»   » ಕಾಮಿಡಿಯನ್ ಚಿಕ್ಕಣ್ಣನ ದಿನದ ಸಂಭಾವನೆ ಎಷ್ಟು?

ಕಾಮಿಡಿಯನ್ ಚಿಕ್ಕಣ್ಣನ ದಿನದ ಸಂಭಾವನೆ ಎಷ್ಟು?

By: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ವುಡ್ನ ಸೂಪರ್ಸ್ಟಾರ್ ಕಿಚ್ಚ ಸುದೀಪ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಚಿಕ್ಕಣ್ಣ, ಸಾಧು ಕೋಕಿಲ ಅವ್ರ ಬಗ್ಗೆ ಅಸೂಯೆಯಾಗುತ್ತೆ ಅಂತ ತಮಾಷೆಯಾಗಿ ಹೇಳಿದ್ರು. ಅಸೂಯೆ ಯಾಕೆ ಅಂದ್ರೆ ಅವ್ರು ದುಡೀತಾ ಇರೋ ಸಂಭಾವನೆ ವಿಷ್ಯದಲ್ಲಿ.

ಕಿಚ್ಚ ಸುದೀಪ್ ವರ್ಷಕ್ಕೊಂದು ಸಿನಿಮಾದಂತೆ ದುಡಿದ್ರೆ ದಿನಕ್ಕೆ ಒಂದೂವರೆ ಎರಡು ಲಕ್ಷ ದುಡಿಯೋ ಕಾಮಿಡಿಯನ್ಗಳಿದ್ದಾರೆ. ಒಂದು ದಿನದ ಅವ್ರ ಕಾಲ್ಶೀಟ್ಗೆ ಲಕ್ಷಗಳಲ್ಲಿ ಕೊಡಬೇಕು. ಅದ್ರಲ್ಲೂ ಬ್ಯುಸಿ ಇರೋ ಕಾಮಿಡಿಯನ್ಗಳು ಡೇ ಶಿಫ್ಟ್ ಒಂದು ಸಿನಿಮಾ ಮಾಡಿದ್ರೆ ನೈಟ್ ಮತ್ತೊಂದು ಸಿನಿಮಾ. [ಚಿಕ್ಕಣ್ಣಗೆ ಸುದೀಪ್ ದುಬಾರಿ ಉಡುಗೊರೆ!]

How much comedian Chikkanna charging per day

ಅಂತಹಾ ಕಾಮಿಡಿಯನ್ಗಳಲ್ಲಿ ಈಗ ಬಹುಬೇಡಿಕೆಯ ಕಾಮಿಡಿಯನ್ ಅಂದ್ರೆ ಚಿಕ್ಕಣ್ಣ. ಕೆಲವು ಸಿನಿಮಾಗಳಲ್ಲಂತೂ ಚಿಕ್ಕಣ್ಣನಿಗಾಗೀನೇ ಹೀರೋ ಫ್ರೆಂಡ್ ಪಾತ್ರವನ್ನ ಕ್ರಿಯೇಟ್ ಮಾಡ್ತಿದ್ದಾರೆ. ಹೀಗಿರೋ ಬಹುಬೇಡಿಕೆಯ ಚಿಕ್ಕಣ್ಣ ಈಗ ದಿನವೊಂದಕ್ಕೆ ಚಾರ್ಜ್ ಮಾಡ್ತಿರೋದು ಒಂದೂವರೆ ಲಕ್ಷವಂತೆ. [ಪ್ರಣೀತಾ ಸಂಭಾವನೆ ಗಗನಕುಸುಮ]

ಹಾಗೆ ನೋಡಿದ್ರೆ ಕನ್ನಡದ ಕಾಮಿಡಿ ಬ್ರ್ಯಾಂಡ್ ಸಾಧು ಸಂಭಾವನೆಗಿಂತ ಇದು ಸ್ವಲ್ಪ ಜಾಸ್ತೀನೇ. ಸ್ಟಾರ್ ಸಿನಿಮಾಗಳ ವಿಚಾರದಲ್ಲಿ ಸ್ವಲ್ಪ ರಿಯಾಯಿತಿ ತೋರಿಸೋ ಈ ಕಾಮಿಡಿ ಕಿಲಾಡಿ. ಚಿಕ್ಕಣ್ಣನೇ ಬೇಕು ಅಂತ ಬರೋ ಹೊಸಬರ ಸಿನಿಮಾಗಳಿಂದ ಭರ್ಜರಿ ಸಂಭಾವನೆ ಪಡೀತಿದ್ದಾರಂತೆ. ಅವರ್ನ ಕೇಳಿದ್ರೆ, ಛೆ ಎಲ್ಲಾದ್ರೂ ಉಂಟಾ ಅಂತಾರೆ. ಏನೇ ಆಗ್ಲಿ, ಗಾಳಿ ಬಂದಾಗಲೇ ತೂರಿಕೋಬೇಕು ಅಲ್ವಾ? [ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರನ್ನು ನೆನೆಯುತ್ತಾ..]

English summary
Do you know how much Kannada comedy actor Chikkanna is charging for a day? It is more than what super comedian Sadhu Kokila is getting. Chikkanna is in huge demand after some successful movies in Kannada film industry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada