For Quick Alerts
  ALLOW NOTIFICATIONS  
  For Daily Alerts

  'ಬಂಗಾರದ ಮನುಷ್ಯ' ನೋಡಿದ ಮಣ್ಣಿನ ಮಗ ದೇವೇಗೌಡರು ಎಷ್ಟು ಸ್ಟಾರ್ ಕೊಟ್ರು.?

  By Naveen
  |

  ಶಿವರಾಜ್ ಕುಮಾರ್ ಅಭಿನಯದ 'ಬಂಗಾರ ಸನ್ ಆಫ್ ಸನ್ ಬಂಗಾರದ ಮನುಷ್ಯ' ಚಿತ್ರವನ್ನು ಮಾಜಿ ಪ್ರಧಾನಿ ಮಣ್ಣಿನ ಮಗ ದೇವೇಗೌಡರು ಕಣ್ತುಂಬಿಕೊಂಡಿದ್ದಾರೆ. ನಿನ್ನೆ (ಮೇ 22) ಮೈಸೂರಿನ DRC ಮಲ್ಟಿಪ್ಲೆಕ್ಸ್ ನಲ್ಲಿ ದೇವೇಗೌಡರು ಚಿತ್ರವನ್ನು ವೀಕ್ಷಿಸಿದರು.

  'ಬಂಗಾರ ಸನ್ ಆಫ್ ಸನ್ ಬಂಗಾರದ ಮನುಷ್ಯ' ಸಿನಿಮಾ ಅನ್ನದಾತ ರೈತರ ಕಥೆಯನ್ನು ಹೊಂದಿದೆ. ಇದೇ ಕಾರಣದಿಂದ ದೇವೇಗೌಡರು ಈ ಸಿನಿಮಾವನ್ನು ನೋಡುವುದಕ್ಕೆ ಹೋಗಿದ್ದರು. ಅಭಿಮಾನಿಗಳೇನೋ ಶಿವಣ್ಣನ ಸಿನಿಮಾ ಸೂಪರ್ ಅಂತ ಹೇಳಿದ್ದರು. ಆದರೆ, ದೇವೇಗೌಡರು ಚಿತ್ರದ ಬಗ್ಗೆ ಏನು ಹೇಳಬಹುದು ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು.

  'ಬಂಗಾರ ಸನ್ ಆಫ್ ಸನ್ ಬಂಗಾರದ ಮನುಷ್ಯ' ಸಿನಿಮಾ ನೋಡಿ ಬಂದ ದೇವೇಗೌಡರು ಚಿತ್ರದ ಬಗ್ಗೆ ಕೊಟ್ಟ ರಿವ್ಯೂ ಏನು? ಮಣ್ಣಿನ ಮಗ ಈ ಚಿತ್ರಕ್ಕೆ ಎಷ್ಟು ಸ್ಟಾರ್ ಕೊಟ್ಟಿದ್ದಾರೆ.? ಎನ್ನುವ ಕುತುಹಲ ಇದ್ದರೆ ಪೂರ್ತಿ ವರದಿ ಓದಿರಿ....

  'ತಂದೆಗೆ ತಕ್ಕ ಮಗ'

  'ತಂದೆಗೆ ತಕ್ಕ ಮಗ'

  ''ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಚಿತ್ರವನ್ನು ನೋಡಿದೆ. ಶಿವರಾಜ್ ಕುಮಾರ್ ಅಭಿನಯ ಅತ್ಯುತ್ತಮವಾಗಿದೆ. ಅವರು ತಂದೆಗೆ ತಕ್ಕ ಮಗ ಎನ್ನುವುದನ್ನು ಸಾಬೀತು ಮಾಡಿದ್ದಾರೆ.''- ದೇವೇಗೌಡ, ಮಾಜಿ ಪ್ರಧಾನಿ

  ಬೆಸ್ಟ್ ಆಕ್ಟಿಂಗ್

  ಬೆಸ್ಟ್ ಆಕ್ಟಿಂಗ್

  ''ಸಿನಿಮಾದಲ್ಲಿ ರೈತರ ಕಷ್ಟ ಏನು ಎನ್ನುವುದನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಕಥೆ, ನಿರ್ದೇಶನ ಚೆನ್ನಾಗಿದೆ. ಎಲ್ಲ ಕಲಾವಿದರ ಅಭಿನಯ ಸೊಗಸಾಗಿದೆ. ಶಿವರಾಜ್ ಕುಮಾರ್ ಬೆಸ್ಟ್ ಆಕ್ಟಿಂಗ್ ಮಾಡಿದ್ದಾರೆ''- ದೇವೇಗೌಡ, ಮಾಜಿ ಪ್ರಧಾನಿ

  ಇಂತಹ ಸಿನಿಮಾಗಳನ್ನು ಮಿಸ್ ಮಾಡಲ್ಲ

  ಇಂತಹ ಸಿನಿಮಾಗಳನ್ನು ಮಿಸ್ ಮಾಡಲ್ಲ

  ''ಇಂತಹ ಸಿನಿಮಾಗಳು ಬಂದಾಗ ನಾನು ಮಿಸ್ ಮಾಡದೆ ನೋಡಿ ರೈತರ ವಿಷಯಗಳ ಬಗ್ಗೆ ಗಮನ ಹರಿಸುತ್ತೇನೆ. ಜೊತೆಗೆ ರಾತ್ರಿ 12 ಗಂಟೆ ವರೆಗೆ ಟಿವಿ ನೋಡಿ ರೈತರ ಸಮಸ್ಯೆ ತಿಳಿದುಕೊಳ್ಳುತ್ತಾ ಇರುತ್ತೇನೆ.'' - ದೇವೇಗೌಡ, ಮಾಜಿ ಪ್ರಧಾನಿ

  ಅನ್ನದಾತರನ್ನು ಉಳಿಸಿಬೇಕು

  ಅನ್ನದಾತರನ್ನು ಉಳಿಸಿಬೇಕು

  ''ರೈತರನ್ನು ಮರೆತ ಯಾವ ಸರ್ಕಾರವು ದೇಶದಲ್ಲಿ ಉಳಿಯುವುದಿಲ್ಲ. ವಿದ್ಯಾರ್ಥಿ ಮತ್ತು ರೈತರನ್ನು ಎದುರು ಹಾಕಿಕೊಂಡ ಸರ್ಕಾರ ಎಲ್ಲಿಯೂ ಇರಲು ಸಾಧ್ಯವಿಲ್ಲ''. - ದೇವೇಗೌಡ, ಮಾಜಿ ಪ್ರಧಾನಿ

  ನೀತಿ ಪಾಠ ಹೇಳಿದೆ

  ನೀತಿ ಪಾಠ ಹೇಳಿದೆ

  ''ಬಂಗಾರ ಸನ್ ಆಫ್ ಸನ್ ಬಂಗಾರದ ಮನುಷ್ಯ' ಸಿನಿಮಾ ಎಲ್ಲ ರಾಜಕಾರಣಿಗಳಿಗೆ ನೀತಿ ಪಾಠವನ್ನು ಹೇಳಿದೆ'' - ದೇವೇಗೌಡ, ಮಾಜಿ ಪ್ರಧಾನಿ

  ಮಾತೇ ಸಾಕಲ್ವಾ

  ಮಾತೇ ಸಾಕಲ್ವಾ

  ದೇವೇಗೌಡರು ಸಿನಿಮಾಗೆ ಎಷ್ಟು ಸ್ಟಾರ್ ಕೊಟ್ಟರು ಅಂತ ಬಾಯಿ ಬಿಟ್ಟು ಹೇಳಿಲ್ಲ. ಅವರೇ ಅವರ ಮಾತು ಕೇಳಿದರೆ ಚಿತ್ರಕ್ಕೆ 5 ಸ್ಟಾರ್ ಕೊಟ್ಟಿದ್ದಾರೆ ಎನ್ನುವುದು ಪಕ್ಕಾ.

  English summary
  Former Prime Minister 'Deve Gowda' watched Shiva rajkumar's 'Bangara s/o Bangarada Manushya' in Mysore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X