»   » ಅಂತೆ-ಕಂತೆಯೆಲ್ಲ ಸುಳ್ಳಾಯ್ತಲ್ಲ: ಕನ್ನಡಕ್ಕೆ ಕಮಲ್ ಪುತ್ರಿ ಶ್ರುತಿ ಬರ್ತಿಲ್ಲ.!

ಅಂತೆ-ಕಂತೆಯೆಲ್ಲ ಸುಳ್ಳಾಯ್ತಲ್ಲ: ಕನ್ನಡಕ್ಕೆ ಕಮಲ್ ಪುತ್ರಿ ಶ್ರುತಿ ಬರ್ತಿಲ್ಲ.!

Posted By:
Subscribe to Filmibeat Kannada
ದ್ರುವ ಅವರ 'ಪೊಗರು ' ಮೂವಿಗೆ ಈ ಹೀರೋಯಿನ್ ಬರ್ತಿಲ್ವಂತೆ! ಶ್ರುತಿ ಹಾಸನ್ ಕೊಟ್ಟ ಖಡಕ್ ಉತ್ತರ ನೋಡಿ

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಯಶಸ್ವಿ ನಿರ್ದೇಶಕ ನಂದಕಿಶೋರ್ ಕಾಂಬಿನೇಶನ್ ನಲ್ಲಿ ಮೂಡಿಬರುತ್ತಿರುವ 'ಪೊಗರು' ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತ ನಟಿ, ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ನಾಯಕಿ ಆಗುವ ಸಾಧ್ಯತೆ ಇದೆ ಎಂಬ ಸುದ್ದಿ ಕಳೆದ ನಾಲ್ಕೈದು ದಿನಗಳ ಹಿಂದೆ ಭಾರಿ ಸದ್ದು ಮಾಡಿತ್ತು.

ಧ್ರುವ ಸರ್ಜಾ ಚಿತ್ರಕ್ಕೆ ಶ್ರುತಿ ಹಾಸನ್ ಜೋಡಿಯಂತೆ.!

ಈಗಾಗಲೇ ನಟಿ ಶ್ರುತಿ ಹಾಸನ್ ಜೊತೆ 'ಪೊಗರು' ಚಿತ್ರತಂಡ ಒಂದು ಸುತ್ತಿನ ಮಾತುಕತೆ ಕೂಡ ನಡೆಸಿದ್ದು, 'ಪೊಗರು' ಚಿತ್ರದ ಕಥೆ ಸೂಪರ್ ಆಗಿರುವುದರಿಂದ ಗಾಂಧಿನಗರಕ್ಕೆ ಶ್ರುತಿ ಹಾಸನ್ ಕಾಲಿಡುವುದು ಗ್ಯಾರೆಂಟಿ ಎಂಬ ಮಾತುಗಳು ಕೇಳಿಬಂದಿತ್ತು. ಆದ್ರೀಗ, ಅದು ಸುಳ್ಳಾಗಿದೆ. ಮುಂದೆ ಓದಿರಿ....

'ಪೊಗರು' ಚಿತ್ರದಲ್ಲಿ ನಟಿಸುತ್ತಿಲ್ಲ ಶ್ರುತಿ ಹಾಸನ್

ಧ್ರುವ ಸರ್ಜಾ ಅಭಿನಯಿಸುತ್ತಿರುವ ಕನ್ನಡದ 'ಪೊಗರು' ಚಿತ್ರದಲ್ಲಿ ಶ್ರುತಿ ಹಾಸನ್ ನಟಿಸುತ್ತಿಲ್ಲ. ಹಾಗಂತ ಸ್ವತಃ ಕಮಲ್ ಹಾಸನ್ ಪುತ್ರಿ ಶ್ರುತಿ ಸ್ಪಷ್ಟನೆ ನೀಡಿದ್ದಾರೆ.

ಟ್ವೀಟ್ ಮಾಡಿದ್ದಾರೆ ಶ್ರುತಿ ಹಾಸನ್

''ಸದ್ಯಕ್ಕೆ ಕನ್ನಡದ ಯಾವುದೇ ಸಿನಿಮಾದಲ್ಲಿ ನಟಿಸುವ ಪ್ಲಾನ್ ನನಗಿಲ್ಲ ಎಂಬುದನ್ನ ಸ್ಪಷ್ಟ ಪಡಿಸುತ್ತಿದ್ದೇನೆ. ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಬಗ್ಗೆ ನಾನು ಯಾರೊಂದಿಗೂ ಮಾತುಕತೆ ಕೂಡ ನಡೆಸಿಲ್ಲ. ಎಲ್ಲವೂ ರೂಮರ್ ಅಷ್ಟೇ'' ಎಂದು ನಟಿ ಶ್ರುತಿ ಹಾಸನ್ ಟ್ವೀಟ್ ಮಾಡಿದ್ದಾರೆ.

ನಿಜಕ್ಕೂ ಧ್ರುವ ಸರ್ಜಾ ಹಾಗೂ ವಿಕ್ರಮ್ ಜೊತೆ ನಟಿಸುತ್ತಾರಾ ಕಮಲ್ ಹಾಸನ್ ಪುತ್ರಿಯರು?

ಎಲ್ಲ ಊಹಾಪೋಹಗಳಿಗೆ ತೆರೆ ಬಿತ್ತು

''ಪೊಗರು' ಚಿತ್ರತಂಡದ ಜೊತೆಗೆ ಮಾತುಕತೆ ನಡೆಸಿಲ್ಲ'' ಎಂದು ಕಡ್ಡಿ ತುಂಡು ಮಾಡಿದ ಹಾಗೆ ಹೇಳುವ ಮೂಲಕ ಎಲ್ಲ ಊಹಾಪೋಹಗಳಿಗೆ ನಟಿ ಶ್ರುತಿ ಹಾಸನ್ ಪೂರ್ಣವಿರಾಮ ಇಟ್ಟಿದ್ದಾರೆ.

'ಪೊಗರು' ನಾಯಕಿ ಯಾರಾಗ್ತಾರೋ.?

ದಕ್ಷಿಣ ಭಾರತದ ಖ್ಯಾತ ನಟಿಯೊಬ್ಬರನ್ನ 'ಪೊಗರು' ಚಿತ್ರದ ಮೂಲಕ ಕನ್ನಡಕ್ಕೆ ಕರೆ ತರುವ ಯೋಚನೆಯಲ್ಲಿದೆ ಚಿತ್ರತಂಡ. ಶ್ರುತಿ ಹಾಸನ್ ಅಂತೂ 'ಇಲ್ಲ' ಎಂದಿದ್ದಾರೆ. ಬೇರೆ ಯಾರು ನಟಿಸಲು ಒಪ್ಪಿಕೊಳ್ತಾರೋ, ನೋಡೋಣ.

English summary
'I have no plans of doing a Kannada Film' tweets Shruthi Haasan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada