twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಸಿನಿ ಸಂಗೀತಕ್ಕೆ ಸೇವೆ ಸಲ್ಲಿಸಿದ ದಿಗ್ಗಜ ಗಾಯಕರು ಇವರು..

    By Suneel
    |

    ಸಂಗೀತಕ್ಕೆ ಮನಸೋಲದ ಮರುಳಾಗದ ಜೀವಿ ಈ ಜಗತ್ತಿನಲ್ಲಿಲ್ಲ. ಸಂಗೀತಕ್ಕೆ ತಲೆಬಾಗದವರು ಯಾರು ಇಲ್ಲ. ಸಂಗೀತ ಎಂಬ ಪದ ಕೇಳಿದರೆ ಏನೋ ಒಂದು ಹರುಷ, ಸ್ಫೂರ್ತಿ ಪಡೆಯುವ ಅಸಂಖ್ಯಾತ ಮನಸ್ಸುಗಳು ಈ ಪ್ರಪಂಚದಲ್ಲಿವೆ.

    ಸಂಗೀತದ ಬಗ್ಗೆ ಇಷ್ಟೊಂದು ಪೀಠಿಕೆ ಏಕೆ ಎಂಬ ಪ್ರಶ್ನೆ ಹಲವರಲ್ಲಿ ಮೂಡಬಹುದು. ಕಾರಣ ಇಂದು 'ವಿಶ್ವ ಯೋಗ ದಿನ' ಮಾತ್ರವಲ್ಲದೇ 'ವಿಶ್ವ ಸಂಗೀತ ದಿನ'. ಸಂಗೀತವನ್ನು ಗಾಂಧರ್ವವೇದ ಎನ್ನಲಾಗುತ್ತದೆ. ಗಂಧರ್ವರ ವಿದ್ಯೆಯಾದ ಸಂಗೀತ ಕೇಳಿದರೆ ಕಲ್ಲು ಕೂಡ ಕರಗುತ್ತದೆ ಎಂಬ ಮಾತುಗಳಿವೆ.

    ದಿನ ನಿತ್ಯ ಸಂಗೀತ ಕೇಳುವುದರಿಂದ ಮನಸ್ಸು ಮತ್ತು ಮೆದುಳು ಎರಡರ ಹಿಡಿತ ಸಾಧ್ಯ. ಅಲ್ಲದೇ ವ್ಯಕ್ತಿಯ ವಿಕಸನ ಸಾಧ್ಯ. ಸಂಗೀತಕ್ಕೆ ಬಿಸಿಲಿನ ಬೇಗೆಯಲ್ಲಿ ನಿಂತವನತ್ತ ತಂಗಾಳಿ ಬೀಸಿದ ಅನುಭವ ಕೊಡುವ ಶಕ್ತಿ ಇದೆ. ಕನ್ನಡ ಭಾಷೆಯಲ್ಲಿ ಆದಿ ಕಾಲದಿಂದಲೂ ಸಂಗೀತ ಕ್ಷೇತ್ರಕ್ಕೆ ಹಲವರು ಸೇವೆ ಸಲ್ಲಿಸಿದ್ದಾರೆ. ಇಂದು 'ವಿಶ್ವ ಸಂಗೀತ ದಿನ' ಪ್ರಯುಕ್ತ ಹಾಗೆ ಒಮ್ಮೆ ನಮ್ಮ ಕನ್ನಡ ಸಿನಿ ಸಂಗೀತ ಕ್ಷೇತ್ರಕ್ಕೆ ಅಗಾಧ ಸೇವೆ ಸಲ್ಲಿಸಿದವರು ಯಾರು? ಎಂದು ಒಮ್ಮೆ ಯೋಚಿಸಿದರೆ ಹಲವರು ಸಂಗೀತ ಪ್ರೇಮಿಗಳ ಕಣ್ಣ ಮುಂದೆ ಬಂದು ಹೋಗುತ್ತಾರೆ.

    ಆದರೆ ಅತ್ಯುನ್ನತ ಸ್ಥಾನದಲ್ಲಿ ಮನದಲ್ಲಿ ಉಳಿಯುವ ಗಾಯಕರು ಯಾರು ಎಂದು ಕೇಳಿದರೆ ಬಹುಶಃ ಗೊಂದಲ ಉಂಟಾಗಬಹುದು. ಆದ್ದರಿಂದ ಇಂದು ಕನ್ನಡ ಸಿನಿ ಸಂಗೀತ ಕ್ಷೇತ್ರಕ್ಕೆ ತಮ್ಮ ಮಧುರ ಧ್ವನಿ ಮೂಲಕ ಸೇವೆ ಸಲ್ಲಿಸಿದ, ತಮ್ಮ ಕಂಚಿನ ಕಂಠದ ಹಾಡನ್ನು ಸದಾ ಕೇಳುವಂತೆ ಮಾಡಿದ ಗಾಯಕರು ಯಾರು ಎಂದು ಇಂದು ತಿಳಿಸುತ್ತಿದ್ದೇವೆ. ಮುಂದೆ ಓದಿರಿ.

    ಎಸ್ ಪಿ ಬಾಲಸುಬ್ರಹ್ಮಣ್ಯಂ

    ಎಸ್ ಪಿ ಬಾಲಸುಬ್ರಹ್ಮಣ್ಯಂ

    ಗಾನ ಗಂಧರ್ವ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ರವರು ಗಾಯಕರಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದವರು. ಹಿನ್ನೆಲೆ ಗಾಯಕರಾಗಿ 1966 ರ ಡಿಸೆಂಬರ್ 15 ರಂದು ತೆಲುಗು ಚಿತ್ರವೊಂದಕ್ಕೆ ಹಾಡುವ ಮೂಲಕ ಗಾಯಕರಾಗಿ ಹೊರಹೊಮ್ಮಿದ್ದರು. ಆದರೆ ಇವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಾಯಕರಾಗಿ ಗುರುತಿಸಿಕೊಂಡಿದ್ದು 1980 ರ 'ಶಂಕರಾಭರಣಂ' ಚಿತ್ರದ ಮೂಲಕ. ಇವರ ಕನ್ನಡ ಸಿನಿ ಸಂಗೀತ ಸೇವೆ 1967 ರಲ್ಲಿ ತೆರೆಕಂಡ 'ನಕ್ಕರೆ ಅದೇ ಸ್ವರ್ಗ' ಚಿತ್ರದ ಮೂಲಕ ಅಧಿಕೃತವಾಗಿ ಆರಂಭವಾಯಿತು. ಅಂದಿನಿಂದ 2005 ರ ಶಿವರಾಜ್ ಕುಮಾರ್ 'ಜೋಗಿ' ಚಿತ್ರ ವರೆಗೂ ಇವರು ಹಾಡಿರುವ ಎಲ್ಲಾ ಹಾಡುಗಳು ಸಹ ಹಿರಿಯರು, ಕಿರಿಯರು ಎನ್ನದೇ ಎಲ್ಲರಿಗೂ ಇಂದಿಗೂ ಅಚ್ಚುಮೆಚ್ಚು.

    ಎಸ್. ಜಾನಕಿ

    ಎಸ್. ಜಾನಕಿ

    'ದಕ್ಷಿಣ ಭಾರತದ ಹಾಡುಹಕ್ಕಿ' ಎಂದೇ ಖ್ಯಾತರಾಗಿರುವ ಎಸ್.ಜಾನಕಿ ರವರು 17 ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಕನ್ನಡದಲ್ಲಿ ಇವರು ಮೊದಲು ಹಾಡಿದ್ದು 1957 ರಲ್ಲಿ 'ರಾಯರ ಸೊಸೆ' ಎಂಬ ಚಿತ್ರಕ್ಕೆ. ಕಿರಿಯರಿಂದ ಹಿರಿಯರವರೆಗೆ ಧ್ವನಿ ಬದಲಿಸಿ ಹಾಡುವ ಸಾಮರ್ಥ್ಯ ಹೊಂದಿರುವ ಎಸ್.ಜಾನಕಿ ರವರು ಕನ್ನಡ ಸಿನಿ ಸಂಗೀತ ಕ್ಷೇತ್ರಕ್ಕೆ ಅಗಾಧವಾದ ಕೊಡುಗೆ ನೀಡಿದ್ದಾರೆ.

