»   » ಯಾರ ಕೈಗೂ ಸಿಕ್ಕಲ್ಲವಂತೆ ಎಚ್.ಡಿ.ಕೆ ಪುತ್ರ ನಿಖಿಲ್!

ಯಾರ ಕೈಗೂ ಸಿಕ್ಕಲ್ಲವಂತೆ ಎಚ್.ಡಿ.ಕೆ ಪುತ್ರ ನಿಖಿಲ್!

Posted By:
Subscribe to Filmibeat Kannada

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡ್ತಿದ್ದಾರೆ. ಟಾಲಿವುಡ್ ನಿರ್ದೇಶಕ ಎಸ್.ಎಸ್.ರಾಜಮೌಳಿ ಶಿಷ್ಯ ಮಹದೇವ್ ನಿರ್ದೇಶನದ 'ಜಾಗ್ವಾರ್' ಚಿತ್ರದಲ್ಲಿ ನಿಖಿಲ್ ಗೌಡ ಮೊಟ್ಟ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿದ್ದಾರೆ.

ಮಗನ ಚೊಚ್ಚಲ ಚಿತ್ರಕ್ಕೆ ಖುದ್ದು ಎಚ್.ಡಿ.ಕುಮಾರಸ್ವಾಮಿ ಬಂಡವಾಳ ಹಾಕುತ್ತಿದ್ದಾರೆ. ಅಪ್ಪನ ಆಶೀರ್ವಾದದಿಂದ ಚಿತ್ರರಂಗಕ್ಕೆ ಕಾಲಿಡುತ್ತಿರುವ ನಿಖಿಲ್ ಗೌಡ ಮುಂದೆ ಬೇರೆ ಯಾವ ನಿರ್ಮಾಪಕರ ಕೈಗೂ ಸಿಗೋದಿಲ್ಲವಂತೆ.!

HDK son Nikhil Gowda to act only in his Home production

ಹೌದು, ತಮ್ಮ ಹೋಮ್ ಪ್ರೊಡಕ್ಷನ್ ನಲ್ಲಿ ಮಾತ್ರ ನಿಖಿಲ್ ಗೌಡ ಅಭಿನಯಿಸುತ್ತಾರೆ. 'ಬೇರೆ ಯಾವ ನಿರ್ಮಾಪಕರು ಬಂದರೂ, ನಾನು ಒಪ್ಪಿಕೊಳ್ಳೋದಿಲ್ಲ' ಅಂತ ಕಡ್ಡಿತುಂಡು ಮಾಡಿದ ಹಾಗೆ ಹೇಳ್ತಾರೆ ನಿಖಿಲ್ ಗೌಡ. [ಎಚ್.ಡಿ.ಕೆ ಪುತ್ರನಿಗೆ ಶಿವಣ್ಣನ ಪ್ರೀತಿಯ ಶುಭಾಶಯ]

''ಖಂಡಿತ ನಾನು ಡುಡ್ಡಿಗಾಗಿ ಹೀರೋ ಆಗ್ತಿಲ್ಲ. ಪ್ಯಾಶನ್ ಗಾಗಿ ಸಿನಿಮಾ ಮಾಡುತ್ತಿದ್ದೇನೆ. As of Now, ನಾನು ಖಂಡಿತ ಬೇರೆ ಯಾವ ಪ್ರೊಡಕ್ಷನ್ ಗೂ ವರ್ಕ್ ಮಾಡಲ್ಲ. ಮುಂದೆ ಏನಾಗುತ್ತೋ ಗೊತ್ತಿಲ್ಲ. ನನಗಾಗಿ ನನ್ನ ತಂದೆ ಕೂಡ ಸಿನಿಮಾ ಕಡೆ ಮುಖ ಮಾಡಿದ್ದಾರೆ. ನನ್ನ ಹಿಂದೆ ಅವರು ಇರಲೇಬೇಕು'' ಅಂತ 'ಫಿಲ್ಮಿಬೀಟ್ ಕನ್ನಡ' ಜೊತೆ ಮಾತನಾಡುತ್ತಾ ನಿಖಿಲ್ ಗೌಡ ಹೇಳಿದರು. ['ಫಿಲ್ಮಿಬೀಟ್ ಕನ್ನಡ' ವಿಶೇಷ; ಎಚ್.ಡಿ.ಕೆ ಪುತ್ರ ನಿಖಿಲ್ ಸಂದರ್ಶನ]

ಅಲ್ಲಿಗೆ, ಹೀರೋ ಆದರೂ ಗಾಂಧಿನಗರದ ನಿರ್ಮಾಪಕರಿಗೆ ನಿಖಿಲ್ ಗೌಡ ಹುಳಿ ದ್ರಾಕ್ಷಿ ಆದ ಹಾಗೆ ಲೆಕ್ಕ..!

English summary
Ex CM H.D.Kumaraswamy's son Nikhil Gowda is all set to make his Sandalwood debut with the movie 'Jaguar'. Nikhil Gowda clearly states that he will act only in his Own Production and is not available for other Producers.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X