»   » ಕನ್ನಡ ಚಿತ್ರ ಪ್ರಿಯರಿಗೆ 'GST' ಬರೆ : ಸಿನಿಮಾ ಟಿಕೆಟ್ ಇನ್ನಷ್ಟು ಹೊರೆ

ಕನ್ನಡ ಚಿತ್ರ ಪ್ರಿಯರಿಗೆ 'GST' ಬರೆ : ಸಿನಿಮಾ ಟಿಕೆಟ್ ಇನ್ನಷ್ಟು ಹೊರೆ

Posted By:
Subscribe to Filmibeat Kannada

GST (ಸರಕು ಮತ್ತು ಸೇವಾ ತೆರಿಗೆ) ಜುಲೈ1 ರಿಂದ ಇಡೀ ದೇಶದಲ್ಲಿ ಜಾರಿಗೆ ಬರಲಿದೆ. 'GST' ಬರುವುದರಿಂದ ಬಹುತೇಕ ಎಲ್ಲ ಉದ್ಯಮಗಳ ಮೇಲೆ ಪರಿಣಾಮ ಬೀಳಲಿದೆ. ಚಿತ್ರೋದ್ಯಮದಲ್ಲಿ ಸಹ GST ಯಿಂದ ಅನೇಕ ಬದಲಾವಣೆಗಳು ಆಗಲಿದ್ದು, ಮುಖ್ಯವಾಗಿ ಚಿತ್ರಮಂದಿರದ ಟಿಕೆಟ್ ಬೆಲೆ ಹೆಚ್ಚಾಗಲಿದೆ.

GST ಪರಿಣಾಮಗಳ ಬಗ್ಗೆ ನಗರದ ಪ್ರಮುಖ ಚಿತ್ರಮಂದಿರದ ಮಾಲೀಕರು 'ಫಿಲ್ಮಿ ಬೀಟ್ ಕನ್ನಡ'ಕ್ಕೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕ ಫಿಲ್ಮ್ ಚೆಂಬರ್ ಮಾಜಿ ಅಧ್ಯಕ್ಷರು ಮತ್ತು ವಿರೇಶ್ ಚಿತ್ರಮಂದಿರದ ಮಾಲೀಕರಾದ ಕೆ.ವಿ.ಚಂದ್ರಶೇಖರ್ 'ಜಿ ಎಸ್ ಟಿ' ಪರಿಣಾಮಗಳ ಬಗ್ಗೆ ವಿವರಗಳನ್ನು ಹಂಚಿಕೊಂಡಿದ್ದಾರೆ.

'ಒಂದು ದೇಶ ಒಂದು ತೆರಿಗೆ' ಅಂತ ಬರುತ್ತಿರುವ 'ಜೆಎಸ್ ಟಿ' ಯಿಂದ ಚಿತ್ರಮಂದಿರಗಳ ಮೇಲೆ ಆಗುವ ಬದಲಾವಣೆಗಳ ಬಗ್ಗೆ ಒಂದಷ್ಟು ವಿವರ ಮುಂದಿದೆ ಓದಿ...

ಟಿಕೆಟ್ ಬೆಲೆ ಹೆಚ್ಚು

''ಜಿ ಎಸ್ ಟಿ ಬರುವುದರಿಂದ ಸಾಮಾನ್ಯವಾಗಿಯೇ ಟಿಕೆಟ್ ಬೆಲೆ ಹೆಚ್ಚಾಗುತ್ತದೆ. ಮುಖ್ಯವಾಗಿ ಕನ್ನಡ ಸಿನಿಮಾದ ಟಿಕೆಟ್ ಬೆಲೆ 5 ರಿಂದ 10 ರೂಪಾಯಿ ಹೆಚ್ಚಾಗಬಹುದು'' - ಕೆ.ವಿ.ಚಂದ್ರಶೇಖರ್, ಫಿಲ್ಮ್ ಚೆಂಬರ್ ಮಾಜಿ ಅಧ್ಯಕ್ಷ.

'GST' ಬಳಿಕ ಕನ್ನಡ ಚಿತ್ರರಂಗದ ಲಾಭ ನಷ್ಟದ ಲೆಕ್ಕಾಚಾರ

ಪರಭಾಷೆಗೆ ಅನುಕೂಲ

''ಇದುವರೆಗೆ ಬೇರೆ ಭಾಷೆಯ ಸಿನಿಮಾದ ಮೇಲಿನ ತೆರಿಗೆ 30% ಇತ್ತು. ಆದರೆ ಈಗ ಅದು 28%ಗೆ ಇಳಿದಿದೆ. ಇದರಿಂದ ಇತರ ಭಾಷೆಯ ಸಿನಿಮಾದ ಟಿಕೆಟ್ ಬೆಲೆ ಕಡಿಮೆಯಾಗಬಹುದು ಅಥವಾ ಟಿಕೆಟ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗದೇ ಇರಬಹುದು'' - ಕೆ.ವಿ.ಚಂದ್ರಶೇಖರ್, ಫಿಲ್ಮ್ ಚೆಂಬರ್ ಮಾಜಿ ಅಧ್ಯಕ್ಷ.

