»   » ಕುಡಿದ ಮತ್ತಿನಲ್ಲಿ ಹಾಗೆ ಹೇಳಿದ್ದು ಸರಿಯಲ್ಲ: ಶಿವಣ್ಣ

ಕುಡಿದ ಮತ್ತಿನಲ್ಲಿ ಹಾಗೆ ಹೇಳಿದ್ದು ಸರಿಯಲ್ಲ: ಶಿವಣ್ಣ

Posted By:
Subscribe to Filmibeat Kannada
<ul id="pagination-digg"><li class="next"><a href="/news/shivarajkumar-soorappa-babu-toogudeepa-srinivas-066480.html">Next »</a></li></ul>
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಂದೆ ಹಾಗೂ ಹಿರಿಯ ನಟ ದಿವಂಗತ ತೂಗುದೀಪ ಶ್ರೀನಿವಾಸ್ ಅವರನ್ನು ಮದ್ಯದ ಅಮಲಿನಲ್ಲಿ ಬಾಯಿಗೆ ಬಂದಂತೆ ಮಾತನಾಡಿ ನಿಂದಿಸಿರುವ ಕನ್ನಡ ಚಿತ್ರಗಳ ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ದರ್ಶನ್ ಅಭಿಮಾನಿಗಳು ಸಿಡಿದೆದ್ದಿರುವ ಈ ಸಂದರ್ಭದಲ್ಲೇ ನಟ ಶಿವರಾಜ್ ಕುಮಾರ್ ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ. (ಯೂಟ್ಯೂಬ್ ವಿಡಿಯೋ)

"ಕುಡಿದ ಮತ್ತಿನಲ್ಲಿ ಹಿರಿಯ ಕಲಾವಿದರ ಬಗ್ಗೆ ಹೀಗೆ ಮಾತನಾಡಿದ್ದು ಸರಿಯಲ್ಲ. ಶಿವ ಮೂರನೇ ಕಣ್ಣು ತೆರೆಯುತ್ತಾನೆ" ಎಂದು ಹೇಳಿಕೆ ನೀಡಿದ್ದಾರೆ. ಈ ಮೊದಲು ನಡೆದ ಬೆಳವಣಿಗೆ ವೇಳೆ, ವೇಳೆ ಶಿವರಾಜ್ ಕುಮಾರ್ ಅವರು ಕುಟುಂಬ ಸಮೇತ ಶ್ರೀಲಂಕಾ ಪ್ರವಾಸದಲ್ಲಿದ್ದರು. ಇದೀಗ ಹಿಂದಿರುಗಿರುವ ಶಿವಣ್ಣ ಇತ್ತೀಚಿಗಷ್ಟೇ ಚಿತ್ರೀಕರಣ ಮುಗಿಸಿಕೊಂಡಿರುವ ತಮ್ಮ 'ಅಂದರ್ ಬಾಹರ್' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ್ದಾರೆ.

ಮೂರು ವರ್ಷಗಳ ಹಿಂದೆ ಸ್ನೇಹಿತರ ಜೊತೆ ಪಾನಮತ್ತರಾಗಿ ಮಾತನಾಡುತ್ತಿದ್ದ ಸೂರಪ್ಪ ಬಾಬುವಿನ ಈ ವಿಡಿಯೋ ಈಗ ಯೂಟ್ಯೂಬ್ ನಲ್ಲಿ ಹರಿದಾಡುತ್ತಿದೆ. ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿದ್ದ ತೂಗುದೀಪ ಶ್ರೀನಿವಾಸ್ ಮಗ ಹಾಗೂ ದರ್ಶನ್ ತಮ್ಮ ದಿನಕರ್ ""ಬೀದಿಯಲ್ಲಿ ಬೊಗಳುವ ನಾಯಿಗಳಿಗೆಲ್ಲಾ ಪ್ರತಿಕ್ರಿಯಿಸಲ್ಲ. ಅವನಿಗೆ ಸಿನಿಮಾ ಮಾಡಲು ಯೋಗ್ಯತೆ ಇಲ್ಲ. ಇಂತಹವರನ್ನು ಇಂಡಸ್ಟ್ರಿಯಿಂದ ಕತ್ತುಹಿಡಿದು ಹೊರತಳ್ಳಬೇಕು" ಎಂದು ಖಾರವಾಗಿ ಹೇಳಿದ್ದರು.

ಈ ಬೆಳವಣಿಗೆಗೆ ಮೊದಲು ನಡೆದ ಇನ್ನೊಂದು ಘಟನೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ನಿರ್ಮಾಪಕ ಸೂರಪ್ಪ ಬಾಬು ಅವರಿಗೆ ಸಂಬಂಧಿಸಿತ್ತು. 'ವರದ' ಎಂಬ ಚಿತ್ರಕ್ಕಾಗಿ ಶಿವಣ್ಣನಿಗೆ ರು.20 ಲಕ್ಷ ಅಡ್ವಾನ್ಸ್ ಕೊಟ್ಟಿದ್ದೆ. ಆದರೆ ಆ ಚಿತ್ರದ ಶೂಟಿಂಗ್ ಇನ್ನೂ ಪ್ರಾರಂಭವಾಗಿಲ್ಲ. ಈ ಹಣವನ್ನು ತಮಗೆ ವಾಪಸು ಕೊಡಿಸಬೇಕು ಎಂದು ಲಿಖಿತ ರೂಪದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸೂರಪ್ಪ ಬಾಬು ದೂರು ನೀಡಿದ್ದರು.

'ನಿರ್ಮಾಪಕರ ಪಾಲಿನ ಡಾರ್ಲಿಂಗ್' ಎಂದೇ ಖ್ಯಾತರಾಗಿರುವ ನಟ ಶಿವರಾಜ್ ಕುಮಾರ್ ವಿರುದ್ಧ ಹೀಗೆ ದೂರು ದಾಖಲಾಗಿರುವುದು ಇದೇ ಮೊದಲು. ಆದರೆ ಆ ವೇಳೆ ಶಿವರಾಜ್ ಕುಮಾರ್ ಅವರು ಕುಟುಂಬ ಸಮೇತ ಶ್ರೀಲಂಕಾ ಪ್ರವಾಸದಲ್ಲಿದ್ದರು. ಸೂರಪ್ಪ ಬಾಬು ದೂರಿಗೆ 'ಈ ಸಮಸ್ಯೆಯನ್ನು ಕೇಂದ್ರ ಸಂಧಾನ ಸಮಿತಿ ಮುಂದಿಟ್ಟು ಪರಿಹರಿಸಿಕೊಳ್ಳಿ' ಎಂದು ಫಿಲಂ ಚೇಂಬರ್ ಸೂಚಿಸಿದೆ ಎನ್ನಲಾಗಿತ್ತು.

ಅಭಿನಯ ಚಕ್ರವರ್ತಿ ಬಿರುದಾಂಕಿತ ಸುದೀಪ್ ಅವರು ಈಗಾಗಲೆ 'ವರದನಾಯಕ' ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ತಮ್ಮ ಚಿತ್ರಕ್ಕೆ 'ವರದ' ಎಂಬ ಶೀರ್ಷಿಕೆ ಸರಿಹೋಗಲ್ಲ. ಹಾಗಾಗಿ ತಾನು ಸಿನಿಮಾ ಕೈಬಿಟ್ಟಿದ್ದೇನೆ. ಶಿವಣ್ಣನಿಗೆ ಕೊಟ್ಟಿರುವ ರು.20 ಲಕ್ಷ ಅಡ್ವಾನ್ಸ್ ಹಣವನ್ನು ವಾಪಸ್ ಕೊಡಿಸಿ ಎಂಬುದು ಈಗ ಸೂರಪ್ಪ ಬಾಬು ಅವರ ಅಹವಾಲು. ಮುಂದಿನ ಪುಟ ನೋಡಿ...

<ul id="pagination-digg"><li class="next"><a href="/news/shivarajkumar-soorappa-babu-toogudeepa-srinivas-066480.html">Next »</a></li></ul>
English summary
Hat Trick Hero Shivarajkumar told that this is not correct to speak using bad words on late actor Toogudeepa Srinivas in drunken state. Before this, producer Surappa Babu filed a case on Shivarajkumar in Karnataka Film Chamber of Commerce (KFCC) to get the Hat-trick Hero to return the advance paid to him.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada