For Quick Alerts
  ALLOW NOTIFICATIONS  
  For Daily Alerts

  'ಡಿಕ್ಟೇಟರ್' ಆದ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್

  By Harshitha
  |

  'ಬಿಗ್ ಬಾಸ್' ಕಾರ್ಯಕ್ರಮಕ್ಕೆ ಹೋಗಿ ಬಂದ ಮೇಲೆ ಎಲ್ಲೆಲ್ಲೂ ಹುಚ್ಚ ವೆಂಕಟ್ ರದ್ದೇ ಸೌಂಡು. ಒಂದ್ಕಾಲದಲ್ಲಿ ಯಾರೂ ನೋಡದ ಹುಚ್ಚ ವೆಂಕಟ್ ನಟಿಸಿ, ನಿರ್ದೇಶನದ 'ಹುಚ್ಚ ವೆಂಕಟ್' ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣ್ತು.

  ಈಗ ಹುಚ್ಚ ವೆಂಕಟ್, 'ಪೊರ್ಕಿ ಹುಚ್ಚ ವೆಂಕಟ್' ಅಂತ ಮತ್ತೊಂದು ಸಿನಿಮಾ ಮಾಡೋದು ಇರ್ಲಿ, ಹುಚ್ಚ ವೆಂಕಟ್ ಮುಖ್ಯ ಭೂಮಿಕೆಯಲ್ಲಿ ಸಿನಿಮಾ ಮಾಡುವುದಕ್ಕೆ ನಿರ್ಮಾಪಕರೊಬ್ಬರು ಮುಂದೆ ಬಂದಿದ್ದಾರೆ. ಅವರು ಬೇರೆ ಯಾರೂ ಅಲ್ಲ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಬಿ.ವಿಜಯ್ ಕುಮಾರ್.[ಪುಸ್ತಕದಲ್ಲಿ ವೆಂಕಟ್ - ಹುಚ್ಚು ಮನಸ್ಸಿನ ನೂರು ಮುಖಗಳು!]

  ಬಿ.ವಿಜಯ್ ಕುಮಾರ್ ನಿರ್ಮಾಣ ಮಾಡುತ್ತಿರುವ 'ಡಿಕ್ಟೇಟರ್' ಚಿತ್ರಕ್ಕೆ ಹೀರೋ ಆಗಿ ಹುಚ್ಚ ವೆಂಕಟ್ ಸೆಲೆಕ್ಟ್ ಆಗಿದ್ದಾರೆ. 'ಡಿಕ್ಟೇಟರ್' ಚಿತ್ರದ ನಾಯಕನ ಪಾತ್ರ ಹುಚ್ಚ ವೆಂಕಟ್ ಗೆ ಕರೆಕ್ಟಾಗಿ ಸೂಟ್ ಆಗುವ ಕಾರಣ ಆಯ್ಕೆ ಮಾಡಲಾಗಿದ್ಯಂತೆ.['ಹುಚ್ಚ ವೆಂಕಟ್' ಸಿನಿಮಾ ಹೌಸ್ ಫುಲ್ ಓಡ್ತಿದೆ ಕಣ್ರೀ!]

  ಸದ್ಯಕ್ಕೆ ಹುಚ್ಚ ವೆಂಕಟ್ ಮಾತ್ರ ಫೈನಲ್ ಆಗಿದ್ದು, ಬಾಕಿ ತಾರಾಗಣದ ಬಗ್ಗೆ ಮಾತುಕತೆ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ 'ಡಿಕ್ಟೇಟರ್' ಶೂಟಿಂಗ್ ಶುರುವಾಗಲಿದೆ. 'ಡಿಕ್ಟೇಟರ್' ಚಿತ್ರದ ಹೆಚ್ಚಿನ ಮಾಹಿತಿಗೆ ಫಿಲ್ಮಿಬೀಟ್ ಕನ್ನಡ ಓದುತ್ತಿರಿ.

  English summary
  YouTube Star Huccha Venkat starrer 'Dictator' to be produced by B.Vijay Kumar, Ex President of KFCC.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X