»   » ಉಪ್ಪಿ 'ಇದನ್ನ ಓದ್ಬೇಡಿ' ಅಂತ ಹೇಳಿದ್ರೂ ಜನ ಸುಮ್ಮನಿರುತ್ತಿಲ್ಲ!

ಉಪ್ಪಿ 'ಇದನ್ನ ಓದ್ಬೇಡಿ' ಅಂತ ಹೇಳಿದ್ರೂ ಜನ ಸುಮ್ಮನಿರುತ್ತಿಲ್ಲ!

Posted By:
Subscribe to Filmibeat Kannada
ಉಪ್ಪಿ 'ಇದನ್ನ ಓದ್ಬೇಡಿ' ಅಂತ ಹೇಳಿದ್ರೂ ಜನ ಸುಮ್ಮನಿರುತ್ತಿಲ್ಲ! | Filmibeat Kannada

ನಟ ಉಪೇಂದ್ರ ಇಷ್ಟು ದಿನ ಸಿನಿಮಾಗಳಲ್ಲಿ ಮಾತ್ರ ತಮ್ಮ ಬರವಣಿಗೆಯನ್ನು ತೋರಿಸುತ್ತಿದ್ದರು. ಆದರೆ ಇದೀಗ ಉಪ್ಪಿ ಮೊದಲ ಬಾರಿಗೆ ಒಂದು ಪುಸ್ತಕ ಬರೆದಿದ್ದಾರೆ. ನಿನ್ನೆ ಬಿಡುಗಡೆಯಾಗಿರುವ ಈ ಪುಸ್ತಕಕ್ಕೆ ಈಗ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಯಾಗಿದೆ.

'ಮಹಾರಾಜ'ರಿಗೆ ಧನ್ಯವಾದ ತಿಳಿಸಿದ 'ರಿಯಲ್ ಸ್ಟಾರ್' ಉಪೇಂದ್ರ

ತಮ್ಮ ಸ್ಟೈಲ್ ನಲ್ಲಿಯೇ ಉಪೇಂದ್ರ ಈ ಪುಸ್ತಕಕ್ಕೆ ಹೆಸರಿಟ್ಟಿದ್ದಾರೆ. 'ಇದನ್ನ ಓದ್ಬೇಡಿ' ಎಂಬ ಶೀರ್ಷಿಕೆಯಲ್ಲಿ ಪುಸ್ತಕ ಬಂದಿದ್ದು, ಅದನ್ನ ಜನ ಮುಗಿ ಬಿದ್ದು ಓದುತ್ತಿದ್ದಾರೆ. ಉಪೇಂದ್ರ ಬಗ್ಗೆ ಈಗಾಗಲೇ ಅನೇಕ ಪುಸ್ತಕಗಳು ಬಂದಿದೆ. ವಿಶೇಷ ಅಂದರೆ ಇದು ಸ್ವತಃ ಉಪ್ಪಿ ಅವರೇ ಬರೆದ ಮೊದಲ ಪುಸ್ತಕವಾಗಿದೆ.

'Idanna Odbedi' book has launched

ಅಂದಹಾಗೆ, ಈ ಪುಸ್ತಕದಲ್ಲಿ ಉಪೇಂದ್ರ ಅವರ ಬಾಲ್ಯ, ತಾರುಣ್ಯ, ಅವಮಾನ, ಸಿನಿಮಾ, ಹಸಿವು, ಸಂಕಟ ಸೇರಿದಂತೆ ಪ್ರಜಾಕೀಯದ ವರೆಗೆ ಅನೇಕ ಕುತೂಹಲಕಾರಿ ವಿಷಯಗಳ ಇದೆ. ಒಂದು ಮಾತಿನಲ್ಲಿ ಹೇಳಬೇಕು ಅಂದರೆ 'ಇದನ್ನ ಓದ್ಬೇಡಿ' ಉಪೇಂದ್ರ ಅವರ 'ಆತ್ಮ ಚರಿತ್ರೆ' ಅಂತೆ.

ಈಗಾಗಲೇ ಈ ಪುಸ್ತಕ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದು, ಉಪ್ಪಿ ಸಿನಿಮಾದ ರೀತಿ ಪುಸ್ತಕವೂ ಸಹ ಬ್ಲಾಕ್ ಬಾಸ್ಟರ್ ಆಗುತ್ತಿದೆ. ಆನ್ ಲೈನ್ ಮೂಲಕವು 'ಇದನ್ನ ಓದ್ಬೇಡಿ' ಪುಸ್ತಕ ಲಭ್ಯವಿದೆ.

English summary
'Idanna Odbedi', a book about Real Star Upendra has launched. ಉಪೇಂದ್ರ ಅವರ 'ಇದನ್ನ ಓದ್ಬೇಡಿ' ಪುಸ್ತಕ ಬಿಡುಗಡೆಯಾಗದೆ.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada