For Quick Alerts
  ALLOW NOTIFICATIONS  
  For Daily Alerts

  ತಡರಾತ್ರಿ ಎಚ್.ಡಿ.ಕುಮಾರಸ್ವಾಮಿ ಬಲ್ಗೇರಿಯಾಗೆ ಹಾರಿದ್ದು ಯಾಕೆ.?

  By Harshitha
  |

  ಮಾಜಿ ಮುಖ್ಯಮಂತ್ರಿ ಹಾಗೂ ಜೆ.ಡಿ.ಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ರವರಿಗೆ ರಾಜಕೀಯ ಹಾಗೂ ಪಕ್ಷ ಸಂಘಟನೆಗಿಂತ ಹೆಚ್ಚಾಗಿ ಮಗನ ಭವಿಷ್ಯ ಮುಖ್ಯವಾಗಿದೆ. ಹೀಗಂತ, ಎಲ್ಲರೂ ಬೆಟ್ಟು ಮಾಡಿ ತೋರಿಸಿ ಹೇಳಲು ಒಂದು ಕಾರಣ ಇದೆ. ಅದನ್ನ ಸವಿವರವಾಗಿ ಹೇಳ್ತೀವಿ, ಓದಿ....

  ನಿನ್ನೆಯಷ್ಟೇ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಜೆ.ಡಿ.ಎಸ್ ಪಕ್ಷಕ್ಕೆ ಭಾರಿ ಮುಖಭಂಗವಾಯ್ತು. ಜೆ.ಡಿ.ಎಸ್ ಪಕ್ಷದ ರೆಬೆಲ್ ಶಾಸಕರು ಮಾಡಿದ ಅಡ್ಡ ಮತದಾನದಿಂದ ವರಿಷ್ಠರಿಗೆ ಮುಜುಗರವಾಯ್ತು.

  ಬಂಡಾಯದ ಕಹಳೆ ಊದಿದ ಶಾಸಕರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಇಂದು ಅರಮನೆ ಮೈದಾನದಲ್ಲಿ ಜೆ.ಡಿ.ಎಸ್ ಪದಾಧಿಕಾರಿಗಳ ಹಾಗೂ ನಾಯಕರ ಸಭೆ ನಡೆಯಲಿದೆ. ವಿಚಿತ್ರ ಅಂದ್ರೆ, ರೆಬೆಲ್ ಶಾಸಕರ ವಿರುದ್ಧ ಗುಡುಗಿದ್ದ ಎಚ್.ಡಿ.ಕೆ ಇವತ್ತು ಮಧ್ಯಾಹ್ನ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಅವರು ನಿನ್ನೆ ತಡರಾತ್ರಿಯೇ ಬಲ್ಗೇರಿಯಾಗೆ ಹಾರಿದ್ದಾರೆ.! [ನಿಖಿಲ್ ಕುಮಾರ್ 'ಜಾಗ್ವಾರ್' ಚಿತ್ರಕ್ಕೆ ಹಾಲಿವುಡ್ ಟಚ್]

  ಯಾಕೆ ಅಂದ್ರೆ, ಪುತ್ರ ನಿಖಿಲ್ ಕುಮಾರ್ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರ 'ಜಾಗ್ವಾರ್' ಚಿತ್ರೀಕರಣ ಬಲ್ಗೇರಿಯಾದಲ್ಲಿ ಫಿಕ್ಸ್ ಆಗಿದೆ. ಹೀಗಾಗಿ, ಮಗನ ಜೊತೆ ಎಚ್.ಡಿ.ಕೆ ಫ್ಲೈಟ್ ಹತ್ತಿದ್ದಾರೆ.

  ಅಲ್ಲಿಗೆ, ಪಕ್ಷದ ವಿಪ್ ಉಲ್ಲಂಘನೆ ಮಾಡಿ ಕಾಂಗ್ರೆಸ್ ಬೆಂಬಲಿಸಿದ ಜೆ.ಡಿ.ಎಸ್ ಶಾಸಕರ ವಿರುದ್ಧ ಕ್ರಮ ಜರುಗಿಸುವ ಹೊಣೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರದ್ದು. [ಜೆಡಿಎಸ್ ಭಿನ್ನಮತ ಅಂತಿಮ ಘಟ್ಟಕ್ಕೆ, ಮುಂದೇನು?]

  ಕರ್ನಾಟಕ ರಾಜ್ಯದಲ್ಲಿ 'ಮನೆಯೊಂದು ಹಲವಾರು ಬಾಗಿಲು' ಎಂಬಂತಾಗಿರುವ ಜೆ.ಡಿ.ಎಸ್ ಪಕ್ಷ ಭವಿಷ್ಯದ ಬಗ್ಗೆ ಚಿಂತೆ ಇದ್ದರೂ, ಮಗ ನಿಖಿಲ್ ಕುಮಾರ್ ಚೊಚ್ಚಲ ಚಿತ್ರ 'ಜಾಗ್ವಾರ್' ಚಿತ್ರೀಕರಣದಲ್ಲಿ ಎಚ್.ಡಿ.ಕುಮಾರಸ್ವಾಮಿ ಭಾಗಿಯಾಗಿದ್ದಾರೆ. [ಎಕ್ಸ್ ಕ್ಲೂಸಿವ್ ಚಿತ್ರಗಳು ; ನಿಖಿಲ್ ಕುಮಾರಸ್ವಾಮಿ ಯಾರಿಗೂ ಕಮ್ಮಿ ಇಲ್ಲ!]

  ಅಂದ್ಹಾಗೆ, 'ಜಾಗ್ವಾರ್' ಚಿತ್ರದ ಆಕ್ಷನ್ ಸೀಕ್ವೆನ್ಸ್ ಶೂಟಿಂಗ್ ಬಲ್ಗೇರಿಯಾದಲ್ಲಿ ನಡೆಯಲಿದೆ. ಮಹಾದೇವ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದು. ಹೆಚ್ಚಿನ ಅಪ್ ಡೇಟ್ಸ್ ಗಾಗಿ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ....

  English summary
  Amidst crisis in JDS Party, Former Karnataka Chief Minister, Producer H.D.Kumaraswamy has traveled to Bulgaria with his son Nikhil Kumar for the purpose of 'Jaguar' Film shooting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X