For Quick Alerts
  ALLOW NOTIFICATIONS  
  For Daily Alerts

  ಕಾಂಗ್ರೆಸ್ ಸೇರಿ ಎಲ್ಲವನ್ನೂ ಕಳೆದುಕೊಂಡೆ: ನಿವೇಶನ ಮಾರಿದ ಕತೆ ಹೇಳಿದ ಜಗ್ಗೇಶ್

  |

  ನಟ ಜಗ್ಗೇಶ್ ಸಿನಿಮಾದ ಜೊತೆಗೆ ರಾಜಕೀಯದಲ್ಲಿಯೂ ಬಹಳ ಸಕ್ರಿಯರಾಗಿದ್ದಾರೆ. ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆ ಆಗಿದ್ದ ಜಗ್ಗೇಶ್ ಅವರು ಆಪರೇಷನ್ ಕಮಲ ವೇಳೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು. ಪ್ರಸ್ತುತ ಬಿಜೆಪಿಯಲ್ಲಿಯೇ ಇದ್ದಾರೆ.

  Congress ನಿಂದ ಸೈಟ್ ಮಾರಿಬಿಟ್ಟೆ,ಕಾಫಿ ಪುಡಿಗೂ ದುಡ್ಡಿರ್ಲಿಲ್ಲ ಅಂದ್ರು Jaggesh | Filmibeat Kannada

  ನಿನ್ನೆ (ಮಾರ್ಚ್ 28) ಬಿಜೆಪಿಯಿಂದ ಆಯೋಜಿತವಾಗಿದ್ದ 'ಮಾಧ್ಯಮ-ಮಂಥನ' ಕಾರ್ಯಕ್ರಮದಲ್ಲಿ ಮಾತನಾಡಿದ ಜಗ್ಗೇಶ್ ಕಾಂಗ್ರೆಸ್‌ ಪಕ್ಷದಿಂದಾಗಿ ನಾನು ಗಳಿಸಿದ್ದೆಲ್ಲವನ್ನೂ ಕಳೆದುಕೊಂಡೆ ಎಂದಿದ್ದಾರೆ.

  'ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮಂಕುಬೂದಿ ಎರಚಿದ್ದ ಎಂ.ಡಿ.ಲಕ್ಷ್ಮಿನಾರಾಯಣ ಭಟ್ಟ ನನಗೂ ಬೆಂಕಿ ಇಟ್ಟಿದ್ದ, ನನ್ನ ಭವಿಷ್ಯಕ್ಕೆ ಕಲ್ಲು ಹಾಕಿದ' ಎಂದಿದ್ದಾರೆ ಜಗ್ಗೇಶ್.

  ಡಿ.ಕೆ.ಶಿವಕುಮಾರ್ ನನ್ನನ್ನು ಕಾಂಗ್ರೆಸ್‌ಗೆ ಸೇರಿಸಿ ಕಾರ್ಯದರ್ಶಿಯಾಗಿ ಮಾಡಿದರು. ವೇದಿಕೆಗಳಲ್ಲಿ ಕೂರಿಸುವುದನ್ನು ನೋಡಿ ಇದೇನೋ ದೊಡ್ಡ ಹುದ್ದೆ ಎಂದುಕೊಂಡಿದ್ದೆ ಆದರೆ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿದಾಗಲೇ ನನಗೆ ನಿಜಾಂಶ ಗೊತ್ತಾಗಿದ್ದು ಎಂದರು ಜಗ್ಗೇಶ್.

  ಒಂದು ಹೊತ್ತಿನ ಪ್ರಚಾರಕ್ಕೆ 50 ಲಕ್ಷ ಖರ್ಚು ಮಾಡಿದ್ದೆ: ಜಗ್ಗೇಶ್

  ಒಂದು ಹೊತ್ತಿನ ಪ್ರಚಾರಕ್ಕೆ 50 ಲಕ್ಷ ಖರ್ಚು ಮಾಡಿದ್ದೆ: ಜಗ್ಗೇಶ್

  'ಆಗಿನ ಕಾಲಕ್ಕೆ ಕಾಂಗ್ರೆಸ್‌ ನಾಯಕರ ಬೆಳಗ್ಗಿನ ಪ್ರಚಾರಕ್ಕೆ ಸುಮಾರು 50 ಲಕ್ಷ ಹಣ ಖರ್ಚು ಮಾಡಿದ್ದೆ. ಮಾಜಿ ಶಾಸಕರೊಬ್ಬರು ಇದು ಕೇವಲ ಟ್ರೇಲರ್ ಅಷ್ಟೆ. ಮಧ್ಯಾಹ್ನ ಮತ್ತು ಸಂಜೆಯ ಖರ್ಚು ಬೇರೆ ಇದೆ ಎಂದರು. ಮೋಟಮ್ಮನ ಪ್ರಚಾರಕ್ಕೆ ಎಂಟು ಲಕ್ಷ ಖರ್ಚು ಮಾಡಿದ್ದೆ ಎಂದರು ಜಗ್ಗೇಶ್.

  ನಾಲ್ಕು ನಿವೇಶನ ಮಾರಾಟ ಮಾಡಿದೆ: ಜಗ್ಗೇಶ್

  ನಾಲ್ಕು ನಿವೇಶನ ಮಾರಾಟ ಮಾಡಿದೆ: ಜಗ್ಗೇಶ್

  ಸಿನಿಮಾಗಳಲ್ಲಿ ನಟಿಸಿ ಗಳಿಸಿದ್ದ ನಾಲ್ಕು ನಿವೇಶನಗಳನ್ನು ಚುನಾವಣೆಗಾಗಿ ಮಾರಾಟ ಮಾಡಿದೆ. ಆದರೂ ನಾನು ಗೆಲ್ಲಲಿಲ್ಲ. ಏಳು ಸಾವಿರ ಮತ ಸಹ ಬರದ ಕ್ಷೇತ್ರದಲ್ಲಿ ನಾನು 25000 ಮತ ಗಳಿಸಿದ್ದೆ ಅದನ್ನು ಕಾಂಗ್ರೆಸ್ ಹಿರಿಯರು ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ ಆ ವೇಳೆಗೆ ನಾನು ಎಲ್ಲವನ್ನೂ ಕಳೆದುಕೊಂಡಿದ್ದೆ ನನ್ನ ಬಳಿ ಕಾಫಿಪುಡಿ ತರಲು ಹಣ ಇರಲಿಲ್ಲ ಯಾವ ಕಾಂಗ್ರೆಸ್ ನಾಯಕನೂ ಆಗ ನನ್ನ ಕೈಹಿಡಿಯಲಿಲ್ಲ ಎಂದರು ಜಗ್ಗೇಶ್.

  ನನ್ನ ನೆರವಿಗೆ ಬಂದಿದ್ದು ತೇಜಸ್ವಿನಿ ಗೌಡ: ಜಗ್ಗೇಶ್

  ನನ್ನ ನೆರವಿಗೆ ಬಂದಿದ್ದು ತೇಜಸ್ವಿನಿ ಗೌಡ: ಜಗ್ಗೇಶ್

  'ಕಾಂಗ್ರೆಸ್ ಸೇರಿ ಎಲ್ಲವನ್ನೂ ಕಳೆದುಕೊಂಡಿದ್ದೆ. ಆಗ ನನ್ನ ನೆರವಿಗೆ ಬಂದಿದ್ದು ತೇಜಸ್ವಿನಿ ಗೌಡ. ಮುಂದಿನ ಚುನಾವಣೆಯಲ್ಲಿ ನನ್ನ ಮೇಲೆ ಪಿತೂರಿ ನಡೆಸಿ ಟಿಕೆಟ್ ತಪ್ಪಿಸಿದರು ಆದರೆ ಅಭಿಮಾನಿಗಳು ನನ್ನನ್ನು ಚುನಾವಣೆಗೆ ನಿಲ್ಲಿಸಿ ಅವರೇ ಖರ್ಚು ಮಾಡಿ ಗೆಲ್ಲಿಸಿದರು' ಎಂದು ಹೇಳಿದ್ದಾರೆ ಜಗ್ಗೇಶ್.

  ಸಿಡಿ ವಿವಾದದ ಬಗ್ಗೆ ಜಗ್ಗೇಶ್ ಪರೋಕ್ಷ ಮಾತು

  ಸಿಡಿ ವಿವಾದದ ಬಗ್ಗೆ ಜಗ್ಗೇಶ್ ಪರೋಕ್ಷ ಮಾತು

  'ಬಹಳ ದೊಡ್ಡ ರಾಕ್ಷಸರ ಮುಂದೆ ನಿಂತು ಗೆದ್ದು ಬಂದಿದ್ದೇನೆ. ಈಗ ರಾಜ್ಯದಲ್ಲಿ ದೊಡ್ಡ-ದೊಡ್ಡ ನಾಯಕರ ಹಣೆಬರಹ ಬದಲಿಸುವ ಯತ್ನ ಮಾಡಲಾಗುತ್ತಿದೆ. ಉಪ್ಪು ತಿಂದವರು ನೀರು ಕುಡಿಯುವುದು ನಿಶ್ಚಿತ ಅದರಲ್ಲಿ ಅನುಮಾನವಿಲ್ಲ' ಎಂದು ಸಿಡಿ ವಿವಾದದ ಬಗ್ಗೆ ಪರೋಕ್ಷವಾಗಿ ಮಾತನಾಡಿದರು ಜಗ್ಗೇಶ್.

  English summary
  Actor Jaggesh said I lost everything I earned because of Congress party. He also said many people stabbed me in the back.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X