»   » 'ಸುಂದರಿ' ಹಾಡಿನಲ್ಲಿ ಕಿಚ್ಚನ ಭರತನಾಟ್ಯ ಮನಮೋಹಕ

'ಸುಂದರಿ' ಹಾಡಿನಲ್ಲಿ ಕಿಚ್ಚನ ಭರತನಾಟ್ಯ ಮನಮೋಹಕ

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' ಬಿಡುಗಡೆಗೆ ಕೌಂಡೌನ್ ಶುರುವಾಗಿದ್ದು, ದಿನದಿಂದ ದಿನಕ್ಕೆ 'ಹೆಬ್ಬುಲಿ' ಕ್ರೇಜ್ ಹೆಚ್ಚಾಗುತ್ತಿದೆ. ಮೊನ್ನೆಯಷ್ಟೇ ಚಿತ್ರದ ಟೈಟಲ್ ವಿಡಿಯೋ ಸಾಂಗ್ ಬಿಡುಗಡೆ ಮಾಡಿ ಅಬ್ಬರಿಸಿದ್ದ 'ಹೆಬ್ಬುಲಿ' ಈಗ ಎರಡನೇ ಸಾಂಗ್ ಟೀಸರ್ ರಿಲೀಸ್ ಮಾಡಿದೆ.[ಕನ್ನಡದಲ್ಲಿ ಹಿಂದೆಂದೂ ಕಂಡಿಲ್ಲದ ಬಿಗ್ ಓಪನ್ನಿಂಗ್ ಪಡೆಯಲಿದೆ ಕಿಚ್ಚನ 'ಹೆಬ್ಬುಲಿ'!]

'ಹೆಬ್ಬುಲಿ' ಚಿತ್ರದ ರೊಮ್ಯಾಂಟಿಕ್ ಸಾಂಗ್ ಬಿಡುಗಡೆಯಾಗಿದ್ದು, ಕಿಚ್ಚನ ಅಭಿಮಾನಿಗಳು 'ಸುಂದರಿ'ಯ ಕನವರಿಕೆ ಮಾಡುತ್ತಿದ್ದಾರೆ. ವಿಶೇಷ ಅಂದ್ರೆ, ಈ ಹಾಡಿನಲ್ಲಿ ಸುದೀಪ್ ಭರತನಾಟ್ಯವನ್ನ ಮಾಡಿದ್ದು, ನೋಡಲು ಮನಮೋಹಕವಾಗಿದೆ. ನಿನ್ನೆ (ಫೆಬ್ರವರಿ 14) ರಾತ್ರಿ 'ಸುಂದರಿ ಸುಂದರಿ' ಹಾಡನ್ನ ರಿಲೀಸ್ ಮಾಡಿದ್ದು, ಯ್ಯೂಟ್ಯೂಬ್ ನಲ್ಲಿ ಈಗಾಗಲೇ 1 ಲಕ್ಷಕ್ಕೂ ಅಧಿಕ ಜನ ಹಾಡನ್ನ ವೀಕ್ಷಿಸಿದ್ದಾರೆ.['ಹೆಬ್ಬುಲಿ' ಟೈಟಲ್ ವಿಡಿಯೋ ಸಾಂಗ್ ಗೆ ಇಷ್ಟೊಂದು ಕ್ರೇಜ್?]


ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿರುವ 'ಸುಂದರಿ' ಹಾಡನ್ನ ವಿಜಯ ಪ್ರಕಾಶ್ ಮತ್ತು ಅನುರಾಧ ಭಟ್ ಹಾಡಿದ್ದಾರೆ. ಸದ್ಯ, ಒಂದೊಂದೆ ಹಾಡುಗಳ ವಿಡಿಯೋ ಟೀಸರ್ ಬಿಡುಗಡೆ ಮಾಡುತ್ತಿರುವ 'ಹೆಬ್ಬುಲಿ', ಎರಡು ದಿನಕ್ಕೊಮ್ಮೆ ಮತ್ತೊಂದು ಸಾಂಗ್ ಟೀಸರ್ ರಿಲೀಸ್ ಮಾಡಲಿದೆ. ಕೊನೆಯಲ್ಲಿ ಚಿತ್ರದ ಟ್ರೈಲರ್ ರಿಲೀಸ್ ಮಾಡುವ ಪ್ಲಾನ್ ಕೂಡ ಮಾಡಿದೆ.'ಹೆಬ್ಬುಲಿ' ಇದೇ ತಿಂಗಳು 23 ರಂದು ದೇಶಾದ್ಯಂತ ತೆರೆಕಾಣುತ್ತಿದ್ದು, ಚೆನ್ನೈ, ಮುಂಬೈ, ಹೈದರಾಬಾದ್ ಸೇರಿದಂತೆ ಸುಮಾರು 500ಕ್ಕೂ ಅಧಿಕ ಸ್ಕ್ರೀನ್ ನಲ್ಲಿ 'ಹೆಬ್ಬುಲಿ' ಘರ್ಜಿಸಲಿದೆ. 'ಹೆಬ್ಬುಲಿ' ಚಿತ್ರದಲ್ಲಿ ಕಿಚ್ಚ ಸುದೀಪ್ ಗೆ ಅಮಲಾ ಪೌಲ್ ಜೊತೆಯಾಗಿದ್ದು, ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಸಾಥ್ ಕೊಟ್ಟಿದ್ದಾರೆ. ಇನ್ನೂ ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರಕ್ಕೆ ಕೃಷ್ಣ ಆಕ್ಷನ್ ಕಟ್ ಹೇಳಿದ್ದಾರೆ.

English summary
After the record breaking title track of Hebbuli, the movie team has officially released another song. The song is named 'Sundari' sung by Vijay prakash and Anuradha Bhat. Hebbuli stars Sudeep and Amala Paul in main lead. The movie is directed by Krishna.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X