ಪ್ರೇಕ್ಷಕರಿಗೆ ಹೊರೆ

''ಕನ್ನಡ ಸಿನಿಮಾಗಳಿಗೆ ಇಷ್ಟು ದಿನ ತೆರಿಗೆ ಇರಲಿಲ್ಲ. ಈಗ ತೆರಿಗೆ ಬಂದಿದ್ದರಿಂದ ಪ್ರೇಕ್ಷಕರಿಗೆ ಆ ಹೊರೆ ಆಗುತ್ತದೆ. ಒಂದು ವೇಳೆ ಪ್ರೇಕ್ಷಕ ತೆರಿಗೆ ಕೊಡುವುದಿಲ್ಲ ಅಂದರೆ, ಚಿತ್ರಮಂದಿರದ ಮಾಲೀಕರು ತಮ್ಮ ವರಮಾನವನ್ನು ಕಡಿಮೆ ಮಾಡಿಕೊಂಡು ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳಬೇಕಾಗುತ್ತದೆ'' - ಕೆ.ವಿ.ಚಂದ್ರಶೇಖರ್, ಫಿಲ್ಮ್ ಚೆಂಬರ್ ಮಾಜಿ ಅಧ್ಯಕ್ಷ.

ಅಷ್ಟೇನೂ ನಷ್ಟ ಆಗುವುದಿಲ್ಲ

''ಆನ್ ಲೈನ್ ಮೂಲಕ ಈಗಾಗಲೇ ನಮ್ಮ 'ವಿರೇಶ್' ಸೇರಿದಂತೆ ಅನೇಕ ಚಿತ್ರಮಂದಿರಗಳು ತೆರಿಗೆ ಪಾವತಿ ಮಾಡುತ್ತಿದ್ದೇವು. ಆದರೆ ಈಗಿನ 'ಜೆ ಎಸ್ ಟಿ' ಗೆ ಸೇರ್ಪಡೆ ಮಾಡುವಾಗ ದಾಖಲೆಗಳಲ್ಲಿ ಸ್ವಲ್ಪ ಸಮಸ್ಯೆ ಇದೆ. ಅದನ್ನು ಹೊರತು ಪಡಿಸಿದರೆ ಚಿತ್ರಮಂದಿರದ ಮಾಲೀಕರಿಗೆ ಅಷ್ಟೇನೂ ನಷ್ಟ ಆಗುವುದಿಲ್ಲ'' - ಕೆ.ವಿ.ಚಂದ್ರಶೇಖರ್, ಫಿಲ್ಮ್ ಚೆಂಬರ್ ಮಾಜಿ ಅಧ್ಯಕ್ಷ.

ಚಿತ್ರ ಪ್ರದರ್ಶನದಲ್ಲಿ ಬದಲಾವಣೆ ಇಲ್ಲ

''ಜಿ ಎಸ್ ಟಿ ಬರುವುದರಿಂದ ಚಿತ್ರಮಂದಿರದ ಪ್ರದರ್ಶನದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಜುಲೈ ಒಂದರಿಂದನೂ ಸಿನಿಮಾ ಪ್ರದರ್ಶನ ಅದೇ ರೀತಿ ನಡೆಯುತ್ತದೆ. ಜೊತೆಗೆ 'ಜಿ ಎಸ್ ಟಿ' ಬಗ್ಗೆ ಫಿಲ್ಮ್ ಚೆಂಬರ್ ನಲ್ಲಿ ಸಭೆ ಮಾಡಿ ಎಲ್ಲ ಗೊಂದಲಗಳನ್ನು ತೆರಿಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಬಗೆ ಹರಿಸಿಕೊಳ್ಳುತ್ತೇವೆ.'' - ಕೆ.ವಿ.ಚಂದ್ರಶೇಖರ್, ಫಿಲ್ಮ್ ಚೆಂಬರ್ ಮಾಜಿ ಅಧ್ಯಕ್ಷ.

ಟಿಕೆಟ್ ಬೆಲೆ ಏರಿಕೆ ಆಗುತ್ತೆ

''ಜೆ ಎಸ್ ಟಿ ಯಿಂದ ನಮ್ಮ 'ಸಂತೋಷ್' ಚಿತ್ರಮಂದಿರದಲ್ಲಿ ಟಿಕೆಟ್ ಬೆಲೆ ಹೆಚ್ಚಾಗುತ್ತದೆ. ಸದ್ಯ 100 ರೂಪಾಯಿ ಟಿಕೆಟ್ ಬೆಲೆ ಜುಲೈ ನಿಂದ 118 ರೂಪಾಯಿಗೆ ಏರಿಕೆ ಮಾಡಿದ್ದೇವೆ. 80 ರೂಪಾಯಿಯ ಟಿಕೆಟ್ 94 ರೂಪಾಯಿಗೆ ಏರಿಕೆ ಮಾಡಿದ್ದೇವೆ. ಇನ್ನೂ ಈ ಬಗ್ಗೆ ನಮಗೆ ಫಿಲ್ಮ್ ಚೆಂಬರ್ ಅಥವಾ ಪ್ರದರ್ಶಕರ ವಲಯದಿಂದ ಯಾವುದೇ ಸೂಚನೆಗಳು ಸಿಕ್ಕಿಲ್ಲ. ಇಂದು (ಜೂನ್ 30) ಈ ಬಗ್ಗೆ ಎಲ್ಲ ರೀತಿಯ ಮಾಹಿತಿಗಳು ಸಿಗುತ್ತದೆ.'' - ಗಣೇಶ್, ಸಂತೋಷ್ ಚಿತ್ರಮಂದಿರದ ಮ್ಯಾನೇಜರ್

ಭಟ್ಟರು ಬರೆದ GST ಹಾಡು ನೋಡಿ: ವಿಜಿ-ಗಣೇಶ್ ಸಿಂಗಿಂಗ್

English summary
Karnataka Film Chamber Of Commerce Ex President K.V.Chandrashekar Spoke About 'GST' Impact On Kannada Film Industry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada