For Quick Alerts
  ALLOW NOTIFICATIONS  
  For Daily Alerts

  ಹರ್ಷಿಕಾ ಪೂಣಚ್ಚ ಹೃದಯ ಕದ್ದ ಚೋರ ಡಸ್ಟರ್

  By Rajendra
  |

  ಬಬ್ಲಿ ತಾರೆ ಹರ್ಷಿಕಾ ಪೂಣಚ್ಚ ಅವರ ಹೃದಯವನ್ನು ಚೋರನೊಬ್ಬ ಕದ್ದಿದ್ದಾನೆ. ಇಂಜಿನಿಯರಿಂಗ್ ಪದವೀಧರೆಯಾಗಿರುವ ಅವರು ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಾ ಚಲನಚಿತ್ರಗಳಲ್ಲೂ ಬಿಜಿಯಾಗಿರುವುದು ಗೊತ್ತೇ ಇದೆ.

  ಇಷ್ಟಕ್ಕೂ ಅವರು ಹೃದಯ ಕದ್ದಿರುವ ಚೋರನ ಹೆಸರು 'ರೆನೋ ಡಸ್ಟರ್'! ಇತ್ತೀಚೆಗೆ ಅವರು ಟಾಪ್ ಎಂಡ್ ಮಾಡೆಲ್ 'ರೆನೋ ಡಸ್ಟರ್' ಕಾರನ್ನು ಕೊಂಡುಕೊಂಡಿದ್ದಾರೆ. ಈ ಕಾರಿನ ಆನ್ ರೋಡ್ ಬೆಲೆ ರು.17 ಲಕ್ಷ. ಮೊದಲು ಕಾರನ್ನು ಟೆಸ್ಟ್ ಡ್ರೈವ್ ಮಾಡಿದೆ. ಕಾರು ಅದ್ಭುತ ಎನ್ನಿಸಿತು. ಕೂಡಲೆ ಬುಕ್ ಮಾಡಿದೆ ಎನ್ನುತ್ತಾರೆ ಹರ್ಷಿಕಾ.

  ಅಂದಹಾಗೆ ಈ ಕಾರನ್ನು ಅವರು ಚಲನಚಿತ್ರಗಳಿಂದ ಸಂಪಾದಿಸಿದ ಹಣದಿಂದ ಕೊಂಡುಕೊಂಡಿಲ್ಲವಂತೆ. ಬದಲಾಗಿ ಸಾಫ್ಟ್ ವೇರ್ ಕಂಪನಿಯಲ್ಲಿ ದುಡಿದ ದುಡ್ಡಿನಲ್ಲಿ ಕೊಂಡುಕೊಂಡಿದ್ದಾರಂತೆ. ಸದ್ಯಕ್ಕೆ ಹರ್ಷಿಕಾ ಅವರು 'ಬಿತ್ರಿ' ಚಿತ್ರದಲ್ಲಿ ಬಿಜಿಯಾಗಿದ್ದಾರೆ. 'ಒಲವೇ ಮಂದಾರ' ಖ್ಯಾತಿಯ ಶ್ರೀಕಿ ಚಿತ್ರದ ನಾಯಕ.

  ರಮೇಶ್ ಅರವಿಂದ ಜೊತೆಗಿನ 'ಮಂಗನ ಕೈಲಿ ಮಾಣಿಕ್ಯ' (ಈ ಚಿತ್ರಕ್ಕೆ ಮೊದಲು 'ರಸಗುಲ್ಲ' ಎಂದು ಹೆಸರಿಡಲಾಗಿತ್ತು) ಚಿತ್ರದಲ್ಲೂ ಅಭಿನಯಿಸಿದ್ದಾರೆ. ತಂಗಿ ಪಾತ್ರಗಳಲ್ಲಿ ಗುರುತಿಸಿಕೊಂಡಿದ್ದ ಹರ್ಷಿಕಾ ಅವರು ಇನ್ನು ಮುಂದೆ ಗ್ಲಾಮರ್ ಪಾತ್ರಗಳ ಕಡೆಗೂ ಒಲವು ತೋರಿದ್ದಾರೆ. ಹರ್ಷಿಕಾ ಅಭಿನಯದ ಅದ್ವೈತ, ಬಿತ್ರಿ ಹಾಗೂ 'ಅಲೆ' ಚಿತ್ರಗಳು ಬಿಡುಗಡೆಗೆ ಕಾದಿವೆ. (ಏಜೆನ್ಸೀಸ್)

  English summary
  Kannada films bubbly actress Hashika Poonacha buys new car Renault Duster (Top end model). The cars on road vaule is Rs. 17 lacs. The actress says that she chose the colour and opted for the best accessories of the car.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X