»   » ಮುದ್ದು ಮಕ್ಕಳ ಹುಟ್ಟುಹಬ್ಬ ಆಚರಣೆ ಮಾಡಿದ ನಟಿ 'ಹರಿಪ್ರಿಯಾ'

ಮುದ್ದು ಮಕ್ಕಳ ಹುಟ್ಟುಹಬ್ಬ ಆಚರಣೆ ಮಾಡಿದ ನಟಿ 'ಹರಿಪ್ರಿಯಾ'

Posted By:
Subscribe to Filmibeat Kannada

'ಕನಕ'ನ ಕನ್ಯೆ ನಟಿ ಹರಿಪ್ರಿಯಾ ತಮ್ಮ ಮುದ್ದು ಮಕ್ಕಳ ಹುಟ್ಟುಹಬ್ಬವನ್ನ ಆಚರಣೆ ಮಾಡಿದ್ದಾರೆ. ಅಯ್ಯೋ ಹರಿಪ್ರಿಯಾಗೆ ಇನ್ನೂ ಮದುವೆನೇ ಆಗಿಲ್ಲ, ಮಕ್ಕಳು ಎಲ್ಲಿಂದ ಬಂದರು... ಅಂತ ಕನ್ ಫ್ಯೂಸ್ ಆಗಬೇಡಿ.

ಮುದ್ದು ಮಕ್ಕಳ ಬರ್ತಡೇ ಸೆಲಬ್ರೇಷನ್ ಅಂತ ಫೋಟೋ ಸಮೇತ ನಟಿ ಹರಿಪ್ರಿಯಾ ತಮ್ಮ ಟ್ವಿಟ್ಟರ್ ನಲ್ಲಿ ಹಾಕಿಕೊಂಡಿದ್ದಾರೆ. ಅಷ್ಟಕ್ಕೂ ಹರಿಪ್ರಿಯಾ ಹುಟ್ಟುಹಬ್ಬ ಆಚರಣೆ ಮಾಡುತ್ತಿರುವುದು ತಮ್ಮ ಮನೆಯಲ್ಲಿ ಸಾಕಿರುವ ಮುದ್ದು ನಾಯಿಗಳದ್ದು.

 Haripriya has celebrated her pets birthday at home

ಹರಿಪ್ರಿಯಾ ಮನೆಯಲ್ಲಿ ಗೋಲ್ಡನ್ ರಿಟ್ರೀವರ್ (Golden Retriever) ಹಾಗೂ ಶಿಹ್ ತ್ಸು(Shih Tzu) ಜಾತಿಯ ಎರಡು ಶ್ವಾನಗಳನ್ನ ಸಾಕಿಕೊಂಡಿದ್ದಾರೆ. ಲಕ್ಕಿ ಮತ್ತು ಹ್ಯಾಪಿ ಅಂತ ಎರಡು ನಾಯಿಗಳಿಗೆ ನಾಮಕರಣ ಮಾಡಲಾಗಿದ್ದು ಇಂದು ಇಬ್ಬರ ಹುಟ್ಟುಹಬ್ಬವನ್ನ ಮನೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಣೆ ಮಾಡಿದ್ದಾರೆ.

ಲಕ್ಕಿಯ ನಾಲ್ಕನೇ ವರ್ಷದ ಹುಟ್ಟುಹಬ್ಬ ಹಾಗೂ ಹ್ಯಾಪಿಯ ಎರಡನೇ ವರ್ಷದ ಬರ್ತಡೇಯನ್ನ ಸೆಲೆಬ್ರೇಟ್ ಮಾಡಿದ್ದಾರೆ ಹರಿಪ್ರಿಯಾ. ಹುಟ್ಟುಹಬ್ಬದ ಸಮಾರಂಭದಲ್ಲಿ ಸಂಗೀತ ನಿರ್ದೇಶಕ ಅಭಿಷೇಕ್ ಫ್ಯಾಮಿಲಿ ಕೂಡ ಭಾಗಿಯಾಗಿದ್ರು.

 Haripriya has celebrated her pets birthday at home

ಇತ್ತೀಚಿಗಷ್ಟೇ ದಿನಕರ್ ತೂಗುದೀಪ್ ನಿರ್ದೇಶನದ 'ಲೈಫ್ ಜೊತೆ ಒಂದ್ ಸೆಲ್ಫಿ' ಸಿನಿಮಾದ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ ಹರಿಪ್ರಿಯಾ. ಸ್ಟಾರ್ ಗಳ ಮನೆಗಳಲ್ಲಿ ಸಾಕುಪ್ರಾಣಿಗಳನ್ನ ಹೆಚ್ಚಾಗಿ ಸಾಕೋದು ಸಾಮಾನ್ಯ. ಆದರೆ ತಮ್ಮ ಬ್ಯುಸಿ ಶೆಡ್ಯೂಲ್ ನಡುವೆಯೂ ತಾವು ಮುದ್ದು ಮಾಡುವ ಪ್ರಾಣಿಗಳನ್ನ ಕಾಳಜಿ ಮಾಡೋದು ತುಂಬಾನೇ ಮುಖ್ಯವಾಗಿರುತ್ತೆ.

English summary
Kannada Actress Haripriya of 'Neer Dose' fame has celebrated her Pets birthday at home. Check out the picture.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada