»   » ಸದ್ದಿಲ್ಲದೇ ಎಚ್.ಡಿ.ಕುಮಾರಸ್ವಾಮಿ ವಿದೇಶಕ್ಕೆ ಹಾರಿದ್ದು ಯಾಕೆ?

ಸದ್ದಿಲ್ಲದೇ ಎಚ್.ಡಿ.ಕುಮಾರಸ್ವಾಮಿ ವಿದೇಶಕ್ಕೆ ಹಾರಿದ್ದು ಯಾಕೆ?

Posted By:
Subscribe to Filmibeat Kannada

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜಕಾರಣದಲ್ಲಿ ಸಿಕ್ಕಾಪಟ್ಟೆ ಬಿಜಿಯಾಗಿರಬಹುದು. ಆದ್ರೆ, ಪುತ್ರ ನಿಖಿಲ್ ಕುಮಾರ್ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರ 'ಜಾಗ್ವಾರ್' ಬಗ್ಗೆ ಎಂದೂ ನಿರ್ಲಕ್ಷ್ಯ ವಹಿಸಿಲ್ಲ.

ರಾಜಕಾರಣದ ತಲೆಬಿಸಿ ನಡುವೆಯೂ 'ಜಾಗ್ವಾರ್' ಚಿತ್ರದ ನಿರ್ಮಾಪಕರೂ ಆಗಿರುವ ಎಚ್.ಡಿ.ಕುಮಾರಸ್ವಾಮಿ ಇತ್ತೀಚೆಗಷ್ಟೇ ಸದ್ದಿಲ್ಲದೇ ವಿದೇಶಕ್ಕೆ ಹೋಗಿ ಬಂದಿದ್ದರು.


H.D.Kumaraswamy is on location hunt for 'Jaguar' movie

'ಜಾಗ್ವಾರ್' ಚಿತ್ರಕ್ಕೆ ಪೂರಕವಾಗಿರುವ ಲೊಕೇಷನ್ ಗಳ ಹುಡುಕಾಟದಲ್ಲಿ ಇರುವ ಎಚ್.ಡಿ.ಕುಮಾರಸ್ವಾಮಿ ಯೂರೋಪ್ ನಲ್ಲಿರುವ ಬಲ್ಗೇರಿಯಾಗೆ ಭೇಟಿ ಕೊಟ್ಟಿದ್ದರು. [ಎಕ್ಸ್ ಕ್ಲೂಸಿವ್ ಚಿತ್ರಗಳು ; ನಿಖಿಲ್ ಕುಮಾರಸ್ವಾಮಿ ಯಾರಿಗೂ ಕಮ್ಮಿ ಇಲ್ಲ!]


ಇನ್ನು ಕೆಲವೇ ದಿನಗಳಲ್ಲಿ ಐಸ್ ಲ್ಯಾಂಡ್ ಗೂ ಪ್ರಯಾಣ ಬೆಳೆಸಲಿದ್ದಾರಂತೆ. ಮೂಲಗಳ ಪ್ರಕಾರ, ಬಲ್ಗೇರಿಯಾದಲ್ಲಿ ಆಕ್ಷನ್ ಭಾಗದ ಚಿತ್ರೀಕರಣ ನಡೆದರೆ, ಐಸ್ ಲ್ಯಾಂಡ್ ನಲ್ಲಿ ಹಾಡಿನ ಚಿತ್ರೀಕರಣ ನಡೆಯಲಿದೆ. ಲೊಕೇಷನ್ ಗಳನ್ನ ಎಚ್.ಡಿ.ಕೆ ಫೈನಲ್ ಮಾಡಿದ ಮೇಲೆ ಚಿತ್ರೀಕರಣ ನಡೆಯಲಿದೆ ಎನ್ನಲಾಗಿದೆ. ['ಜಾಗ್ವಾರ್' ಚಿತ್ರಕ್ಕೆ ಬ್ರಹ್ಮಾನಂದಂ ಕಾಮಿಡಿ ಕಿಕ್!]


ಈಗಾಗಲೇ ಕೊನೆಯ ಹಂತದ ಚಿತ್ರೀಕರಣದಲ್ಲಿರುವ 'ಜಾಗ್ವಾರ್' ಟೀಸರ್ ಬಿಡುಗಡೆ ಸಮಾರಂಭ ಹೈದರಾಬಾದ್ ನಲ್ಲಿ ಅದ್ಧೂರಿಯಾಗಿ ಹಮ್ಮಿಕೊಳ್ಳಲು ಎಚ್.ಡಿ.ಕುಮಾರಸ್ವಾಮಿ ನಿರ್ಧರಿಸಿದ್ದಾರಂತೆ. ಏಕಕಾಲಕ್ಕೆ ಕನ್ನಡ ಹಾಗೂ ತೆಲುಗಿನಲ್ಲಿ 'ಜಾಗ್ವಾರ್' ರೆಡಿ ಆಗುತ್ತಿರುವುದರಿಂದ ಟಾಲಿವುಡ್ ನಲ್ಲೂ ನಿಖಿಲ್ ಕುಮಾರ್ ಗೆ ಬಿಗ್ ಬ್ರೇಕ್ ಸಿಗಲಿ ಎಂಬುದು ಎಚ್.ಡಿ.ಕೆ ಆಶಯ.


ಹೈದರಾಬಾದ್ ನಂತರ ಬೆಂಗಳೂರಿನಲ್ಲೂ ಟೀಸರ್ ಬಿಡುಗಡೆ ಕಾರ್ಯಕ್ರಮ ಆಯೋಜಿಸುವ ಯೋಜನೆ ಇದೆ. ಅಕ್ಟೋಬರ್ 8 ರಂದು 'ಜಾಗ್ವಾರ್' ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ.

English summary
Former Karnataka Chief Minister, Producer H.D.Kumaraswamy is on location hunt for his son Nikhil Kumar's Debut movie 'Jaguar'. Recently H.D.K visited Bulgaria for shooting locations.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada