»   » ಚೇತನ್ 'ಅತಿರಥ' ಸಿನಿಮಾಗೆ ಹಿಂದೂ ಸಂಘಟನೆ ವಿರೋಧ

ಚೇತನ್ 'ಅತಿರಥ' ಸಿನಿಮಾಗೆ ಹಿಂದೂ ಸಂಘಟನೆ ವಿರೋಧ

Posted By:
Subscribe to Filmibeat Kannada

'ಆ ದಿನಗಳು' ಚೇತನ್ ಅಭಿನಯದ 'ಅತಿರಥ' ಸಿನಿಮಾಗೆ ರಾಜ್ಯದ ಹಲವೆಡೆ ವಿರೋಧ ವ್ಯಕ್ತವಾಗಿದೆ. ಕಳೆದ ಶುಕ್ರವಾರ (ನವೆಂಬರ್ 24) ಚೇತನ್ ಅಭಿನಯದ ಮಹೇಶ್ ಬಾಬು ನಿರ್ದೇಶನದ 'ಅತಿರಥ' ಸಿನಿಮಾ ರಾಜ್ಯಾದ್ಯಂತ ತೆರೆಗೆ ಬಂದಿತ್ತು. ಬಿಡುಗಡೆಯಾದ ದಿನದಿಂದಲೇ ಸಾಮಾಜಿಕ ಜಾಲತಾಣ ಸೇರಿದಂತೆ ರಾಜ್ಯದ ಹಲವು ಕಡೆಯಲ್ಲಿ ಸಿನಿಮಾಗೆ ವ್ಯಾಪಕವಾಗಿ ವಿರೋಧ ವ್ಯಕ್ತವಾಗಿದೆ.

ಚೇತನ್ 'ಹಿಂದೂ ವಿರೋಧಿ' ಕೆಲಸಗಳಲ್ಲಿ ಭಾಗಿಯಾಗಿದ್ದಾರೆ. ಆ ಕಾರಣದಿಂದ ಹಿಂದುಗಳು ಚೇತನ್ ಅಭಿನಯದ 'ಅತಿರಥ' ಚಿತ್ರವನ್ನ ನೋಡಬೇಡಿ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಅದಷ್ಟೇ ಅಲ್ಲದೇ ಚಾಮರಾಜನಗರದ 'ಪ್ಯಾರಡೈಸ್' ಸಿನಿಮಾಮಂದಿರದಲ್ಲಿ ಚಿತ್ರವನ್ನ ತೆರೆ ಕಾಣಲು ಬಿಟ್ಟಿಲ್ಲ.

 hindhu organizations oppose for aa dinagalu chetan's athiratha movie

ಇದೇ ವಿಚಾರವಾಗಿ ಸಿನಿಮಾ ತಂಡ ತುರ್ತು ಸುದ್ದಿಗೋಷ್ಠಿ ನಡೆಸಿ, ''ಅತಿರಥ' ಚೇತನ್ ಒಬ್ಬರದ್ದೇ ಸಿನಿಮಾ ಅಲ್ಲ. ಸಿನಿಮಾ ಹೆಸರಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರವನ್ನ ಹತ್ತಿಕ್ಕುವ ಕೆಲಸ ಮಾಡಲಾಗ್ತಿದೆ. ಹಿಂದುಗಳಾಗಿ ಹಿಂದುಗಳನ್ನೇ ವಿರೋಧ ಮಾಡುವ ಕೆಲಸ ಮಾಡುವುದು ಎಷ್ಟು ಸರಿ. ಇದು ನಿರ್ಮಾಪಕ ಹಾಗೂ ನಿರ್ದೇಶಕರ ಚಿತ್ರ. ಇಲ್ಲಿ ಸಾವಿರಾರು ಜನರು ಕೆಲಸ ಮಾಡಿದ್ದಾರೆ. ಚೇತನ್ ಹಿಂದೂ ವಿರೋಧಿಯಾಗಿದ್ದರೆ, ಅಮೇರಿಕಾದಲ್ಲಿ ವಿದ್ಯಾಭ್ಯಾಸ ಮುಗಿಸಿ ಭಾರತಕ್ಕೆ ಬಂದು ಇಲ್ಲಿಯ ಸಂಸ್ಕೃತಿ ನಾಡು ನುಡಿಗಾಗಿ ಹೋರಾಟ ಮಾಡುತ್ತಿರಲಿಲ್ಲ'' ಎಂದಿದೆ.

English summary
Hindhu Organization oppose for 'Aa Dinagalu' Chethan's 'Athiratha' movie. ಆ ದಿನಗಳು ಚೇತನ್ ಅಭಿನಯದ ಅತಿರಥ ಸಿನಿಮಾಗೆ ಹಿಂದೂ ಸಂಘಟನೆಯಿಂದ ವಿರೋಧ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada