»   » 'ಗಾಂಧಿ'ಯಿಂದ 'ಮೋದಿ'ವರೆಗೂ ನಡೆಯುವ ಕಥೆಯೇ '5G'

'ಗಾಂಧಿ'ಯಿಂದ 'ಮೋದಿ'ವರೆಗೂ ನಡೆಯುವ ಕಥೆಯೇ '5G'

Posted By:
Subscribe to Filmibeat Kannada

ಚಿತ್ರದ ಟೈಟಲ್ ನಿಂದಲೇ ಕುತೂಹಲ ಹುಟ್ಟಿಸಿರುವ '5G' ಸಿನಿಮಾ ಇದೇ ತಿಂಗಳಲ್ಲಿ ಬಿಡುಗಡೆಗೆ ಸಿದ್ದವಾಗಿದೆ. ಏನಿದು '5G' ಎಂದು ತಲೆಕಡೆಸಿಕೊಂಡಿರುವರೆಲ್ಲಾ ಆ ನಿರೀಕ್ಷೆಯನ್ನ ಹಾಗೆ ಇಟ್ಕೊಳ್ಳಿ. ಯಾಕಂದ್ರೆ, ಮುಂದಿನ ವಾರ '5G' ಚಿತ್ರದ ಅಸಲಿ ಕಥೆ ಬೆಳ್ಳಿ ತೆರೆಯಲ್ಲಿ ಅನಾವರಣಗೊಳ್ಳಲಿದೆ.

'5G' ಚಿತ್ರದಲ್ಲಿ 'ಸಿಂಪಲಾಗ್ ಇನ್ನೊಂದು ಲವ್ ಸ್ಟೋರಿ' ಖ್ಯಾತಿಯ ನಟ ಪ್ರವೀಣ್ ಹಾಗೂ ನಿಧಿ ಸುಬ್ಬಯ್ಯ ಚಿತ್ರದಲ್ಲಿ ನಾಯಕ ಹಾಗೂ ನಾಯಕಿಯರಾಗಿ ಅಭಿನಯಿಸಿದ್ದಾರೆ. ಆದ್ರೆ, ಈ ಚಿತ್ರದ ನಿಜವಾದ ಹೀರೋ '500 ರೂಪಾಯಿ ನೋಟು' ಅಂತಾರೆ ನಿರ್ದೇಶಕ ಗುರುವೇಂದ್ರ ಶೆಟ್ಟಿ.

ಆಗಸ್ಟ್ 25 ರಂದು ಸ್ಯಾಂಡಲ್ ವುಡ್ ಗೆ '5G' ಎಂಟ್ರಿ

Guruvendra shetty Directional 5g releasing this august

ಹೌದು, 500 ನೋಟಿನ ಸುತ್ತಾ '5G' ಚಿತ್ರದ ಕಥೆ ಸಾಗುತ್ತೆ. ಹಾಗಂತ ನೋಟ್ ಬ್ಯಾನ್ ವ್ಯವಸ್ಥೆಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಆದ್ರೂ, ಈ 500 ರೂಪಾಯಿ ನೋಟು ಇಡೀ ಚಿತ್ರವನ್ನ ಕೊಂಡೊಯ್ಯತ್ತೆ. ಅದು ಹೇಗೆ ಎಂಬುದನ್ನ ನೀವು ಚಿತ್ರಮಂದಿರದಲ್ಲಿ ನೋಡಿದ್ರೆ ಚೆನ್ನಾಗಿರುತ್ತೆ.

'5G' (5th Generation) ಸಿನಿಮಾ ಪ್ರಯೋಗಾತ್ಮಕ ಚಿತ್ರವೆನಿಸಿದರೂ ಇದು ಪಕ್ಕಾ ಕಮರ್ಷಿಯಲ್ ಸಿನಿಮಾ. ಚಿತ್ರದಲ್ಲಿ ನೋಟಿನ ದೃಷ್ಟಿಕೋನದಿಂದ ದೇಶದಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಈ ಸಿನಿಮಾ ತೋರಿಸುತ್ತಿದೆ. ಗಾಂಧೀಜಿ ಕಂಡ ರಾಮರಾಜ್ಯ ಕನಸು ಏನಾಗಿದೆ? ಈಗಿನ ಸಮಾಜಕ್ಕೆ ಗಾಂಧೀಜಿ ಬಂದರೆ ಅವರ ಮನಸ್ಥಿತಿ ಹೇಗಿರಬಹುದು ಎಂಬ ಅಂಶಗಳನ್ನ ಒಳಗೊಂಡಿದೆ.

Guruvendra shetty Directional 5g releasing this august

ಹೀಗೆ, ವಿಭಿನ್ನ ಕಥೆಗೆ ಕುತೂಹಲ ಕೆರಳಿಸಿರುವ ಚಿತ್ರವನ್ನ ನಿರ್ದೇಶನ ಮಾಡಿರುವುದು ಗುರುವೇಂದ್ರ ಶೆಟ್ಟಿ. ಕಥೆ-ಚಿತ್ರಕಥೆ ಬರೆದು ಮನರಂಜನಾತ್ಮಕವಾಗಿ ಸಿನಿಮಾ ತಯಾರು ಮಾಡಿದ್ದಾರೆ. ಶ್ರೀಧರ್ ವಿ.ಸಂಭ್ರಮ್ ಚಿತ್ರಕ್ಕೆ ರಾಗ ಸಂಯೋಜನೆ ಮಾಡಿದ್ದು, ಗುರು ಪ್ರಶಾಂತ ರೈ ಅವರು ಛಾಯಗ್ರಾಹಣ ಈ ಚಿತ್ರಕ್ಕಿದೆ. ಜಗದೀಶ, ದೀಪು ಹಾಗೂ ಗಿರೀಶ್ ಕುಮಾರ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

ಇನ್ನುಳಿದಂತೆ ಅವಿನಾಶ್, ಸಾಧುಕೋಕಿಲ, 'ಎಡಕಲ್ಲು ಗುಡ್ಡ ಮೇಲೆ' ಚಂದ್ರಶೇಖರ್, ಕೀರ್ತಿಶ್ರೀ ಸ್ವಪ್ನರಾಜ್ ಇತರರು ತಾರಾಬಳಗದಲ್ಲಿದ್ದು, ಆಗಸ್ಟ್ 25 ರಂದು ಬಿಗ್ ಸ್ಕ್ರೀನ್ ಮೇಲೆ ನೋಡಬಹುದಾಗಿದೆ.

English summary
Kannada Movie 5G will be releasing on august 25th. The Movie directed by Guruvendra Shetty.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada