Don't Miss!
- News
ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣದಿಂದ ಆರ್ ಟಿ ಪಾಟೀಲ್ ಪಾರು ಮಾಡಲು ತನಿಖಾಧಿಕಾರಿಯಿಂದ 3 ಕೋಟಿ ಬೇಡಿಕೆ
- Automobiles
ಟಾಟಾ ಪಂಚ್ ಎಂಜಿನ್ನಲ್ಲಿ ಭಾರೀ ಬದಲಾವಣೆ... ಇನ್ಮುಂದೆ ಕಡಿಮೆ ಕಂಪನ, ಒಳಗೆ ಪಿನ್ಡ್ರಾಪ್ ಸೈಲೆನ್ಸ್
- Sports
ಶತಕ ಬಾರಿಸಿದರೂ ಅಪ್ಪನಿಗೆ ಪೂರ್ತಿ ಖುಷಿಯಾಗಿಲ್ಲ: ಆಸಕ್ತಿಕರ ವಿಚಾರ ಹಂಚಿಕೊಂಡ ಶುಭಮನ್ ಗಿಲ್
- Technology
ಲಾವಾ ಅಗ್ನಿ 5G ಫೋನ್ಗೆ ಭಾರೀ ಡಿಸ್ಕೌಂಟ್!..ಇಷ್ಟೊಂದು ರಿಯಾಯಿತಿ ಮತ್ತೆ ಸಿಗಲ್ಲ!
- Lifestyle
ಸಂಪತ್ತು ವೃದ್ಧಿಗಾಗಿ ಮನೆಯಲ್ಲಿ ಸ್ವಸ್ತಿಕ ಚಿಹ್ನೆ ಎಲ್ಲೆಲ್ಲಿ ಇಡಬೇಕು?
- Finance
ಗಮನಿಸಿ: ಆಧಾರ್ ವೆರಿಫಿಕೇಶನ್ಗೆ ಯುಐಡಿಎಐ ಹೊಸ ಮಾರ್ಗಸೂಚಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಸ್ತೂರ್ ಬಾ ಪಾತ್ರದಲ್ಲಿ ನಟನೆ: ಜೀವನಮಾನದ ಅವಕಾಶ ಎಂದ ಹರಿಪ್ರಿಯಾ
ನಟಿ ಹರಿಪ್ರಿಯಾ ಬಬ್ಲಿ ಪಾತ್ರಗಳ ಜೊತೆಗೆ ಗಂಭೀರ ಪಾತ್ರಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡವರು. ನಟನೆಗೆ ಅವಕಾಶ ಕಲ್ಪಿಸುವ ಪಾತ್ರಗಳನ್ನು ಬಿಡದೆ ಬಾಚಿಕೊಳ್ಳುತ್ತಾರೆ ಈ ನಟಿ.
ಪಾತ್ರಗಳ ಆಯ್ಕೆಯಲ್ಲಿ ತಮ್ಮ ವಾರಗೆಯ ನಟಿಯರಿಗಿಂತಲೂ ಭಿನ್ನವಾಗಿ ನಿಲ್ಲುವ ನಟಿ ಹರಿಪ್ರಿಯಾ ಇದೇ ಕಾರಣಕ್ಕೆ ಸಿನಿಪ್ರಿಯರ ನೆಚ್ಚಿನ ನಟಿಯರಲ್ಲೊಬ್ಬರು. ಹಲವು ಉತ್ತಮ ಪಾತ್ರಗಳನ್ನು ನಿರ್ವಹಿಸಿರುವ ಈ ನಟಿ ಇದೀಗ ಮಹಾತ್ಮಾ ಗಾಂಧಿ ಪತ್ನಿಯ ಪಾತ್ರದಲ್ಲಿ ನಟಿಸಿದ್ದಾರೆ.
ಬರಗೂರು ರಾಮಚಂದ್ರಪ್ಪ ನಿರ್ದೇಶನದ 'ತಾಯಿ ಕಸ್ತೂರ್ ಗಾಂಧಿ' ಸಿನಿಮಾದಲ್ಲಿ ನಟಿ ಹರಿಪ್ರಿಯಾ ಕಸ್ತೂರ್ ಬಾ ಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಚಿತ್ರತಂಡವು ಹರಿಪ್ರಿಯಾರ ಕಸ್ತೂರ್ ಬಾ ಪಾತ್ರದ ಕೆಲವು ಚಿತ್ರಗಳನ್ನು ಹಂಚಿಕೊಂಡಿದೆ.
ಕಸ್ತೂರ್ ಬಾ ಗಾಂಧಿಯ ಜೀವನದ ಕೆಲವು ಪ್ರಮುಖ ಕಾಲಘಟ್ಟಗಳು ಆಯಾ ಕಾಲಘಟ್ಟದಲ್ಲಿ ಅವರ ವ್ಯಕ್ತಿತ್ವ, ಮನಸ್ಥಿತಿ, ಗಾಂಧಿ ಅವರೊಟ್ಟಿಗಿನ ಸಂಬಂಧ ಇನ್ನಿತರೆ ವಿಷಯಗಳನ್ನು ಸಿನಿಮಾ ಒಳಗೊಂಡಿರಲಿದೆ. ಕಸ್ತೂರ್ ಬಾ ಅವರ ಯೌವನ, ಮಧ್ಯ ವಯಸ್ಕ, ವೃದ್ಧ ಕಾಲಘಟ್ಟದ ಪಾತ್ರಗಳಲ್ಲಿ ಹರಿಪ್ರಿಯಾ ನಟಿಸಿದ್ದಾರೆ.

'ಕಸ್ತೂರ್ ಬಾ v/s ಗಾಂಧಿ' ಕಾದಂಬರಿ ಆಧರಿತ ಸಿನಿಮಾ
'ಇದೆಲ್ಲ ಸಾಧ್ಯವಾಗಿದ್ದು ಬರಗೂರು ರಾಮಚಂದ್ರಪ್ಪನವರು ತಮ್ಮ ಕಾದಂಬರಿ 'ಕಸ್ತೂರ್ ಬಾ v/s ಗಾಂಧಿ' ಕಾದಂಬರಿಯನ್ನು ನನ್ನ ಕೈಗೆ ಕೊಟ್ಟಾಗ. ನಾನು ಪುಸ್ತಕ ಓದಿದೆ ಮತ್ತು ಅದು ನನಗೆ ಬಹಳ ಇಷ್ಟವಾಯಿತು. ಪುಸ್ತಕದ ಬಗ್ಗೆ ನಾನು ಬರಗೂರು ಅವರ ಬಳಿ ಮಾತನಾಡಿದೆ ಆಗ ಗೊತ್ತಾಯಿತು ಅವರು ಅದನ್ನು ಸಿನಿಮಾ ಮಾಡುವ ಯೋಜನೆಯಲ್ಲಿದ್ದಾರೆಂದು. ಅವರು ನಾನೇ ಈ ಪಾತ್ರ ಮಾಡಬೇಕು ಎಂದು ಹೇಳಿದರು. ಅದು ನನಗೂ ಸಂತೋಶ ನೀಡಿತು'' ಎಂದು ಪಾತ್ರ ತಮಗೆ ದಕ್ಕಿದ್ದು ಹೇಗೆಂಬ ಮಾಹಿತಿ ಹಂಚಿಕೊಂಡಿದ್ದಾರೆ ಹರಿಪ್ರಿಯಾ.

ರಾಮಚಂದ್ರಪ್ಪನವರಿಗೆ ಧನ್ಯವಾದ ಹೇಳಿದೆ: ಹರಿಪ್ರಿಯಾ
''ದೊಡ್ಡ ನಿರ್ದೇಶಕರೊಬ್ಬರು ಪಾತ್ರವೊಂದಕ್ಕೆ ನಾನೇ ಆಗಬೇಕು ಎಂದು ಕೇಳಿದ್ದು ನನ್ನ ಸುಕೃತ ಎಂದುಕೊಂಡು ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡೆ. ಇದು ಬಹಳ ದೊಡ್ಡ ಜವಾಬ್ದಾರಿ. ಈ ಪಾತ್ರ ನನಗೆ ಸಿಕ್ಕಿದ್ದು ನನ್ನ ಪುಣ್ಯವೆಂದೇ ಭಾವಿಸಿದ್ದೇನೆ. ನನ್ನನ್ನು ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಕ್ಕೆ ಬರಗೂರು ರಾಮಚಂದ್ರಪ್ಪನವರಿಗೆ ಧನ್ಯವಾದವನ್ನು ಹೇಳಿದ್ದೇನೆ'' ಎಂದಿದ್ದಾರೆ ಹರಿಪ್ರಿಯಾ.

''ಗಾಂಧಿ ಪತ್ನಿಯಾಗಿ ಮಾತ್ರವೇ ಕಸ್ತೂರ್ ಬಾ ಪರಿಚಿತರು''
''ಇಡೀ ವಿಶ್ವಕ್ಕೆ ಗಾಂಧೀಜಿ ಬಗ್ಗೆ ಪ್ರತಿ ವಿಷಯವೂ ಗೊತ್ತು ಆದರೆ ಕಸ್ತೂರ್ ಬಾ ಬಗ್ಗೆ ಹೆಚ್ಚಿಗೆ ಗೊತ್ತಿಲ್ಲ. ಆಕೆ ಕೇವಲ ಗಾಂಧಿಯವರ ಪತ್ನಿಯಾಗಿ ಮಾತ್ರವೇ ಪ್ರಪಂಚಕ್ಕೆ ಪರಿಚಿತರು. ಈ ಸಿನಿಮಾ ಕಸ್ತೂರ್ ಬಾ ಅವರ ಬಗ್ಗೆ ಲೋಕಕ್ಕೆ ತಿಳಿಸಿಕೊಡುವ ಪ್ರಯತ್ನ. ನಟಿಸುವಾಗ ಕಸ್ತೂರ್ ಬಾ ಆಗಿ ಜಗತ್ತನ್ನು ನೋಡುವುದು, ವರ್ತಿಸುವುದು, ಅವರ ವ್ಯಕ್ತಿತ್ವ ಆವಾಹಿಸಿಕೊಳ್ಳುವುದು ನನಗೆ ಸವಾಲಾಗಿತ್ತು'' ಎಂದಿದ್ದಾರೆ ಹರಿಪ್ರಿಯಾ.

ಕಸ್ತೂರ್ ಬಾ ಬಗ್ಗೆ ಸಾಕಷ್ಟು ಕಲಿತೆ: ಹರಿಪ್ರಿಯಾ
''ಸಿನಿಮಾದಲ್ಲಿ ನಟಿಸುವ ಮೂಲಕ ಕಸ್ತೂರ್ ಬಾ ಕುರಿತು ಸಾಕಷ್ಟು ವಿಷಯ ಕಲಿತುಕೊಂಡೆ. ಪತ್ನಿ ಹಾಗೂ ತಾಯಿಯಾಗಿ ಕಸ್ತೂರ ಬಾ ವ್ಯಕ್ತಿತ್ವವನ್ನು ನಾನು ಅರಿತುಕೊಂಡೆ, ಅವರ ತ್ಯಾಗವನ್ನು ಅರ್ಥಮಾಡಿಕೊಂಡೆ. ಬರಗೂರು ಅವರಿಗೆ ಧನ್ಯವಾದ ಹೇಳಲೇಬೇಕು. ಅವರು ಪೂರ್ಣ ಯೋಜನೆಯ ಮೂಲಕ ಚಿತ್ರೀಕರಣ ಮಾಡಿದರು'' ಎಂದಿದ್ದಾರೆ ಹರಿಪ್ರಿಯಾ. 'ತಾಯಿ ಕಸ್ತೂರ್ ಗಾಂಧಿ' ಸಿನಿಮಾಕ್ಕೆ ಶಮಿತಾ ಮಲ್ನಾಡ್ ಸಂಗೀತ ನೀಡಿದ್ದಾರೆ. ನಾಗರಾಜ ಅವಧಾನಿ ಕ್ಯಾಮೆರಾ ಹಿಡಿದಿದ್ದಾರೆ.