    ಕೆ.ಜೆ.ಯೇಸುದಾಸ್

    ಕೆ.ಜೆ.ಯೇಸುದಾಸ್

    ಕೇರಳ ಮೂಲದ ಕೆ.ಜೆ.ಯೇಸುದಾಸ್ ರವರು 1961 ಹಿರಿಯ ಗಾಯಕ ಸಂತ ಪಿ ನಾಯರ್ ಎಂಬುವರೊಂದಿಗೆ ಮೊಟ್ಟ ಮೊದಲ ಬಾರಿಗೆ ಚಿತ್ರವೊಂದಕ್ಕೆ ಹಾಡಿದರು. ನಂತರ ಶಾಸ್ತ್ರೀಯ ಸಂಗೀತ, ಭಕ್ತಿಗೀತೆಗಳು. ಸಿನಿಮಾ ಹಾಡುಗಳು ಸೇರಿದಂತೆ ಒಟ್ಟಾರೆ 50 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಭಾರತದ ವಿವಿಧ ಭಾಷೆಗಳಲ್ಲಿ ಹಾಡಿದ್ದಾರೆ. ಕನ್ನಡದಲ್ಲಿ ಹಲವು ದೈವ ಭಕ್ತಿಗೀತೆಗಳನ್ನು ಹಾಡಿದ್ದಾರೆ. ಆರಂಭಿಕವಾಗಿ 'ಗಂಧರ್ವ' ಚಿತ್ರದ ಮೂಲಕ ಕನ್ನಡದಲ್ಲಿ ಗಾಯನ ಆರಂಭಿಸಿದ ಅವರು 'ಕೆಂಪು ಗುಲಾಭಿ', 'ಮಧುರ ಪ್ರೀತಿ', 'ಅಭಿಮನ್ಯು', 'ರಾಮಾಚಾರಿ' ಮುಂತಾದ ಹಲವು ಚಿತ್ರಗಳಲ್ಲಿ ಹಾಡಿದ್ದು ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ.

    ಪಿ. ಸುಶೀಲ

    ಪಿ. ಸುಶೀಲ

    ಕನ್ನಡ ಕೋಗಿಲೆ ಎಂದೇ ಹೆಸರಾದವರು ದಕ್ಷಿಣ ಭಾರತದ ಗಾಯಕಿ 'ಪಿ.ಸುಶೀಲ' ಅಮ್ಮನವರು. ಭಾರತದ ಅಧಿಕ ಭಾಷೆಗಳಲ್ಲಿ ಹಾಡಿರುವ ಇವರ ಹೆಸರು ಗಿನ್ನೀಸ್ ದಾಖಲೆ ಪುಟಕ್ಕೆ ಸೇರ್ಪಡೆಯಾಗಿದೆ. ಕನ್ನಡದಲ್ಲಿ 5 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ಕನ್ನಡ ಸಿನಿ ಸಂಗೀತ ಕ್ಷೇತ್ರಕ್ಕೆ ಗಾನ ಸರಸ್ವತಿ ಸೇವೆ ಸಲ್ಲಿಸಿದ್ದಾರೆ. ಹೆಚ್ಚು ಡ್ಯುಯೆಟ್ ಸಾಂಗ್ ಗಳನ್ನು ಹಾಡಿದ್ದು, ವರನಟ ಡಾ.ರಾಜ್ ಕುಮಾರ್ ಅವರ ಜೊತೆಯೂ ಡ್ಯುಯೆಟ್ ಹಾಡುಗಳನ್ನು ಹಾಡಿದ್ದಾರೆ. ಹಿನ್ನೆಲೆ ಗಾಯಕಿಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಮಹಿಳೆ ಸಹ ಇವರು. ಕನ್ನಡದಲ್ಲಿ ಇವರ 'ಹಾರುತ ದೂರ ದೂರ' ಎಂಬ ಡ್ಯುಯೆಟ್ ಹಾಡನ್ನು ಈಗಲೂ ಹಲವರು ತುಂಬು ಹೃದಯದಿಂದ ಕೇಳಲು ಬಯಸುತ್ತಾರೆ.

    ಸೋನು ನಿಗಮ್

    ಸೋನು ನಿಗಮ್

    ಸೋನು ನಿಗಮ್ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಪ್ರಮುಖವಾಗಿ ಹಾಡುತ್ತಾರೆ. ಅಲ್ಲದೇ ಭಾರತದ ಇತರೆ 10 ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡುವ ಸೋನು ನಿಗಮ್ ಇಂದಿನ ಯುವ ಜನತೆಯ ಪ್ರೀತಿಯ ಹಾಡುಗಾರ. ಕನ್ನಡದಲ್ಲಿ 1996 ರಲ್ಲಿ 'ಜೀವನದಿ' ಚಿತ್ರದ ಮೂಲಕ ಗಾಯನ ಆರಂಭಿಸಿದ ಅವರು ಶಿವರಾಜ್ ಕುಮಾರ್, ದರ್ಶನ್, ಪುನೀತ್ ರಾಜ್ ಕುಮಾರ್, ಸುದೀಪ್, ಗಣೇಶ್ ಮತ್ತು ಉಪೇಂದ್ರ ಸಿನಿಮಾಗಳಿಗೆ ಹೆಚ್ಚು ಹಾಡಿದ್ದಾರೆ. 1999 ರ 'ಸ್ನೇಹಲೋಕ' ಚಿತ್ರದ 'ಟೈಟಾನಿಕ್ ಹೀರೋಯಿನ್' ಹಾಡಿನಿಂದ ಹಿಡಿದು 2017 ರ 'ರಾಜಕುಮಾರ' ಚಿತ್ರದ 'ಸಾಗರದ' ಹಾಡಿನ ವರೆಗೂ ಕನ್ನಡ ಸಿನಿ ಸಂಗೀತ ಕ್ಷೇತ್ರಕ್ಕೆ ಸೂಪರ್ ಹಿಟ್ ಹಾಡುಗಳನ್ನು ಆಡಿದ್ದಾರೆ.

    ರಾಜೇಶ್ ಕೃಷ್ಣನ್

    ರಾಜೇಶ್ ಕೃಷ್ಣನ್

    ಬೆಂಗಳೂರಿಗರೇ ಆದ ರಾಜೇಶ್ ಕೃ‍ಷ್ಣನ್ ಕನ್ನಡಿಗರ ನೆಚ್ಚಿನ ಹಾಗೂ ಹೆಮ್ಮೆಯ ಗಾಯಕ. ಕನ್ನಡದಲ್ಲಿ 3500 ಕ್ಕೂ ಹೆಚ್ಚು ಹಾಡುಗಳನ್ನು ಆಡಿರುವ ರಾಜೇಶ್ ಕೃಷ್ಣನ್ ರವರು ಭಾರತದ ಇತರೆ 15 ಭಾಷೆಗಳಲ್ಲಿ ಆಡಿದ್ದಾರೆ. ಇವರ ಧ್ವನಿಯಲ್ಲಿನ 'ಅಣ್ಣಾವ್ರ ಮಕ್ಕಳು' ಚಿತ್ರದ 'ಹೋಗಬೇಡ ಹುಡುಗಿ ನನ್ನ ಬಿಟ್ಟು', 'ಯಜಮಾನ' ಚಿತ್ರದ 'ಪ್ರೇಮಚಂದ್ರಮ' ಹಾಡು, 'ಸ್ನೇಹಲೋಕ' ಚಿತ್ರದ 'ಒಂದೇ ಉಸಿರಿನಂತೆ' ಹಾಡುಗಳು, 'ನೆನಪಿರಲಿ' ಚಿತ್ರದ ಹಾಡುಗಳು ಈಗಲು ಯುವಕರಿಗೆ ಫೇವರಿಟ್.

    ವಿಜಯ್ ಪ್ರಕಾಶ್

    ವಿಜಯ್ ಪ್ರಕಾಶ್

    ಪ್ರಸ್ತುತ ಸ್ಯಾಂಡಲ್ ವುಡ್ ನಲ್ಲಿ ಸಖತ್ ಟ್ರೆಂಡಿಂಗ್ ಆಗಿರುವ ಮತ್ತು ಪಡ್ಡೆ ಹುಡುಗರ ನೆಚ್ಚಿನ ಗಾಯಕ ವಿಜಯ್ ಪ್ರಕಾಶ್ ರವರು. 1999 ರಲ್ಲಿ ಸೋನು ನಿಗಮ್ ನಿರೂಪಕರಾಗಿದ್ದ 'ಜೀ ಟಿವಿ' 'ಸರಿಗಮ' ಸಂಗೀತ ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಭಾಗವಹಿಸಿ ವಿಜೇತರಾದರು. ಈಗ ಅದೇ ವಿಜಯ್ ಪ್ರಕಾಶ್ 'ಜೀ ಕನ್ನಡ'ದ ಸಂಗೀತ ಕಾರ್ಯಕ್ರಮ 'ಸರಿಗಮಪ' ದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿರುವುದು ನಿಮಗೆಲ್ಲಾ ಗೊತ್ತೇ ಇದೆ. ಅವರ ಈ ಯಶಸ್ಸಿಗೆ ಕಾರಣ ಕನ್ನಡ ಸಿನಿ ಸಂಗೀತಕ್ಕೆ ನೀಡಿದ ಕೊಡುಗೆ. ಕನ್ನಡದಲ್ಲಿ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಹಾಡುಗಳನ್ನು ಆಡುತ್ತಿರುವ ಇವರ ಹಾಡುಗಳಲ್ಲಿ 'ತರ ತರ ಹಿಡಿಸಿದೆ', 'ಏನ್ ಚಂದಾನೇ ಹುಡುಗಿ', 'ಸಾಲುತಿಲ್ಲವೇ', 'ಬೆಳಗೆದ್ದು ಯಾರ ಮುಖವಾ', 'ವಿಕ್ಟರಿ' ಚಿತ್ರದ 'ಖಾಲಿ ಕ್ವಾಟ್ರು', 'ಬೊಂಬೆ ಹೇಳುತೈತೆ' ಹಾಡುಗಳು ಪ್ರತಿಯೊಬ್ಬರ ಕಿವಿಯಲ್ಲಿ ಸದಾ ಗುನುಗುವ ಹಾಡುಗಳು.

    ಶ್ರೇಯಾ ಘೋಷಲ್

    ಶ್ರೇಯಾ ಘೋಷಲ್

    ಶ್ರೇಯಾ ಘೋಷಲ್ ಅತೀ ಚಿಕ್ಕ ವಯಸ್ಸಿಗೆ ಗಾಯಕಿ ಆದವರು. ಭಾರತದಲ್ಲಿ ಇವರ ಧ್ವನಿಯ ಹಾಡುಗಳಿಗೆ ಮನಸೋಲದವರೇ ಇಲ್ಲ. ಕನ್ನಡ ಚಿತ್ರಗಳಿಗೆ 2003 ನೇ ಇಸವಿಯಿಂದ ಆಡಲು ಶುರು ಮಾಡಿದ ಶ್ರೇಯಾ ತಮ್ಮ 'ಲವ್' ಕಾನ್ಸೆಪ್ಟ್ ನ ಮೆಲೋಡಿ ಹಾಡುಗಳಿಂದ ಕನ್ನಡ ಯುವ ಸಂಗೀತ ಪ್ರೇಮಿಗಳ ಮನಸ್ಸು ಕದ್ದವರು. ಇವರ "ಕೃಷ್ಣ ನೀ ಬೇಗನೇ ಬಾರೋ', 'ಉಸಿರಾಗುವೇ ಹಸಿರಾಗುವೇ', 'ಸೇರಿತು ಮನ ಸೇರಿತು', 'ಸಜನಿ' ಚಿತ್ರದ 'ತುರು ತುಂತುರು', 'ಮಿಲನ' ಚಿತ್ರದ 'ಮಳೆ ನಿಂತು ಹೋದ ಮೇಲೆ', ಇತ್ತೀಚಿನ 'ಮಾಸ್ತಿಗುಡಿ' ಚಿತ್ರದ 'ಚಿಪ್ಪಿನೊಳಗಡೆ' ಮತ್ತು ಇತರೆ ಹಲವು ಹಾಡುಗಳು ನೆಚ್ಚಿನ ಹಾಡುಗಳು.

