For Quick Alerts
  ALLOW NOTIFICATIONS  
  For Daily Alerts

  ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಶುಭಕೋರಿದ ಸ್ಯಾಂಡಲ್ ವುಡ್ ಕಲಾಬಂಧುಗಳು

  |

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 47ನೇ ವಸಂತಕ್ಕೆ ಕಾಲಿಟ್ಟಿರುವ ಸುದೀಪ್ ಈ ಬಾರಿ ಸರಳವಾಗಿ ಜನ್ಮದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಬಾರಿಯ ಹುಟ್ಟುಹಬ್ಬ ಅದ್ದೂರಿಯಾಗಿ ಇಲ್ಲದಿದ್ದರೂ, ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕವೇ ಸಂಭ್ರಮಿಸುತ್ತಿದ್ದಾರೆ. ಸುದೀಪ್ ಗೆ ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿದೆ.

  Sudeep ಹುಟ್ಟು ಹಬ್ಬದಂದು ಅವರ ಬಯೋಗ್ರಫಿ ಬಿಡುಗಡೆ ಮಾಡಿದ Puneeth Rajkumar | Filmibeat Kannada

  ಸ್ನೇಹಜೀವಿ ಎನಿಸಿಕೊಂಡಿರುವ ಸ್ಯಾಂಡಲ್ ವುಡ್ 'ಮಾಣಿಕ್ಯ'ನಿಗೆ ಚಿತ್ರರಂಗದ ಗಣ್ಯರು ಮತ್ತು ಸ್ನೇಹಿತರು ಪ್ರೀತಿಯಿಂದ ಶುಭ ಕೋರುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಜಗ್ಗೇಶ್, ಗಣೇಶ್, ಪ್ರಿಯಾಂಕಾ ಉಪೇಂದ್ರ ಸೇರಿದ್ದಂತೆ ಅನೇಕ ಗಣ್ಯರು ವಿಶ್ ಮಾಡಿದ್ದಾರೆ. ಯಾರ್ಯಾರ ವಿಶ್ ಹೇಗಿದೆ? ಮುಂದೆ ಓದಿ..

  ಹುಟ್ಟುಹಬ್ಬದ ಸಂಭ್ರಮದಲ್ಲಿ ಕಿಚ್ಚ ಸುದೀಪ್ಹುಟ್ಟುಹಬ್ಬದ ಸಂಭ್ರಮದಲ್ಲಿ ಕಿಚ್ಚ ಸುದೀಪ್

   ನಟ ಜಗ್ಗೇಶ್

  ನಟ ಜಗ್ಗೇಶ್

  "ಹುಟ್ಟುಹಬ್ಬದ ಶುಭಾಶಯಗಳು ಆತ್ಮೀಯ ಕಲಾಬಂಧುವಿಗೆ. ನೂರ್ಕಾಲ ಸುಖವಾಗಿ ಬಾಳಿ, ಶುಭಮಸ್ತು" ಎಂದು ಟ್ವೀಟ್ ಮಾಡಿ ಸುದೀಪ್ ಗೆ ಶುಭಹಾರೈಸಿದ್ದಾರೆ. ಸುದೀಪ್ ಜೊತೆ ಇರುವ ಫೋಟೋವನ್ನು ಶೇರ್ ಮಾಡಿದ್ದಾರೆ.

   ಪುನೀತ್ ರಾಜ್ ಕುಮಾರ್

  ಪುನೀತ್ ರಾಜ್ ಕುಮಾರ್

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಸುದೀಪ್ ಇಬ್ಬರು ಉತ್ತಮ ಸ್ನೇಹಿತರು. ಗೆಳೆಯನ ಹುಟ್ಟುಹಬ್ಬಕ್ಕೆ ಪುನೀತ್ ರಾಜ್ ಕುಮಾರ್ ಸಾಮಾಜಿಕ ಜಾಲತಾಣದ ಮೂಲಕ ಶುಭ ಹಾರೈಸಿದ್ದಾರೆ.

  ಜೂಜು ಜಾಹೀರಾತಿಗೆ ವಿರೋಧ: ಸುದೀಪ್ ಹೇಳಿದ್ದೇನು?ಜೂಜು ಜಾಹೀರಾತಿಗೆ ವಿರೋಧ: ಸುದೀಪ್ ಹೇಳಿದ್ದೇನು?

   ನಟ ರಕ್ಷಿತ್ ಶೆಟ್ಟಿ

  ನಟ ರಕ್ಷಿತ್ ಶೆಟ್ಟಿ

  "ಅವರ ನಟನೆ ಮತ್ತು ವ್ಯಕ್ತಿತ್ವ ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತಿದೆ. ಹುಟ್ಟುಹಬ್ಬದ ಶುಭಾಶಯಗಳು ಮಾಸ್ಟ್ರೋ. ಸದಾ ಆರೋಗ್ಯ ಮತ್ತು ಸಂತೋಷವಾಗಿರಿ." ಎಂದು ಶುಭ ಕೋರಿದ್ದಾರೆ.

   ನಟಿ ಪ್ರಿಯಾಂಕಾ ಉಪೇಂದ್ರ

  ನಟಿ ಪ್ರಿಯಾಂಕಾ ಉಪೇಂದ್ರ

  "ನಿಮಗೆ ಸಂತೋಷ, ಪ್ರೀತಿ ಸಮೃದ್ಧಿ ಮತ್ತು ಸಾಕಷ್ಟು ಯಶಸ್ಸು ಸಿಗಲಿ. ಯಾವಾಗಲು ಸಂತೋಷವಾಗಿರಿ ಸುದೀಪ್. ದೇವರು ನಿಮಗೆ ಒಳ್ಳೆಯದು ಮಾಡಲಿ" ಎಂದು ಪ್ರಿಯಾಂಕಾ ಉಪೇಂದ್ರ ವಿಶ್ ಮಾಡಿದ್ದಾರೆ.

   ನಟ ಗೋಲ್ಡನ್ ಸ್ಟಾರ್ ಗಣೇಶ್

  ನಟ ಗೋಲ್ಡನ್ ಸ್ಟಾರ್ ಗಣೇಶ್

  "ನಿಮ್ಮ ಜೀವನವು ನಿಮ್ಮಂತೆಯೇ ಅದ್ಭುತವಾಗಿರಲಿ. ನಿಮ್ಮ ಮುಂದಿನ ಎಲ್ಲಾ ಯೋಜನೆಗಳಿಗೆ ಒಳ್ಳೆಯದಾಗಲಿ. ಸದಾ ಪ್ರೀತಿಸುತ್ತೇನೆ. ಹುಟ್ಟುಹಬ್ಬದ ಶುಭಾಶಯಗಳು ಸುದೀಪ್ ಸರ್" ಎಂದು ಪ್ರೀತಿಯಿಂದ ಶುಭ ಕೋರಿದ್ದಾರೆ.

   ನಿರ್ದೇಶಕ ಸಿಂಪಲ್ ಸುನಿ

  ನಿರ್ದೇಶಕ ಸಿಂಪಲ್ ಸುನಿ

  "ನಟನೆಯಲ್ಲಿ ನಂದಿ. ನಿರ್ದೇಶನಕ್ಕೆ ಕೆಂಪೇಗೌಡ. ನಿರ್ಮಾಣದಲ್ಲಿ ಸ್ವಾತಿಮುತ್ತು. ಗಾಯನದಲ್ಲಿ ಟೈಗರ್. ನಿರೂಪಣೆಯಲ್ಲಿ ಬಿಗ್ ಬಾಸ್. ಕ್ರಿಕೆಟ್ ನಲ್ಲಿ ನಂ 7 ಹಾಗೂ ಕ್ಯಾಪ್ಟನ್. ಸ್ನೇಹದಲ್ಲಿ ಹುಚ್ಚ ಅಭಿಮಾನಿಗಳ ಕಿಚ್ಚ ಸುದೀಪ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು." ಎಂದಿದ್ದಾರೆ.

   ನಿರ್ದೇಶಕ ರಿಷಬ್ ಶೆಟ್ಟಿ

  ನಿರ್ದೇಶಕ ರಿಷಬ್ ಶೆಟ್ಟಿ

  "ಪ್ರೀತಿಯ ಕಿಚ್ಚ ಸುದೀಪ್ ಸರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ದೇವರು ಸದಾ ಒಳಿತನ್ನು ಕರುಣಿಸಲಿ" ಎಂದು ನಿರ್ದೇಶಕ ರಿಷಬ್ ಶೆಟ್ಟಿ ವಿಶ್ ಮಾಡಿದ್ದಾರೆ.

  English summary
  Kannada actor jaggesh, Puneeth Rajkumar, Rakshith Shetty, simple suni and others wish to kiccha sudeep on his birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X