Just In
Don't Miss!
- News
ಖಾತೆ ಹಂಚಿಕೆ ಅಸಮಾಧಾನ: ಸಚಿವ ಸ್ಥಾನಕ್ಕೆ ಜೆ.ಸಿ. ಮಾಧುಸ್ವಾಮಿ ರಾಜೀನಾಮೆ?
- Sports
ಆಸ್ಟ್ರೇಲಿಯಾ ತಂಡದ ಬದ್ಧತೆ ಹಾಗೂ ಪೈಯ್ನ್ ನಾಯಕತ್ವವನ್ನು ಪ್ರಶ್ನಿಸಿದ ಮಾಜಿ ಆಸಿಸ್ ಕ್ರಿಕೆಟಿಗ
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Automobiles
ಭಾರತದಲ್ಲಿ 3 ಸೀರಿಸ್ ಗ್ರ್ಯಾನ್ ಲಿಮೊಸಿನ್ ಬಿಡುಗಡೆ ಮಾಡಿದ ಬಿಎಂಡಬ್ಲ್ಯು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಾಟ್ಯಮಯೂರಿ ಜ್ಯೋತಿಲಕ್ಷ್ಮಿಯ ಗೆಜ್ಜೆ ಗುರುತು
ಸಿನಿಮಾ ಅಂದ್ರೆ ಮನರಂಜನೆ. ಮನರಂಜನೆ ಅಂದ್ಮೇಲೆ ಅಲ್ಲಿ ಮಸಾಲೆ ಇರಲೇಬೇಕು. ಈ ಗರಮಾಗರಂ ಮಸಾಲೆ ಅರೆಯೋಕೆ ಅಂತ ಸಿನಿಮಾಗಳಲ್ಲಿ ಮೈಚಳಿ ಬಿಟ್ಟು ನರ್ತಿಸಿ, ನೋಡುಗರ ಮೈಬಿಸಿ ಏರಿಸಲು ಬಂದ ಮದನಾರಿಯರ ಪೈಕಿ ನಾಟ್ಯಮಯೂರಿ ಜ್ಯೋತಿಲಕ್ಷ್ಮಿ ಕೂಡ ಒಬ್ಬರು.
70ರ ದಶಕದ ಸಿನಿಮಾಗಳಲ್ಲಿ ನಾಯಕಿಯರು ಮೈತುಂಬ ಸೀರೆಯುಟ್ಟು ಮಡಿವಂತಿಕೆಯಿಂದ ಇರುವಾಗಲೇ, ಹಾಡುಗಳ ತಾಳಕ್ಕೆ ತಕ್ಕಂತೆ ರಂಗು ರಂಗಿನ ಚಮಕ್ ಉಡುಪು ಧರಿಸಿ, ದೇಹ ಪ್ರದರ್ಶಿಸಿ, ಸೊಂಟ ಬಳುಕಿಸಿ, ರಸಿಕರ ಎದೆಬಡಿತ ಏರುವಂತೆ ಮಾಡಿದ್ದ ಚಂದ್ರ ಚಕೋರಿ ಈ ಜ್ಯೋತಿಲಕ್ಷ್ಮಿ. [ಮನ ತಣಿಸಿದ ಕ್ಯಾಬರೆ ನರ್ತಕಿಯರಿಗೆ ನುಡಿನಮನ]
ಬಾಲನಟಿ ಆಗಿ ಚಿತ್ರರಂಗ ಪ್ರವೇಶಿಸಿದ ಜ್ಯೋತಿಲಕ್ಷ್ಮಿ, ಕೆಲವು ಸಿನಿಮಾಗಳಲ್ಲಿ 'ನಾಯಕಿ' ಆಗಿ ಕಾಣಿಸಿಕೊಂಡರೂ, ಆಕೆ ಜನಪ್ರಿಯತೆ ಗಳಿಸಿದ್ದು ಕ್ಯಾಬರೇ ಹಾಡುಗಳಿಂದ.! ಮುಂದೆ ಓದಿ.....

300 ಕ್ಕೂ ಹೆಚ್ಚು ಚಿತ್ರಗಳಲ್ಲಿ ಮಿಂಚಿದ ಜ್ಯೋತಿಲಕ್ಷ್ಮಿ
ತಮಿಳು ಸಿನಿ ಅಂಗಳದಿಂದ ಚಿತ್ರ ಜೀವನ ಆರಂಭಿಸಿದ ಜ್ಯೋತಿಲಕ್ಷ್ಮಿ, ಕನ್ನಡ, ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಯ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮಿಂಚಿದ್ದಾರೆ.

ಹಾಡುಗಳ ಲೆಕ್ಕವೆಷ್ಟೋ.?
ಸಿನಿಮಾದಲ್ಲಿ ಜ್ಯೋತಿಲಕ್ಷ್ಮಿ ನೃತ್ಯ ಇದೆ ಅಂತ ತಿಳಿದ ಕೂಡಲೆ ಚಿತ್ರಮಂದಿರಕ್ಕೆ ಜನ ಮುಗಿಬೀಳುತ್ತಿದ್ದ ಕಾಲವದು. ದಕ್ಷಿಣ ಭಾರತದ ನಂಬರ್ ಒನ್ ಐಟಂ ಡ್ಯಾನ್ಸರ್ ಆಗಿದ್ದ ಜ್ಯೋತಿಲಕ್ಷ್ಮಿ, ಕುಣಿದು ಕುಪ್ಪಳಿಸಿರುವ ಹಾಡುಗಳ ಲೆಕ್ಕ ಪಕ್ಕಾ ಇಲ್ಲ.

ಮೋಡಿ ಮಾಡುವ ಪಾತ್ರಗಳೇ ಹೆಚ್ಚು
ಮೊದ ಮೊದಲು ಕ್ಯಾಬರೇ, ಐಟಂ ಸಾಂಗ್ ಗಳಿಗೆ ಮಾತ್ರ ಸೀಮಿತವಾಗಿದ್ದ ಜ್ಯೋತಿಲಕ್ಷ್ಮಿ, ನಂತರ ವಿಲನ್ ಗಳಿಗೆ ಸರಿಸಮಾನವಾದ ಮೋಡಿ ಮಾಡುವ VAMP ಪಾತ್ರಗಳಿಗೂ ಬಣ್ಣ ಹಚ್ಚಿದರು.

ಅಕ್ಕನಿಗೆ ತಂಗಿಯೇ ಪೈಪೋಟಿ
ಒಂದ್ಕಾಲದಲ್ಲಿ ಪಡ್ಡೆಗಳ ಎದೆಯಲ್ಲಿ ಅವಲಕ್ಕಿ ಕುಟ್ಟುತ್ತಿದ್ದ ಜ್ಯೋತಿಲಕ್ಷ್ಮಿಗೆ ಪೈಪೋಟಿ ನೀಡಿದ್ದವರು ಬೇರೆ ಯಾರೂ ಅಲ್ಲ. ಆಕೆಯ ಸ್ವಂತ ಸಹೋದರಿ ಜಯಮಾಲಿನಿ.

ಗೆಜ್ಜೆ ಕಟ್ಟಿ, ಬಣ್ಣ ಹಚ್ಚಿದ ಜಯಮಾಲಿನಿ
ಅಕ್ಕನ ಹಾದಿಯಲ್ಲೇ ತಂಗಿ ಜಯಮಾಲಿನಿ ಗೆಜ್ಜೆ ಕಟ್ಟಿ, ಬಣ್ಣ ಹಚ್ಚಲು ಶುರು ಮಾಡಿದ್ದೇ ತಡ ಜ್ಯೋತಿಲಕ್ಷ್ಮಿಗೆ ಇದ್ದ ಬೇಡಿಕೆ ಕಮ್ಮಿ ಆಗಲು ಶುರು ಆಯ್ತು.

ಆಡು ಆಟ ಆಡು....
'ಕುಳ್ಳ ಏಜೆಂಟ್ 000' ಚಿತ್ರದಲ್ಲಿ ಜ್ಯೋತಿಲಕ್ಷ್ಮಿ ಆಟ ಆಡಿರುವ ಹಾಡು 'ಆಡು ಆಟ ಆಡು...' ವಿಡಿಯೋ ಲಿಂಕ್ ಇಲ್ಲಿದೆ ನೋಡಿ....

ಸಿಂಗಾಪೂರಿಂದ ಬಂದೆ....
ಸ್ಯಾಂಡಲ್ ವುಡ್ ನಲ್ಲಿ ಜ್ಯೋತಿಲಕ್ಷ್ಮಿ ಸೊಂಟ ಬಳುಕಿಸಿರುವ ಕೆಲವೇ ಕೆಲವು ಹಾಡುಗಳ ಪೈಕಿ 'ಸಿಂಗಾಪೂರಿಂದ ಬಂದೆ....' ಕೂಡ ಒಂದು.

'ರಕ್ತ ಕಣ್ಣೀರು' ಚಿತ್ರದಲ್ಲಿ ಜ್ಯೋತಿಲಕ್ಷ್ಮಿ
ವಯಸ್ಸಾದರೂ ಜ್ಯೋತಿಲಕ್ಷ್ಮಿಗೆ ಇದ್ದ ಚಾರ್ಮ್ ಕಮ್ಮಿ ಆಗಿರ್ಲಿಲ್ಲ. ಈ ಮಾತನ್ನ 'ರಕ್ತ ಕಣ್ಣೀರು' ಚಿತ್ರ ನೋಡಿದವರು ಒಪ್ಪದೇ ಇರಲ್ಲ. ಉಪೇಂದ್ರ, ರಮ್ಯಾಕೃಷ್ಣ ಜೊತೆ ಜ್ಯೋತಿಲಕ್ಷ್ಮಿ ನಟಿಸಿರುವ 'ರಕ್ತ ಕಣ್ಣೀರು' ಚಿತ್ರದ ಸಣ್ಣ ಕ್ಲಿಪ್ ಇಲ್ಲಿದೆ ನೋಡಿ....

ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು
ಬೆಳ್ಳಿ ಪರದೆ ಮೇಲೆ ಸದಾ ಲಕಲಕ ಹೊಳೆಯುತ್ತಿದ್ದ ಜ್ಯೋತಿಲಕ್ಷ್ಮಿ, ನಿಜ ಜೀವನದಲ್ಲಿ ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. 63 ವರ್ಷ ವಯಸ್ಸಿನ ಜ್ಯೋತಿಲಕ್ಷ್ಮಿ ಚೆನ್ನೈನಲ್ಲಿ ಮಂಗಳವಾರ (ಆಗಸ್ಟ್ 9) ನಿಧನರಾಗಿದ್ದಾರೆ. [ಪಡ್ಡೆಗಳ ನಿದ್ದೆಗೆಡಿಸಿದ್ದ ಜ್ಯೋತಿಲಕ್ಷ್ಮಿ ಚಿರನಿದ್ರೆಗೆ]