»   » 'ದುರ್ಯೋಧನ'ನನ್ನು ಮರುಳು ಮಾಡುವ 'ಮಾಯೆ' ಹರಿಪ್ರಿಯಾ

'ದುರ್ಯೋಧನ'ನನ್ನು ಮರುಳು ಮಾಡುವ 'ಮಾಯೆ' ಹರಿಪ್ರಿಯಾ

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 50ನೇ ಸಿನಿಮಾ 'ಕುರುಕ್ಷೇತ್ರ'ದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ದರ್ಶನ್ ಹಾಗೂ ಹರಿಪ್ರಿಯಾ ರವರ ಹಾಡಿನಿಂದ ಶುರುವಾದ 'ಮುನಿರತ್ನ ಕುರುಕ್ಷೇತ್ರ'ಕ್ಕೆ ಇದೀಗ ಕೃಷ್ಣ, ಭೀಷ್ಮ, ಅರ್ಜುನ ಕೂಡ ಎಂಟ್ರಿಕೊಟ್ಟಿದ್ದಾರೆ.

'ಕುರುಕ್ಷೇತ್ರ' ಸಿನಿಮಾದಲ್ಲಿನ ತಮ್ಮ ಪಾತ್ರದ ಭಾಗವನ್ನು ಮುಗಿಸಿ ವಾಪಸ್ ಆಗಿರುವ ನಟಿ ಹರಿಪ್ರಿಯಾ, 3D ಸಿನಿಮಾದಲ್ಲಿ ಮೊಟ್ಟ ಮೊದಲ ಬಾರಿಗೆ ನಟಿಸಿದ ತಮ್ಮ ಅನುಭವನ್ನ ಹಂಚಿಕೊಂಡಿದ್ದಾರೆ. ಮುಂದೆ ಓದಿರಿ...


'ಕುರುಕ್ಷೇತ್ರ'ದಲ್ಲಿ ಹರಿಪ್ರಿಯಾ 'ಮಾಯೆ'

'ಕುರುಕ್ಷೇತ್ರ' ಸಿನಿಮಾದಲ್ಲಿ ನಟಿ ಹರಿಪ್ರಿಯಾ 'ಮಾಯೆ' ಎಂಬ ನರ್ತಕಿಯ ಪಾತ್ರ ಮಾಡಿದ್ದಾರೆ. ತಮ್ಮ ಮೋಹಕ ನೃತ್ಯದ ಮೂಲಕ ದುರ್ಯೋಧನನನ್ನು ಮರಳು ಮಾಡುವ 'ಮಾಯೆ' ಪಾತ್ರ ಹರಿಪ್ರಿಯಾರವರದ್ದು.


'ಕುರುಕ್ಷೇತ್ರ' ಸಿನಿಮಾದಲ್ಲಿ ನಟಿ ಹರಿಪ್ರಿಯಾ ದ್ರೌಪದಿ ಅಲ್ಲ.! ಮತ್ತೇನು.?


ಹತ್ತು ಕೆ.ಜಿ ಆಭರಣಗಳು

ಹಾಡಲ್ಲಿ ಹತ್ತು ಕೆ.ಜಿಗೂ ಹೆಚ್ಚಿನ ತೂಕ ಇರುವ ಆಭರಣಗಳನ್ನು ತೊಟ್ಟು ಸೊಂಟ ಬಳುಕಿಸಿದ್ದಾರಂತೆ ನಟಿ ಹರಿಪ್ರಿಯಾ.


'ಕುರುಕ್ಷೇತ್ರ'ದ ಮೇಕಿಂಗ್ ಫೋಟೋ ಲೀಕ್, ದರ್ಶನ್, ಹರಿಪ್ರಿಯಾ ಹೊಸ ಲುಕ್


ಮೊದಲ 3D ಸಿನಿಮಾ ಅನುಭವ

ನಟಿ ಹರಿಪ್ರಿಯಾ ಅಭಿನಯಿಸುತ್ತಿರುವ ಮೊದಲ 3D ಸಿನಿಮಾ 'ಕುರುಕ್ಷೇತ್ರ'. ಹಾಡಿನ ಚಿತ್ರೀಕರಣ ಮಾಡುವಾಗಲೂ, 3D ಕನ್ನಡಕ ಧರಿಸಿ ಮಾನಿಟರ್ ಮೂಲಕ ಶಾಟ್ ಗಳನ್ನ ನೋಡುತ್ತಿದ್ದರಂತೆ ನಟಿ ಹರಿಪ್ರಿಯಾ.


15 ದಿನಗಳ ಶೂಟಿಂಗ್ ಮುಗಿಸಿದ 'ಕುರುಕ್ಷೇತ್ರ': ವಿಶೇಷತೆಗಳೇನು?


ಮೂರು ಕ್ಯಾಮರಾಗಳಲ್ಲಿ ಶೂಟಿಂಗ್

ಮೂರ್ಮೂರು ಕ್ಯಾಮರಾಗಳಲ್ಲಿ ಸೆರೆಯಾಗುತ್ತಿರುವ 'ಕುರುಕ್ಷೇತ್ರ' ಚಿತ್ರದ ಚಿತ್ರೀಕರಣದಲ್ಲಿ ನಟ ದರ್ಶನ್, ಅಂಬರೀಶ್, ರವಿಚಂದ್ರನ್ ಸೇರಿದಂತೆ ಹಲವು ಕಲಾವಿದರು ಭಾಗಿಯಾಗಿದ್ದಾರೆ. ಚಿತ್ರಕ್ಕೆ ನಾಗಣ್ಣ ಆಕ್ಷನ್ ಕಟ್ ಹೇಳುತ್ತಿದ್ದಾರೆ.


English summary
Kannada Actress Haripriya will be seen as 'Maaye' in Kannada Movie 'Kurukshetra'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada