For Quick Alerts
  ALLOW NOTIFICATIONS  
  For Daily Alerts

  ಸಾರ್ವಜನಿಕರು ಮನಸ್ಸು ಮಾಡಿದ್ರೆ 'ಜಂಗಲ್ ಬುಕ್' ಕನ್ನಡಕ್ಕೆ ಪಕ್ಕಾ

  By Suneetha
  |

  ಹಾಲಿವುಡ್ ಸಿನಿಮಾ 'ದಿ ಜಂಗಲ್ ಬುಕ್' ಬಿಡುಗಡೆ ಆದ ದಿನದಿಂದ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುತ್ತಿದ್ದು, ಬರೀ ಇಂಗ್ಲೀಷ್ ಭಾಷೆಯಲ್ಲಿ ಮಾತ್ರವಲ್ಲದೇ ಹಿಂದಿ ಸೇರಿದಂತೆ ಇನ್ನಿತರೇ ಪ್ರಾದೇಶಿಕ ಭಾಷೆಗಳಿಗೂ ಡಬ್ ಆಗಿ ಎಲ್ಲಾ ಕಡೆ ಭಾರಿ ಸದ್ದು ಮಾಡುತ್ತಿದೆ.

  ಆದರೆ ಕನ್ನಡಕ್ಕೆ ಡಬ್ಬಿಂಗ್ ಗೆ ಅವಕಾಶ ಇಲ್ಲದ ಕಾರಣ ಕನ್ನಡಿಗರು ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ 'ದಿ ಜಂಗಲ್ ಬುಕ್' ನೋಡಿ ಖುಷಿಪಟ್ಟಿದ್ದಾರೆ.[ದಾಖಲೆ ಮಟ್ಟದ ಕಲೆಕ್ಷನ್ ಮಾಡಿದ 'ಜಂಗಲ್ ಬುಕ್']

  ಆದರೆ ಇದೀಗ ಡಬ್ಬಿಂಗ್ ಬಗ್ಗೆ 'ಲೂಸಿಯಾ' ಮತ್ತು 'ಯು-ಟರ್ನ್' ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ಧ್ವನಿ ಎತ್ತಿದ್ದಾರೆ. 'ಜಂಗಲ್ ಬುಕ್' ನಂತಹ ಅದ್ಭುತ ಸಿನಿಮಾವೊಂದನ್ನು ಕನ್ನಡ ಜನತೆ ಅನಿವಾರ್ಯವಾಗಿ ಬೇರೆ ಭಾಷೆಯಲ್ಲಿ ನೋಡುವಂತಾಗಿದೆ. ಇದಕ್ಕೆ ಕಾರಣ ಡಬ್ಬಿಂಗ್ ಸಮಸ್ಯೆ'. ಎಂದು ಪವನ್ ಕುಮಾರ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.['ಜಂಗಲ್ ಬುಕ್ಕ್' ಕನ್ನಡದಲ್ಲಿ ಬೇಕೇ ಬೇಡವೇ?]

  'ಸಾರ್ವಜನಿಕರೆಲ್ಲಾ ಒಟ್ಟಾಗಿ ಹಣ ಹೂಡಲು ಸಾಧ್ಯವಾದರೆ 'ಜಂಗಲ್ ಬುಕ್' ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಲು ನಾನು ತಯಾರಿದ್ದೇನೆ. ನಮ್ಮದೇ ಕಲಾವಿದರನ್ನು ಬಳಸಿಕೊಳ್ಳೋಣ. ಸ್ಕ್ರಿಪ್ಟ್ ಮತ್ತು ಕಲಾವಿದರ ಡಬ್ಬಿಂಗ್ ರೆಕಾರ್ಡಿಂಗ್ ಜವಾಬ್ದಾರಿ ವಹಿಸಿಕೊಳ್ಳಲು ನಾನು ಸಿದ್ಧ' ಎಂದಿದ್ದಾರೆ ಪವನ್ ಕುಮಾರ್.[ಭಾರತದಲ್ಲಿ ಅಮೆರಿಕಕ್ಕಿಂತಲೂ ಮೊದಲೇ ಜಂಗಲ್ ಬುಕ್ ದರ್ಶನ]

  Did my bit.. spoke to someone at Disney... have asked for the rights to dub this film in Kannada... more details will...

  Posted by Pawan Kumar on Monday, April 11, 2016

  'ತಾಂತ್ರಿಕವಾಗಿ ಈ ಬಗ್ಗೆ ಸಹಾಯ ಮಾಡುವ ಮನಸ್ಸಿದ್ದವರು ಮುಂದೆ ಬನ್ನಿ. ಇದೊಂದು ಆರೋಗ್ಯಕರ ಬೆಳವಣಿಗೆಯಾಗಲಿ. ಎಲ್ಲರೂ ಸೇರಿ ದುಡ್ಡು ಹೊಂದಿಸಿದ್ರೆ ಇದು ಖಂಡಿತ ಸಾಧ್ಯ' ಎಂದು ಫೇಸ್ ಬುಕ್ಕಿನಲ್ಲಿ ಪವನ್ ಕುಮಾರ್ ಅವರು ಕನ್ನಾಡಭಿಮಾನಿಗಳಿಗೆ ಕರೆ ಕೊಟ್ಟಿದ್ದಾರೆ.

  ಈ ಮೂಲಕ ನಮ್ಮ ಮಕ್ಕಳಿಗೆ 'ದಿ ಜಂಗಲ್ ಬುಕ್ಕ್' ಅನ್ನು ಕನ್ನಡ ಭಾಷೆಯಲ್ಲೇ ತೋರಿಸೋಣ. ಶೇರ್ ಖಾನ್ ಗೆ ನಾನಾ ಪಾಟೇಕರ್ ಧ್ವನಿಗಿಂತ ನಮ್ಮ ಕಿಚ್ಚ ಸುದೀಪ್ ಅವರ ಧ್ವನಿ ಹೆಚ್ಚು ಸೂಕ್ತ ಅಂತ ಅನಿಸೋದಿಲ್ವ?. ಎಂದು ಪ್ರಶ್ನೆ ಹಾಕಿರುವ ಪವನ್ ಕುಮಾರ್ ಡಬ್ಬಿಂಗ್ ಹಕ್ಕು ಪಡೆದುಕೊಳ್ಳಲು ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರಂತೆ.

  ಅಂತೂ ಎಲ್ಲವೂ ಅಂದುಕೊಂಡಂತೆ ನಡೆದರೆ ಸದ್ಯದಲ್ಲೇ 'ಜಂಗಲ್ ಬುಕ್' ಕನ್ನಡ ಭಾಷೆಯಲ್ಲಿಯೇ ಬಂದರೂ ಬರಬಹುದು. ನಮ್ಮ ಪುಟ್ಟ ಮಕ್ಕಳು ಹಿಂದಿ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಕಷ್ಟಪಡುವ ಬದಲು ಕನ್ನಡದಲ್ಲೇ ಸಿನಿಮಾ ನೋಡಲಿ ಅನ್ನೋದು ಪವನ್ ಅವರ ಆಸೆ.

  'ಜಂಗಲ್ ಬುಕ್ಕ್' ಚಿತ್ರದ ಫೊಟೋ ಗ್ಯಾಲರಿ ನೋಡಿ ಕೆಳಗಿನ ಸ್ಲೈಡುಗಳಲ್ಲಿ...

  English summary
  Hollywood movie 'Jungle Book', is released many Indian languages except Kannada. Kannada movie director Pawan Kumar (Lucia fame) has come forward to dub the movie in Kannada. But, Pawan says it needs huge money. Do you like your children to watch this movie in Kannada?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X