುದು ಕೂಡ ಅನಿವಾರ್ಯ. ಚಿತ್ರೀಕರಣಕ್ಕೆ 3-4 ತಿಂಗಳು ತೆಗೆದುಕೊಳ್ಳಬಹುದು. ಈಗ ಶೇ 50ರಷ್ಟು ಚಿತ್ರೀಕರಣ ಮುಕ್ತಾಯವಾಗಿದೆ. ಉಳಿದ ಚಿತ್ರೀಕರಣ ಆರಂಭವಾಗಿ ಮುಗಿಯುವವರೆಗೂ ಆ ಲುಕ್ ಕಾಪಾಡಿಕೊಳ್ಳಬೇಕು ಎಂದು ಹೇಳಿಕೊಂಡಿದ್ದಾರೆ.