For Quick Alerts
  ALLOW NOTIFICATIONS  
  For Daily Alerts

  ಅನಂತ್ ನಾಗ್ ಹುಟ್ಟುಹಬ್ಬ: ಮಧ್ಯಮವರ್ಗಗಳ ಡಾರ್ಲಿಂಗ್ ಎವರ್ ಗ್ರೀನ್ ಹೀರೋ ಬಗ್ಗೆ ಇಂಟ್ರಸ್ಟಿಂಗ್ ಮಾಹಿತಿ

  By ರವೀಂದ್ರ ಕೊಟಕಿ
  |

  ಬಯಲು ದಾರಿಯಲ್ಲಿ ಅನಂತ್ ನಾಗ್ 'ಎಲ್ಲಿರುವೆ ಮನವ ಕಾಡುವ ರೂಪಸಿಯೇ' ಅಂತ ಕಲ್ಪನಾ ಅವರನ್ನು ನೆನೆಸಿಕೊಂಡು ಹಾಡಿದರೆ ಎಂಬತ್ತರ ದಶಕದಲ್ಲಿ ತರುಣಿಯರ ಮನ ಮನದಲ್ಲಿ ಅನಂತ್ ತುಂಬಿಕೊಂಡಿದ್ದರು. ಅನಂತ್ ನಾಗ್ ಅವರ ಪ್ರೇಯಸಿ ತಾನೇ ಎಂಬಂತೆ ಸಂಭ್ರಮಿಸುತ್ತಿದ್ದರು. ಇದು 80ರ ದಶಕದಲ್ಲಿ ಅನಂತ್ ನಾಗ್ ಅವರು ಮಾಡಿದ ಮೋಡಿ.

  ಅನಂತನಾಗ್ ಒಬ್ಬ ಅದ್ಭುತ ಕಲಾವಿದ. ಇಂದು ಅವರ ಸಮಕಾಲೀನ ನಟರು ಬಹುತೇಕ ಸಿನಿಮಾ ರಂಗದಿಂದ ಡಿಮ್ಯಾಂಡ್ ಇಲ್ಲದೆ ದೂರವಾಗಿದ್ದಾರೆ. ಆದರೆ ಅನಂತನಾಗ್ ಇಂದಿಗೂ ಕೂಡ ಕನ್ನಡದ ಹೊಸ ನಿರ್ದೇಶಕರಿಗೂ ಕೂಡ ಅಚ್ಚುಮೆಚ್ಚಿನ ನಟ. ಇಂದಿಗೂ ಅನಂತನಾಗ್ ಅವರಿಗಾಗಿಯೇ ಸ್ಕ್ರಿಪ್ಟ್ ಗಳು ಬರೆಯುವಂತಹ ನಿರ್ದೇಶಕರಿದ್ದಾರೆ. ಇದು ಅನಂತನಾಗ್ ಅವರ ಜನಪ್ರಿಯತೆಗೆ ಹಿಡಿದ ಕೈಗನ್ನಡಿ.

  70-80 ದಶಕದ ಬದಲಾವಣೆ!

  70-80 ದಶಕದ ಬದಲಾವಣೆ!

  ಭಾರತೀಯ ಸಿನಿಮಾ ರಂಗದಲ್ಲಿ 70 ಮತ್ತು 80ರ ದಶಕ ಹೊಸ ಅಲೆಯ ಮತ್ತು ಪ್ರಯೋಗದ ಚಿತ್ರಗಳಿಗೆ ಮುನ್ನುಡಿ ಬರೆಯುತ್ತದೆ. ಮರಾಠಿ ರಂಗಭೂಮಿಯ ಇಂದ ಹೊರಟುಬಂದ ಅನಂತನಾಗ್, ಅಮೂಲ್ ಪಾಲೇಕರ್, ಸಚಿನ್ ಅಂತ ನಟರು ಇನ್ನೊಂದು ಕಡೆ ಬೆಂಗಾಲಿ ಮೂಲದ ಬಸು ಚಟರ್ಜಿ, ಹೃಷಿಕೇಶ್ ಮುಖರ್ಜಿ ಅಂತಹ ಸೃಜನಶೀಲ ನಿರ್ದೇಶಕರ ಆಗಮನವೂ ಆಯಿತು. ಇದೇ ಸಂದರ್ಭದಲ್ಲಿ ಫಾರೂಕ್ ಶೇಕ್, ರಾಕೇಶ್ ರೋಷನ್, ನಸೀರುದ್ದಿನ್ ಶ ಅಂತಹ ಯುವಪ್ರತಿಭೆಗಳ ಸಂಗಮವು ಬಾಲಿವುಡ್ನಲ್ಲಿ ಆಯಿತು. ಈ ಕಾಲದಲ್ಲಿ ಮಧ್ಯಮವರ್ಗದ ಬದುಕು ಗಳನ್ನು ಆಧರಿಸಿದ ಕಥೆಗಳಾದ 'ರಜನಿಗಂಧ, ಚಿತ್ತಚೋರ, ಚೋಟಿ ಸಿ ಬಾತ್, ಘರ್'ಇಂತಹ ಹೊಸದೊಂದು ಪರಂಪರೆಯ ಚಿತ್ರಗಳ ಜನಸಾಮಾನ್ಯರ ಮನಸೂರೆಗೊಂಡಿತು.

