»   » 'ಕನ್ನಡದ ಕೋಟ್ಯಾಧಿಪತಿ' ಪುನೀತ್ ಗೆ ವಿಶ್ ಮಾಡಿ

'ಕನ್ನಡದ ಕೋಟ್ಯಾಧಿಪತಿ' ಪುನೀತ್ ಗೆ ವಿಶ್ ಮಾಡಿ

Posted By:
Subscribe to Filmibeat Kannada
ಕಳೆದ ಬಾರಿಯಂತೆ ಈ ಸಲವು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಹುಟ್ಟುಹಬ್ಬವನ್ನು ಕನ್ನಡದ ಕೋಟ್ಯಾಧಿಪತಿ 2 ಸೆಟ್ ನಲ್ಲೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಕೋಟ್ಯಾಧಿಪತಿ ಸ್ಪರ್ಧಿಗಳು ಅವರ ಜೊತೆ ಸಿಹಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ಕೋಟ್ಯಾಧಿಪತಿ ಸೆಟ್ ನಲ್ಲಿರುವಾಗಲೇ ಪುನೀತ್ ಗೆ ಹಲವು ತಾರೆಗಳು ಫೋನ್ ಮಾಡಿ ತಮ್ಮ ಶುಭಾಶಯಗಳನ್ನು ತಿಳಿಸಿದರು. ಅದರಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ಐಂದ್ರಿತಾ ರೇ ಮುಂತಾದವರು ವಿಶ್ ಮಾಡಿ ಶುಭ ಕೋರಿದರು.

ಈ ಸಂದರ್ಭದಲ್ಲಿ ಶಿವಣ್ಣನಂತೂ ತಾವಿಬ್ಬರು ಒಟ್ಟಿಗೆ ಚಿತ್ರ ಮಾಡುತ್ತಿದ್ದೇವೆ ಎಂದೂ ತಿಳಿಸಿದ್ದಾರೆ. ಅವರ ಹುಟ್ಟುಹಬ್ಬದ ದಿನ (ಮಾರ್ಚ್ 17) ಹೊಸ ಚಿತ್ರವೂ ಘೋಷಣೆಯಾಗುತ್ತಿದೆ. ಆ ಚಿತ್ರಕ್ಕೆ ನಿನ್ನಿಂದಲೇ ಎಂದು ಹೆಸರಿಡಲಾಗಿದೆ. ತೆಲುಗಿನ ಜಯಂತ್ ಸಿ ಪರಂಜೆ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರವಿದು.

ಚಿತ್ರಗಳ ಆಯ್ಕೆಯಲ್ಲಿ ಪುನೀತ್ ಬಹಳ ಚೋಸಿಯಾಗುತ್ತಿದ್ದಾರೆ. ಹಾಗಾಗಿ ಅವರು ವರ್ಷಕ್ಕೆ ಒಂದೇ ಒಂದು ಚಿತ್ರ ಮಾಡುತ್ತಿದ್ದಾರೆ. ಇದರ ಜೊತೆಗೆ ಕನ್ನಡದ ಕೋಟ್ಯಾಧಿಪತಿ ಇದ್ದೇ ಇದೆ. ರಿಮೇಕ್ ಚಿತ್ರಗಳನ್ನು ಬಿಟ್ಟು ಸ್ವಮೇಕ್ ಮಾಡಿದರೆ ಉತ್ತಮ ಎಂಬುದು ಅವರ ಅಭಿಮಾನಿಗಳ ಆಸೆ.

ಪುನೀತ್ ರಾಜ್ ಕುಮಾರ್ ಅವರ 38ನೇ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳು ಸಿದ್ಧರಾಗಿದ್ದಾರೆ. ತಮ್ಮ ನೆಚ್ಚಿನ ನಟನಿಗೆ ಶುಭಕೋರಲು ಹಾರ, ತುರಾಯಿ ಪಟಾಕಿಗಳನ್ನು ಸಿದ್ಧಮಾಡಿಕೊಂಡಿದ್ದಾರೆ. ಈ ಬಾರಿ ಅವರ ಹುಟ್ಟುಹಬ್ಬ ಭಾನುವಾರ ಬಂದಿದ್ದು ರಜೆಯ ಸಂಭ್ರಮಕ್ಕೆ ಮತ್ತಷ್ಟು ಮೆರುಗು ತಂದಿದೆ. ಅಡ್ವಾನ್ಸ್ ಡ್ ಹ್ಯಾಪಿ ಬರ್ತ್ ಡೇ ಪುನೀತ್. (ಒನ್ಇಂಡಿಯಾ ಕನ್ನಡ)

English summary
Power Star Punet Rajkumar celebrating his 38th birthday on 17th March. On his birthday new film will be announced,which will be directed by a Karnataka-born Telugu director Jayant C Paranji, titled as Ninnindale. Advanced happy birthday Appu. 
Please Wait while comments are loading...