    ಹೆಚ್‌.ಜಿ.ಚೈತ್ರ

    ಹೆಚ್‌.ಜಿ.ಚೈತ್ರ

    ಗಾಯಕಿ ಚೈತ್ರ ರವರು 'ಬೇಡ ಕೃಷ್ಣ ರಂಗಿನಾಟ' ಚಿತ್ರದ ಮೂಲಕ 1993 ರಲ್ಲಿ ಸಂಗೀತ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದವರು. ಆದರೆ ಇವರಿಗೆ ಬಿಗ್ ಬ್ರೇಕ್ ನೀಡಿದ್ದು 'ಅಮೃತಧಾರೆ' ಚಿತ್ರದ 'ಹುಡುಗ ಹುಡುಗ' ಎಂಬ ಹಾಡು. ತಮಿಳು, ತೆಲುಗು ಮಲೆಯಾಳಂ ಭಾಷೆಗಳಲ್ಲಿಯೂ ಖ್ಯಾತ ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡಿರುವ ಚೈತ್ರ ರವರು ಕನ್ನಡದಲ್ಲಿ ವಿಭಿನ್ನ ಹಾಡುಗಳ ಮೂಲಕ ಸಂಗೀತ ಪ್ರೇಮಿಗಳ ಮನಗೆದ್ದಿದ್ದಾರೆ. ಇವರ ಸೇವೆಯು ಸಿನಿ ಸಂಗೀತ ಕ್ಷೇತ್ರಕ್ಕೆ ಅಗಾಧವಾಗಿದೆ. ಇವರು ಹಾಡಿರುವ 'ನೀಲಕಂಠ' ಚಿತ್ರದ 'ಮಲ್ಲ ಮಲ್ಲಾ', 'ಗಜ' ಚಿತ್ರದ 'ಬಂಗಾರಿ ಯಾರೇ ನೀ ಬುಲ್ ಬುಲ್', 'ಅರ್ಜುನ್' ಚಿತ್ರದ 'ಗುಂಟೂರು ಗುಂಟೂರು','ಉಪ್ಪಿ 2' ಚಿತ್ರದ ಇವನ್ಯಾರೋ ಡಿಫರೆಂಟ್', 'ಶಿವ' ಚಿತ್ರದ 'ನೀ ಓಡಿ ಬಂದಾಗ' ಹಾಡುಗಳು ಹೆಚ್ಚು ಜನಪ್ರಿಯ.

    ಅನುರಾಧ ಭಟ್

    ಅನುರಾಧ ಭಟ್

    ಅನುರಾಧ ಭಟ್ ರವರು ಖ್ಯಾತ ಸಂಗೀತ ನಿರ್ದೇಶಕರಾದ ಇಳೆಯರಾಜ್, ಎಂ.ಎಂ. ಕೀರವಾಣಿ, ಹಂಸಲೇಖ, ವಿ. ಹರಿಕೃ‍ಷ್ಣ, ಮನೋ ಮೂರ್ತಿ, ಅರ್ಜುನ್ ಜನ್ಯ ಮತ್ತು ಮುಂತಾದವರೊಂದಿಗೆ ಗಾಯಕಿ ಆಗಿ ಕನ್ನಡದಲ್ಲೇ 1000 ಕ್ಕೂ ಹೆಚ್ಚು ಸಿನಿಮಾಗಳಿಗೆ ಆಡಿದ್ದಾರೆ. ಅಲ್ಲದೇ 5000 ಕ್ಕೂ ಹೆಚ್ಚು ಹಾಡುಗಳನ್ನು 14 ಭಾಷೆಗಳಿಗೆ ಆಡಿದ್ದಾರೆ. 'ಮೀರಾ ಮಾಧವ ರಾಘವ' ಚಿತ್ರಕ್ಕೆ 'ವಸಂತ ವಸಂತ' ಗೀತೆ ಆಡುವ ಮೂಲಕ ಗಾಯಕಿ ಆಗಿ ಅಧಿಕೃತವಾಗಿ ಪರಿಚಿತರಾದ ಅನುರಾಧ ಭಟ್ ರವರು ಕನ್ನಡ ಸಂಗೀತ ಪ್ರೇಮಿಗಳು ಸದಾ ಕೇಳಲು ಇಚ್ಚಿಸುವಂತ ಸೂಪರ್ ಹಿಟ್ ಹಾಡುಗಳನ್ನು ಆಡಿದ್ದಾರೆ. ಅವುಗಳಲ್ಲಿ ಇತ್ತೀಚಿನ 'ಅಪ್ಪಾ ಐ ಲವ್ ಯು ಪ' ಹಾಡು ಒಂದು. ಅಲ್ಲದೇ 'ಮರಳಿ ಮರೆಯಾಗಿ', 'ಜಂಗ್ಲೀ ಶಿವಲಿಂಗೂ', 'ಎಲ್ಲೆಲ್ಲೋ ಓಡುವ ಮನಸೇ', 'ಬೈಟೇ ಬೈಟೇ', 'ಭಜರಂಗಿ' ಚಿತ್ರದ 'ಶ್ರೀಕೃ‍ಷ್ಣ' ಹಾಡು ಅತ್ತುತ್ತಮ ಹಾಡುಗಳು.

    English summary
    Here is the list of Great Singers who served Kannada cinema industry.
    Friday, June 23, 2017, 17:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X