ಅರಿಶಿಣ ಶಾಸ್ತ್ರದ ಸಂಭ್ರಮದಲ್ಲಿ ನಟಿ ಹರಿಪ್ರಿಯಾ

Recommended Video

ಅರಿಶಿಣ ಶಾಸ್ತ್ರದ ಸಂಭ್ರಮದಲ್ಲಿ ನಟಿ ಹರಿಪ್ರಿಯಾ..! | FILMIBEAT KANNADA

ನಟಿ ಹರಿಪ್ರಿಯಾ ಅರಿಶಿಣ ಶಾಸ್ತ್ರದ ಸಂಭ್ರಮದಲ್ಲಿ ಇದ್ದಾರೆ. ಈ ಸಂತಸದ ಕ್ಷಣಗಳ ಫೋಟೋಗಳನ್ನು ಅವರೇ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.

ಅಂದಹಾಗೆ, ಸ್ಯಾಂಡಲ್ ವುಡ್ ನಲ್ಲಿ ಕಳೆದ ವರ್ಷ ಸಾಕಷ್ಟು ಮದುವೆಗಳು ನಡೆಯಿತು. ನಟಿ ಮೇಘನಾ ರಾಜ್ - ಚಿರಂಜೀವಿ ಸರ್ಜಾ, ದಿಗಂತ್ - ಐಂದ್ರಿತಾ, ನಿರ್ದೇಶಕ ಪವನ್ ಒಡೆಯರ್, ಸಂತೋಷ್ ಆನಂದ್ ರಾಮ್, ನಟ ಸುನೀಲ್, ನಟಿ ನಯನಾ ಪುಟ್ಟಸ್ವಾಮಿ ಹೀಗೆ ಸಾಲು ಸಾಲು ಕಲ್ಯಾಣೋತ್ಸವಗಳಿಗೆ 2018 ಸಾಕ್ಷಿಯಾಗಿತ್ತು.

ಅದೇ ರೀತಿ ಹರಿಪ್ರಿಯಾ ಕೂಡ ಈ ವರ್ಷದ ಪ್ರಾರಂಭದಲ್ಲಿ ನಟಿ ಹರಿಪ್ರಿಯಾ ತಮ್ಮ ಮದುವೆ ಸಂಭ್ರಮದಲ್ಲಿದ್ದಾರೆ. ಮುಂದೆ ಓದಿ...

ಹರಿಪ್ರಿಯಾ ಅರಿಶಿಣ ಶಾಸ್ತ್ರ

ಹರಿಪ್ರಿಯಾ ಅರಿಶಿಣ ಶಾಸ್ತ್ರ

ನಟಿ ಹರಿಪ್ರಿಯಾ ಸದ್ಯ ಅರಿಶಿಣ ಶಾಸ್ತ್ರದ ಸಂಭ್ರಮದಲ್ಲಿದ್ದಾರೆ. ಆ ಫೋಟೋಗಳನ್ನು ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಅವರೇ ಹಂಚಿಕೊಂಡಿದ್ದಾರೆ. ''ಈ ಪ್ರೀತಿ ಪಾತ್ರರ ಜೊತೆಗೆ ಅರಿಶಿಣ ಶಾಸ್ತ್ರದ ತಯಾರಿಯಲ್ಲಿದ್ದೇನೆ.'' ಎಂದು ಬರೆದುಕೊಂಡಿರುವ ನೀರ್ ದೊಸೆ ಚಲುವೆ ಅಭಿಮಾನಿಗಳಿಗೆ ಗೂಗ್ಲಿ ಹಾಕಿದ್ದಾರೆ.

ಸಿನಿಮಾದ ಚಿತ್ರೀಕರಣ

ಸಿನಿಮಾದ ಚಿತ್ರೀಕರಣ

ಹರಿಪ್ರಿಯಾ ಅವರ ಈ ಫೋಟೋಗಳು 'ಎಲ್ಲಿದೆ ಇಲ್ಲಿ ತನಕ' ಸಿನಿಮಾದ ಚಿತ್ರೀಕರಣದ ಫೋಟೋಗಳಾಗಿವೆ. ನಟ ಸೃಜನ್ ಲೋಕೇಶ್ ಜೋಡಿಯಾಗಿ ಹರಿಪ್ರಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮದುವೆಯ ದೃಶ್ಯವೊಂದು ಬರುತ್ತಿದ್ದು, ಅದರ ಚಿತ್ರೀಕರಣ ಸದ್ಯ ನಡೆಯುತ್ತಿದೆ.

ಸೃಜನ್ ನಿರ್ಮಾಣದ ಚಿತ್ರ

ಸೃಜನ್ ನಿರ್ಮಾಣದ ಚಿತ್ರ

'ಎಲ್ಲಿದೆ ಇಲ್ಲಿ ತನಕ' ನಟ ಸೃಜನ್ ಲೋಕೇಶ್ ನಿರ್ಮಾಣದ ಸಿನಿಮಾವಾಗಿದೆ. ಕಿರುತೆರೆಯಲ್ಲಿಯೂ ಬ್ಯುಸಿ ಇರುವ ಸೃಜನ್ ಹಿರಿತೆರೆಯಲ್ಲಿಯಲ್ಲಿಯೂ ಸಿನಿಮಾ ಮಾಡುತ್ತಿದ್ದಾರೆ. ತೇಜಸ್ವಿ ಸಿನಿಮಾದ ನಿರ್ದೇಶನ ಮಾಡುತ್ತಿದ್ದು, ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ.

ಹರಿಪ್ರಿಯಾ ಕೈನಲ್ಲಿ ಸಾಕಷ್ಟು ಸಿನಿಮಾಗಳು

ಹರಿಪ್ರಿಯಾ ಕೈನಲ್ಲಿ ಸಾಕಷ್ಟು ಸಿನಿಮಾಗಳು

ಹರಿಪ್ರಿಯಾ ಸದ್ಯ 'ಎಲ್ಲಿದೆ ಇಲ್ಲಿ ತನಕ' ಸಿನಿಮಾದ ಜೊತೆಗೆ ಸಾಕಷ್ಟು ಬೇರೆ ಬೇರೆ ಸಿನಿಮಾ ಮಾಡುತ್ತಿದ್ದಾರೆ. 'ಬೆಲ್ ಬಾಟಂ', 'ಕನ್ನಡ್ ಗೊತ್ತಿಲ್ಲ', 'ಡಾಟರ್ ಆಫ್ ಪಾರ್ವತಮ್ಮ', 'ಸೂಜಿದಾರ', 'ಕಥಾ ಸಂಗಮ' ಸಿನಿಮಾಗಳು ಹರಿಪ್ರಿಯಾ ಅವರ ಮುಂದಿನ ಸಿನಿಮಾಗಳಾಗಿವೆ.

More from Filmibeat

English summary
Actress Haripriya's shared 'Ellidde Illeethanka' kannada movie shooting photos.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X