  ಕನ್ನಡ ಸಿನಿಮಾ ರಂಗದ ಕಡೆಗೆ ಮುಖ ಮಾಡಿದ ಅನಂತ್

  ಕನ್ನಡ ಸಿನಿಮಾ ರಂಗದ ಕಡೆಗೆ ಮುಖ ಮಾಡಿದ ಅನಂತ್

  ಮರಾಠಿ ರಂಗಭೂಮಿ ಜೊತೆಗೆ ಹೆಚ್ಚಿನ ಒಡನಾಟ ಹೊಂದಿದ್ದ ಅನಂತನಾಗ್ 1973 ರಲ್ಲಿ ಕನ್ನಡ ಚಲನಚಿತ್ರ 'ಸಂಕಲ್ಪ'ದ ಮೂಲಕ ಸಿನಿ ಅರಂಗ್ರೇಟಂ ಮಾಡಿದರು. ನಂತರ ಹಿಂದಿ ಚಿತ್ರ 'ಅಂಕುರ್' ಮೂಲಕ ಹಿಂದಿ ಚಲನಚಿತ್ರರಂಗದಲ್ಲೂ ಪಾದಾರ್ಪಣೆ ಮಾಡಿದರು. 'ಪ್ರೇಮ ಲೇಖಲು' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕೂಡ ಪದಾರ್ಪಣೆ ಮಾಡಿದರು. ಸುಮಾರು ಮೂರು ವರುಷ ಹೀಗೆ ಮೂರು ಚಿತ್ರರಂಗಗಳಲ್ಲಿ ನಡೆಸುತ್ತಿದ್ದ 1979 ರಿಂದ ಪೂರ್ಣಪ್ರಮಾಣದಲ್ಲಿ ಕನ್ನಡ ಸಿನಿಮಾ ರಂಗದಲ್ಲಿ ನಾಯಕನಟನಾಗಿ ಗುರುತಿಸಿಕೊಂಡರು.ಈ ಸಮಯದಲ್ಲಿ ಶಂಕರನಾಗ್ ಅವರ ಎಲ್ಲಾ ತರದ ಪ್ರಯೋಗಾತ್ಮಕ ಚಿತ್ರಗಳೂ ಕೂಡ ಅನಂತ ಸಾಥ್ ನೀಡಿದರು.

  ಮಿಡಲ್ ಕ್ಲಾಸ್ ಹುಡುಗಿಯರ ಡಾರ್ಲಿಂಗ್

  ಮಿಡಲ್ ಕ್ಲಾಸ್ ಹುಡುಗಿಯರ ಡಾರ್ಲಿಂಗ್

  ಕನ್ನಡ ಸಿನಿಮಾರಂಗ ಕಂಡ ಅತ್ಯಂತ ಸುರದ್ರೂಪಿ ನಟ ಅನಂತ್. ಬಯಲು ದಾರಿ,ನಾ ನಿನ್ನ ಬಿಡಲಾರೆ, ಬೆಂಕಿಯಬಲೆ, ಚಂದನದ ಗೊಂಬೆ ಇಂತಹ ಚಿತ್ರಗಳು ಅಂದಿನ ಹೆಣ್ಣುಮಕ್ಕಳ ಹೃದಯದಲ್ಲಿ ಅನಂತ್ ಸ್ಥಾನವನ್ನು ಭದ್ರಪಡಿಸಿದ. ಮಧ್ಯಮವರ್ಗದ ಭಾವನೆಗಳನ್ನು ಒಬ್ಬ ನಾಯಕ ನಟ ವ್ಯಕ್ತಪಡಿಸಿದ್ದು ಅದು ಅನಂತ್. ಹೀಗಾಗಿ ಅಂದಿನ ಹೆಣ್ಣು ಮಕ್ಕಳ ಪಾಲಿಗೆ ಅನಂತನಾಗ್ ನೆಚ್ಚಿನ ನಟ ಅಥವಾ ಡಾರ್ಲಿಂಗ್ ಆಗಿದ್ದರು.

  ಹಾಸ್ಯ ನಟನಾಗಿಯೂ ಸೈ ಎನಿಸಿಕೊಂಡ ನಟ

  ಹಾಸ್ಯ ನಟನಾಗಿಯೂ ಸೈ ಎನಿಸಿಕೊಂಡ ನಟ

  90ರ ದಶಕ ಬಂದಂತೆ ಕನ್ನಡ ಸಿನಿಮಾರಂಗದಲ್ಲೂ ಹೊಸ ನಾಯಕರ ಪ್ರವೇಶವಾಯಿತು. ಹೊಸ ಹದಿಹರೆಯದ ಕಾಲೇಜು ಪ್ರೇಮಕಥೆಗಳನ್ನು ಮಾನ ಮೊದಲಾಯಿತು. ಅನಂತ್ ನಾಗ್ ಬೇಡಿಕೆ ಕಳೆದುಕೊಂಡರು ಅಂತಲೇ ಎಲ್ಲರೂ ಭಾವಿಸಿದರು ಆದರೆ

  ಆಗ ಬಂದ ಗೋಲ್ಮಾಲ್ ಸೀರೀಸ್, ಗೌರಿ ಗಣೇಶ, ಗಣೇಶನ ಮದುವೆ ಅಂತ ಚಿತ್ರಗಳು ಅವರಲ್ಲಿನ ಹಾಸ್ಯ ನಟನನ್ನು ಅನಾವರಣಗೊಳಿಸಿತು ಮತ್ತು ಅವರೊಬ್ಬ ಅತ್ಯುತ್ತಮ ಹಾಸ್ಯನಟ ಎಂಬುದನ್ನು ಕೂಡ ಸಾಬೀತುಪಡಿಸಿತು.

  ಪೋಷಕ ನಟ-ಕಿರುತೆರೆಯ ನಾಯಕ

  ಪೋಷಕ ನಟ-ಕಿರುತೆರೆಯ ನಾಯಕ

  ವಯಸ್ಸು ಮಾಗಿದಂತೆ ಅನಂತನಾಗ್ ಅವರ ಸಿನಿಮಾ ಜರ್ನಿ ಕೂಡ ಬದಲಾಯಿತು. ನಾಯಕನಟನ ಪಟ್ಟದಿಂದ ಪೋಷಕನಟನ ಪಾತ್ರಗಳಿಗೂ ಕೂಡ ಜೀವತುಂಬಲು ಮೊದಲಾದರು. ಮುಂಗಾರು ಮಳೆ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸರ್ಕಾರಿ ಪ್ರಾಥಮಿಕ ಪಾಠಶಾಲೆ ಕಾಸರಗೋಡು, ಕೆಜಿಎಫ್-1 ಹೀಗೆ ಅನೇಕ ಸೂಪರ್ ಹಿಟ್ ಚಲನಚಿತ್ರಗಳಲ್ಲಿ ಗಮನ ಹರವಾದ ಪಾತ್ರಗಳ ಮೂಲಕ ಗಮನ ಸೆಳೆದವರು ಅನಂತನಾಗ್. ಇದೇ ಸಮಯದಲ್ಲಿ ಕಿರುತೆರೆಗೂ ಪ್ರವೇಶಿಸಿದ ಅನಂತ್ ನಾಗ್ ಅಲ್ಲಿಯೂ ಯಶಸ್ವಿಯನ್ನು ಕಂಡವರು. ಹಿಂದೆ ಶಂಕರ್ ನಾಗ್ ಅವರ ಮಾಲ್ಗುಡಿ ಡೇಸ್ ನಲ್ಲಿ ಅಭಿನಯಿಸಿದ್ದ ಅನಂತ್ ನಾಗ್ 2002ರಲ್ಲಿ ಬಂದ 'ಗರ್ವ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2006ರಲ್ಲಿ ಅವರು ಅಭಿನಯಿಸಿದ 'ಪ್ರೀತಿ ಇಲ್ಲದ ಮೇಲೆ' ಧಾರಾವಾಹಿ ಅತ್ಯಂತ ಯಶಸ್ಸನ್ನು ಕಂಡಿತ್ತು.


  ಇಂದು ಅನಂತನಾಗ್ ಅವರ 73ನೇ ಹುಟ್ಟುಹಬ್ಬ. ಕನ್ನಡದ ಬಹುಮುಖಿ ನಾಯಕ ನಟನಿಗೆ oneindia, kannada filmibeat ವತಿಯಿಂದ ಹಾರ್ದಿಕ ಜನ್ಮದಿನದ ಶುಭಾಶಯಗಳು.

  English summary
  Happy Birthday Ananth Nag; Interesting Facts About Versatile Actor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X