For Quick Alerts
  ALLOW NOTIFICATIONS  
  For Daily Alerts

  ಸರ್ವಂ 'ಕಾಂತಾರ'ಮಯಂ: ಬರೆದಿಟ್ಟುಕೊಳ್ಳಿ ದೀಪಾವಳಿಗೂ ಪಟಾಕಿ ಹೊಡೆಯೋದು ರಿಷಬ್ ಶೆಟ್ಟಿನೇ!

  |

  ಹಿಂದಿ ಹಾಗೂ ತೆಲುಗಿನಲ್ಲಿ 'ಕಾಂತಾರ' ಕ್ರೇಜ್‌ಗೆ ಬ್ರೇಜ್ ಹಾಕೋರೆ ಇಲ್ಲ. ವಾರದ ದಿನಗಳಲ್ಲೂ ಸಿನಿಮಾ ಭರ್ಜರಿ ಕಲೆಕ್ಷನ ಮಾಡ್ತಿದೆ. ದೀಪಾವಳಿ ಹತ್ತಿರ ಬರ್ತಿದ್ದು, ಹಬ್ಬದ ಸಂಭ್ರಮದಲ್ಲಿ ಪ್ರೇಕ್ಷಕರು ಮತ್ತೆ ಬಂದು ಸಿನಿಮಾ ನೋಡುವ ಸುಳಿವು ಸಿಗುತ್ತಿದೆ. ಬಾಲಿವುಡ್‌ನಲ್ಲಿ ಅಜಯ್ ದೇವಗನ್ ನಟನೆಯ 'ಥ್ಯಾಂಕ್ ಗಾಡ್' ಹಾಗೂ ಅಕ್ಷಯ್ ಕುಮಾರ್ ನಟನೆಯ 'ರಾಮ್‌ಸೇತು' ಸಿನಿಮಾಗಳು ರಿಲೀಸ್‌ಗೆ ಸಿದ್ಧವಾಗಿದೆ. ಆದರೆ 'ಕಾಂತಾರ' ಎದುರು 2 ಸಿನಿಮಾಗಳು ಬರ್ತಿರೋದೇ ಯಾರಿಗೂ ಗೊತ್ತಾಗುತ್ತಿಲ್ಲ.

  ಇಡೀ ದೇಶ ಈಗ 'ಕಾಂತಾರ' ಬಗ್ಗೆ ಮಾತನಾಡುತ್ತಿದೆ. ಸಿನಿಮಾ ನೋಡಿದವರು ಮತ್ತಷ್ಟು ಜನರಗೆ ನೋಡಲು ಹೇಳುತ್ತಿದ್ದಾರೆ. ಮೌತ್ ಟಾಕ್‌ನಿಂದಲೇ ಚಿತ್ರಕ್ಕೆ ಭರ್ಜರಿ ಪ್ರಚಾರ ಸಿಗುತ್ತಿದೆ. ತೆಲುಗು ಹಾಗೂ ಹಿಂದಿ ವರ್ಷನ್‌ಗೆ ಭರ್ಜರಿ ರೆಸ್ಪಾನ್ಸ್ ಸಿಗ್ತಿದೆ. ಸಾಕಷ್ಟು ಶೋಗಳು ಹೌಸ್‌ಫುಲ್ ಆಗುತ್ತಿದೆ. ಒಮ್ಮೆ ನೋಡಿದವರು ಮತ್ತೆ ಮತ್ತೆ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಸದ್ಯಕ್ಕೆ 'ಕಾಂತಾರ' ಸಿನಿಮಾ ಆರ್ಭಟ ಕಮ್ಮಿ ಆಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಮಂಗಳವಾ ದೀಪಾವಳಿ ಹಬ್ಬ ಬರ್ತಿದೆ. ಹಬ್ಬದ ಸಂಭ್ರಮದಲ್ಲಿ ತೆಲುಗು, ಹಿಂದಿ ಸಿನಿಮಾಗಳು ತೆರೆಗೆ ಬರ್ತಿದೆ. ಆದರೆ ಪ್ರೇಕ್ಷಕರಿಗೆ ಮಾತ್ರ ಸದ್ಯಕ್ಕೆ 'ಕಾಂತಾರ' ಬಿಟ್ಟು ಮತ್ಯಾವುದೇ ಸಿನಿಮಾ ಕಾಣುತ್ತಿಲ್ಲ.

  'ಕಾಂತಾರ' ಸಿನಿಮಾ ನೋಡುತ್ತಾರಂತೆ ಪ್ರಧಾನಿ ನರೇಂದ್ರ ಮೋದಿ?'ಕಾಂತಾರ' ಸಿನಿಮಾ ನೋಡುತ್ತಾರಂತೆ ಪ್ರಧಾನಿ ನರೇಂದ್ರ ಮೋದಿ?

  'ಕಾಂತಾರ' ಸಿನಿಮಾ ನೋಡಿದ ಪ್ರತಿಯೊಬ್ಬರು ಮೆಚ್ಚಿ ಕೊಂಡಾಡುತ್ತಿದ್ದಾರೆ. ಭಾಷೆಯ ಗಡಿ ಮೀರಿ ಸಿನಿಮಾ ಎಲ್ಲಾ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತಿದೆ. ವಿದೇಶಗಳಲ್ಲೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಕೆಲವೆಡೆ 'KGF' ಸರಣಿ ಸಿನಿಮಾಗಳ ದಾಖಲೆಯನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಸಿನಿಮಾ 'ಕಾಂತಾರ' ಸಿನಿಮಾ ನೋಡುವ ಮಾತುಗಳು ಕೇಳಿಬರ್ತಿದೆ.

  ಸರ್ವಂ 'ಕಾಂತಾರ'ಮಯಂ

  ಸರ್ವಂ 'ಕಾಂತಾರ'ಮಯಂ

  'ಪೊನ್ನಿಯನ್ ಸೆಲ್ವನ್' ಸೇರಿದಂತೆ ಒಂದಷ್ಟು ಸಿನಿಮಾಗಳು 'ಕಾಂತಾರ' ಜೊತೆಗೆ ಬಿಡುಗಡೆ ಆಗಿದ್ದವು. ನಂತರ 'ಗುಡ್‌ಬೈ' ಸೇರಿದಂತೆ ಇನ್ನೊಂದಷ್ಟು ಸಿನಿಮಾಗಳು ಬಂದವು. ಆದರೆ ಅವೆಲ್ಲವನ್ನು ಪ್ರೇಕ್ಷಕರು ಮರೆತುಬಿಟ್ಟಿದ್ದಾರೆ. ಸಣ್ಣ ಬಜೆಟ್‌ನ ರಿಷಬ್ ಶೆಟ್ಟಿ ಸಿನಿಮಾ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಸಿನಿಮಾ ಈಗಾಗಲೇ ವಿಶ್ವದಾದ್ಯಂತ 150 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಕೆಲವೆಡೆ ಸಿನಿಮಾ ಕಲೆಕ್ಷನ್ ನಿರ್ಮಾಪಕರಿಗೆ ಅಚ್ಚರಿ ತಂದಿದೆ. ಬಾಕ್ಸಾಫೀಸ್ ಗಳಿಕೆ ಮಾತ್ರವಲ್ಲ ಜನರ ಮನಸ್ಸನ್ನು ಕೂಡ ಸಿನಿಮಾ ಗೆದ್ದಿದೆ.

  7 ಕೋಟಿ ಎಂದು ಶುರುವಾದ 'ಕಾಂತಾರ' ಚಿತ್ರಕ್ಕೆ ಖರ್ಚಾಗಿದ್ದು ದೊಡ್ಡ ಮೊತ್ತ; ರಿಷಬ್ ತಂದೆ ಕೊಟ್ರು ಲೆಕ್ಕ7 ಕೋಟಿ ಎಂದು ಶುರುವಾದ 'ಕಾಂತಾರ' ಚಿತ್ರಕ್ಕೆ ಖರ್ಚಾಗಿದ್ದು ದೊಡ್ಡ ಮೊತ್ತ; ರಿಷಬ್ ತಂದೆ ಕೊಟ್ರು ಲೆಕ್ಕ

  ₹11 ಕೋಟಿ ಬಾಚಿದ ಹಿಂದಿ ವರ್ಷನ್

  ₹11 ಕೋಟಿ ಬಾಚಿದ ಹಿಂದಿ ವರ್ಷನ್

  ಬಾಲಿವುಡ್ ಅಂಗಳದಲ್ಲಿ 'ಕಾಂತಾರ' ಸಿನಿಮಾ ಕಲೆಕ್ಷನ್ ಜೋರಾಗಿದೆ. ಅಕ್ಟೋಬರ್ 14ರಂದು ತೆರೆಕಂಡಿದ್ದ ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ಅವರದ್ದೇ ಭಾಷೆಯಲ್ಲಿ ಮತ್ತಷ್ಟು ಹತ್ತಿರವಾಗಿದೆ. 6 ದಿನಕ್ಕೆ 11 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿ ಸೂಪರ್ ಹಿಟ್ ಲಿಸ್ಟ್ ಸೇರಿಕೊಂಡಿದೆ. ಕಳೆದ ವಾರ ತೆರೆಕಂಡ 'ಡಾಕ್ಟರ್ ಜಿ' ಚಿತ್ರಕ್ಕೂ ಪೈಪೋಟಿ ಕೊಟ್ಟಿದೆ. 'ಕಾಂತಾರ' ಎದುರು ರಶ್ಮಿಕಾ ಮಂದಣ್ಣ ನಟನೆಯ 'ಗುಡ್‌ಬೈ' ಸಿನಿಮಾ ಕಳೆದೇ ಹೋಯಿತು. ವಾರದ ದಿನಗಳಲ್ಲೇ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ಇನ್ನು ದೀಪಾವಳಿ ವೀಕೆಂಡ್‌ನಲ್ಲಿ ಸಿನಿಮಾ ಮತ್ತಷ್ಟು ಸದ್ದು ಮಾಡುವ ಸುಳಿವು ಸಿಕ್ತಿದೆ.

  ಆಂಧ್ರ, ತೆಲಂಗಾಣದಲ್ಲಿ ₹19 ಕೋಟಿ ಗಳಿಕೆ

  ಆಂಧ್ರ, ತೆಲಂಗಾಣದಲ್ಲಿ ₹19 ಕೋಟಿ ಗಳಿಕೆ

  ಬರೀ ಹಿಂದಿ ಬೆಲ್ಟ್ ಅಷ್ಟೇ ಅಲ್ಲ, ಆಂಧ್ರ, ತೆಲಂಗಾಣದಲ್ಲಿ ತೆಲುಗು ವರ್ಷನ್ ಕೂಡ ಹಿಟ್ ಆಗಿದೆ. ದೊಡ್ಡಮಟ್ಟದಲ್ಲಿ ತೆಲುಗು ಪ್ರೇಕ್ಷಕರು ಸಿನಿಮಾ ನೋಡಲು ಬರ್ತಿದ್ದಾರೆ. 4 ದಿನದ 'ಕಾಂತಾರ' ತೆಲುಗು ವರ್ಷನ್ ಕಲೆಕ್ಷನ್ ನೋಡಿ ರಿಷಬ್ ಶೆಟ್ಟಿ ಕೂಡ ಶಾಕ್ ಆಗಿದ್ದಾರೆ. ಈಗಾಗಲೇ 19 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಸಿನಿಮಾ ನಾಗಾಲೋಟ ಮುಂದುವರೆಸಿದೆ. ದೀಪಾವಳಿ ವೀಕೆಂಡ್ ತೆಲುಗು ರಾಜ್ಯಗಳಲ್ಲೂ ಚಿತ್ರಕ್ಕೆ ಪ್ಲಸ್ ಆಗಲಿದೆ.

  ದೀಪಾವಳಿಗೂ ಪಟಾಕಿ ಹೊಡೆಯೋದು ರಿಷಬ್

  ದೀಪಾವಳಿಗೂ ಪಟಾಕಿ ಹೊಡೆಯೋದು ರಿಷಬ್

  ಈ ವಾರ ಹಾಗೂ ಮುಂದಿನ ವಾರ ದೀಪಾವಳಿ ಸಂಭ್ರಮದಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗುತ್ತಿದೆ. ಕನ್ನಡದಲ್ಲಿ ಡಾಲಿ ಧನಂಜಯ ನಟನೆಯ 'ಹೆಡ್‌ಬುಷ್', ತಮಿಳು-ತೆಲುಗಿನಲ್ಲಿ ಕಾರ್ತಿ ನಟನೆಯ 'ಸರ್ದಾರ್', ಬಾಲಿವುಡ್‌ನಲ್ಲಿ ಅಕ್ಷಯ್ ಕುಮಾರ್ ನಟನೆಯ 'ರಾಮ್‌ಸೇತು', ಅಜಯ್ ದೇವಗನ್ ಲೀಡ್ ರೋಲ್‌ನಲ್ಲಿ ಮಿಂಚಿರುವ 'ಥ್ಯಾಂಕ್ ಗಾಡ್' ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಆದರೆ ಸದ್ಯ ಯಾವುದೇ ಸಿನಿಮಾ ಬಗ್ಗೆ ಬಝ್ ಕ್ರಿಯೇಟ್ ಆಗಿಲ್ಲ. 'ಕಾಂತಾರ' ಬಜಾರ್‌ನಲ್ಲಿ ಬೇರೆ ಮಾತಿಲ್ಲ. ಸದ್ಯ 'ಕಾಂತಾರ' ಚಿತ್ರಕ್ಕೆ ಸಿಕ್ಕಿರುವ ಥಿಯೇಟರ್‌ಗಳನ್ನು ಯಾರು ಮುಟ್ಟೋಕು ಸಾಧ್ಯವಿಲ್ಲ. ಇನ್ನು ಎರಡು ವಾರ ವಿಶ್ವದಾದ್ಯಂತ ರಿಷಬ್ ಶೆಟ್ಟಿ ಚಿತ್ರಕ್ಕೆ ಪೈಪೋಟಿನೇ ಇಲ್ಲ.

  English summary
  Hindi version of Kantara is going to give a tough competition to ThankGod and RamSetu this Diwali. know more .
  Thursday, October 20, 2022, 10:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X