»   » 'ಗೋವಾ' ಫ್ಲಾಪ್ ಆದರೆ ಗೆಲುವು ಯಾರ ಕೊರಳಿಗೆ?

'ಗೋವಾ' ಫ್ಲಾಪ್ ಆದರೆ ಗೆಲುವು ಯಾರ ಕೊರಳಿಗೆ?

Posted By: ಜೀವನರಸಿಕ
Subscribe to Filmibeat Kannada

ಈ ವಾರ (ಮಾ.6) ಪ್ರೇಕ್ಷಕರಿಗೆ 'ಫ್ಲಾಪ್' ಸಿನಿಮಾ ನೋಡೋ ಅವಕಾಶ. ಇದೇನಪ್ಪಾ ಹಿಟ್ ಸಿನಿಮಾ ನೋಡ್ಬೇಕು ಅಂತಿದ್ರೆ ಅಂತ ಅನ್ಕೋತಿದ್ದೀರಾ. ಹೌದು ನಾವ್ ಹೇಳ್ತಿರೋದು 'ಫ್ಲಾಪ್' ಸಿನಿಮಾದ ಬಗ್ಗೆ ಅಲ್ಲ. ರಿಲೀಸ್ ಗೆ ರೆಡಿಯಾಗಿರೋ ಎರಡು ಸಿನಿಮಾಗಳ ಬಗ್ಗೆ.

ಈ ಶುಕ್ರವಾರ ಎರಡು ಸಿನಿಮಾಗಳು ತೆರೆಗೆ ಬರ್ತಿವೆ ಅವುಗಳಲ್ಲಿ ಒಂದು 'ಗೋವಾ' ಮತ್ತೊಂದು 'ಫ್ಲಾಪ್'. ಎರಡೂ ಸಿನಿಮಾಗಳಿಗೂ ಕೆಲವು ಸಾಮ್ಯತೆಗಳಿವೆ. ವಿಲನ್ ಗಳ ಸಿನಿಮಾ ಅಂಥ ಹೇಳಿಕೊಂಡ್ರು 'ಫ್ಲಾಪ್' ಸಿನಿಮಾದಲ್ಲಿ ಮೂವರು ಹೀರೋಗಳಿದ್ದಾರೆ.


If movie 'Goa' Flops who will be the winner?

ಇನ್ನು 'ಗೋವಾ' ಸಿನಿಮಾದಲ್ಲೂ ಮೂವರು ಹೀರೋಗಳಿದ್ದಾರೆ. ಎರಡೂ ಸಿನಿಮಾಗಳ ನಿರ್ದೇಶಕರು ಹೊಸಬರಾದ್ರೂ 'ಗೋವಾ' ರೀಮೇಕ್ ಸಿನಿಮಾ ಆಗಿದ್ರೆ 'ಫ್ಲಾಪ್' ಸ್ವಮೇಕ್ ಸಿನಿಮಾ. 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ'ಯಲ್ಲಿ ಸುನಿ ಜೊತೆಗೆ ಕೆಲಸ ಮಾಡಿದ್ದ ಕರಣ್ ಕುಮಾರ್ ಫ್ಲಾಪ್ ಅನ್ನೋ ಟೈಟಲ್ ಗೆ ಫಾರ್ ಹಿಟ್ ಅನ್ನೋ ಅಡಿಬರಹ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ.


ಗೋವಾ ಮಲ್ಟಿಸ್ಟಾರರ್ ಚಿತ್ರ. ಕೋಮಲ್,ತರುಣ್ ಚಂದ್ರ,ಶ್ರೀಕಿ ಅಭಿನಯದಲ್ಲಿ ಎರಡು ವರ್ಷದಿಂದ ರಿಲೀಸ್ ಗೆ ಕಾದಿರೋ ಗೋವಾ ಒಂದು ವರ್ಷದಿಂದ ರಿಲೀಸ್ ಗೆ ಕಾದಿರೋ ಚಿತ್ರದಲ್ಲಿ ಗೆಲುವು ಸ್ವಮೇಕ್ ಗಾ? ರೀಮೇಕ್ ಗಾ ಅನ್ನೋದನ್ನ ಚಿತ್ರರಸಿಕನೇ ನಿರ್ಧರಿಸಲಿದ್ದಾನೆ.


ಶಂಕರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶಂಕರ್ ಗೌಡ, ಸಿ.ಎಂ.ಆರ್ ಶಂಕರ್ ರೆಡ್ಡಿ ಹಾಗೂ ರಜತ್ ಮಂಜುನಾಥ್ ಅವರು ಗೋವಾ ಚಿತ್ರದ ನಿರ್ಮಾಪಕರು. ಸೂರ್ಯ ಅವರು ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಕೋಮಲ್, ತರುಣ್ ಚಂದ್ರ, ಶ್ರೀಕಾಂತ್, ಶರ್ಮಿಳಾ ಮಾಂಡ್ರೆ, ರಚಲ್, ಸೋನುಗೌಡ, ಅಶೋಕ್, ಶೋಭ್‍ರಾಜ್, ರಮೇಶ್‍ಭಟ್, ಬುಲೆಟ್ ಪ್ರಕಾಶ್, ಧರ್ಮ, ಕರಿಸುಬ್ಬು ಮುಂತಾದವರಿದ್ದಾರೆ.


If movie 'Goa' Flops who will be the winner?

ಅರ್ಜುನ್ ಜನ್ಯ ಸಂಗೀತವಿರುವ ಈ ಚಿತ್ರಕ್ಕೆ ರಾಜೇಶ್ ಅವರ ಛಾಯಾಗ್ರಹಣವಿದೆ. ದೀಪು.ಎಸ್.ಕುಮಾರ್ ಸಂಕಲನ, ಮುರಳಿ, ನಿಕ್ಸನ್ ನೃತ್ಯ ನಿರ್ದೇಶನ, ಚಂದ್ರು, ಕೌರವ ವೆಂಕಟೇಶ್ ಸಾಹಸ ನಿರ್ದೆಶನವಿರುವ ಈ ಚಿತ್ರಕ್ಕೆ ಆನಂದ್ ಕಲಾ ನಿರ್ದೇಶನವಿದೆ.


ಪುಣ್ಯ ಕೋಟಿ ಸಿನಿಕೆಫೆ ಲಾಂಛನದಲ್ಲಿ ದೇವರಾಜ್ ನಿರ್ಮಿಸುತ್ತಿರುವ ಚಿತ್ರ 'ಫ್ಲಾಪ್'. ಕರಣ್ ಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ಛಾಯಾಗ್ರಹಣ-ಕನಕ ದರ್ಶನ್, ಸಂಗೀತ ಎ.ಎನ್. ಶಾಸ್ತ್ರಿ, ನೃತ್ಯ ಹೈಟ್ ಮಂಜ, ನಾಯಕನಿಲ್ಲದ ಈ ಚಿತ್ರದಲ್ಲಿ ಸುಕೃತವಾಗ್ಲೆ ಇವರ ಜೊತೆಯಲ್ಲಿ ವಿಜೇತ್, ಸಂದೀಪ್, ಅಖಿಲ್, ಹರಿಣಿ, ಮುಂತಾದವರಿದ್ದಾರೆ.

English summary
Two Kannada movies 'Goa' and 'Flop' slated for release on 6th March. Goa is a remake one and Flop is the swamake movie. Both are freshers movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada