For Quick Alerts
  ALLOW NOTIFICATIONS  
  For Daily Alerts

  ಬೇಕಿದ್ದರೆ ಪ್ಯಾಂಟ್ ಕೊಡ್ತೇನೆ ಸೈಜ್ ಚೆಕ್ ಮಾಡಿಕೊಳ್ಳಿ

  By Rajendra
  |

  "ಬೇಕಿದ್ದರೆ ನನ್ನ ಜೀನ್ಸ್ ಪ್ಯಾಂಟ್ ಕೊಡ್ತೀನಿ. ನನ್ನ ಸೊಂಟದ ಸುತ್ತಳತೆ ಚೆಕ್ ಮಾಡಿಕೊಳ್ಳಿ. ನನ್ನ ಸೈಜ್ 4. ನಾನು ತುಂಬ ತೆಳ್ಳಗಾಗಿದ್ದೇನೆ ಎಂಬ ಸುದ್ದಿಗಳನ್ನು ಕೆಲವರು ಬೇಕಾಬಿಟ್ಟಿಯಾಗಿ ಹಬ್ಬಿಸುತ್ತಿದ್ದಾರೆ. ನನ್ನದು ಜೀರೋ ಸೈಜ್ ಅಲ್ಲವೇ ಅಲ್ಲ ಎಂದು ತಾರೆ ಇಲಿಯಾನಾ ತಮ್ಮ ಸೊಂಟದ ಸುತ್ತಳತೆ ಬಗ್ಗೆ ಡಿಕ್ಲೆರೇಶನ್ ಕೊಟ್ಟಿದ್ದಾರೆ.

  ಇತ್ತೀಚೆಗೆ ಹೈದರಾಬಾದಿನಲ್ಲಿ ತಮ್ಮ ಸೊಂಟದ ವಿಷಯವನ್ನು ಪ್ರಸ್ತಾಪಿಸಿ ಅವರು ಮಾತನಾಡುತ್ತಿದ್ದರು. "ನನ್ನ ಸಿನಿಮಾಗಳು ಬಿಡುಗಡೆ ಹಂತಕ್ಕೆ ಬಂದಾಗ ನನಗೆ ಒಂದೇ ಆತಂಕ ಕಾಡುತ್ತಿರುತ್ತದೆ. ನಾವು ಪಟ್ಟ ಕಷ್ಟವನ್ನು ಪ್ರೇಕ್ಷಕರು ಇಷ್ಟಪಡುತ್ತಾರಾ ಎಂಬ ಸಂದೇಹ ಅಪಾದಮಸ್ತಕವಾಗಿ ಕಾಡುತ್ತದೆ.

  ಗಾಳಿಯಲ್ಲಿ ಉರಿವ ದೀಪ ಇಟ್ಟು ದೇವರೇ ನೀನೇ ದಿಕ್ಕು ಅಂದರೆ ಏನುಪಯೋಗ? ನಾವು ಮಾಡಿದ ಪ್ರಯತ್ನದಲ್ಲಿ ನಿಜಾಯಿತಿ ಇದ್ದರೆ ತಪ್ಪದೆ ಫಲಿತಾಂಶ ಸಿಗುತ್ತದೆ ಎಂದಿದ್ದಾರೆ. ಬಳಿಕ ಇಲಿಯಾನಾ ಮಾತು ಸೊಂಟದಿಂದ ಧಾರ್ಮಿಕ ವಿಚಾರಧಾರೆಗಳ ಕಡೆಗೆ ಹೊರಳಿತು.

  "ನಾನು ಕ್ರಿಶ್ಚಿಯನ್ ಆಗಿದ್ದರೂ ಆಗಾಗ ಹಿಂದೂ ದೇವಾಲಯಗಳಿಗೆ ಹೋಗುತ್ತಿರುತ್ತೇನೆ. ಮಸೀದಿಗೂ ಭೇಟಿ ನೀಡುತ್ತಿರುತ್ತೇನೆ. ನಮಗಿಂತಲೂ ಮೇಲೆ ಯಾರೋ ಇದ್ದಾರೆಂದೂ, ಆ ಶಕ್ತಿಯೇ ನಮ್ಮನ್ನು ಮುನ್ನಡೆಸುತ್ತಿದೆ ಎಂಬ ನಂಬಿಕೆ ನನ್ನದು.

  ಎಲ್ಲ ಧರ್ಮಗಳ ಸಾರ ಒಂದೇ ಎಂಬುದು ನನ್ನ ಸಿದ್ಧಾಂತ. ಎಲ್ಲ ದೇವರನ್ನೂ ನಂಬಿದರೆ ಕನಿಷ್ಠ ಒಬ್ಬ ದೇವರಾದರೂ ಕರುಣಿಸುತ್ತಾನೆ ಎಂದು ನಂಬಿದ್ದೇನೆ" ಎಂದು ಧಾರ್ಮಿಕ ಭಾವದಿಂದ ಇಲಿಯಾನಾ ಉತ್ತರಿಸಿದ್ದಾರೆ.

  ಇಷ್ಟೆಲ್ಲಾ ಮಾತನಾಡಿರುವ ಇಲಿ, ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಹುಡುಗ ಹುಡುಗಿ' ಚಿತ್ರದಲ್ಲಿ ಹಾಗೆ ಬಂದು ಹೀಗೆ ಕುಣಿದಿದ್ದಕ್ಕೆ ರು.30 ಲಕ್ಷ ಎಣಿಸಿದ್ದರು. ಈಕೆ ಒಂದು ಹಾಡಿಗೆ ಪಡೆಯುವ ಸಂಭಾವನೆ ನಮ್ಮ ಲಕ್ಕಿ ಸ್ಟಾರ್ ರಮ್ಯಾ ಇಡೀ ಚಿತ್ರಕ್ಕೆ ಪಡೆಯುವ ಸಂಭಾವನೆಗೆ ಸಮವಾಗುತ್ತದೆ ಎಂದರೆ ನಂಬಲೇ ಬೇಕು.

  ಏತನ್ಮಧ್ಯೆ ದಕ್ಷಿಣ ಭಾರತದ ಈ ಮೀಂಚುಳ್ಳಿ ಬಾಲಿವುಡ್ ಅಂಗಳಕ್ಕೆ ಜಿಗಿಯಲು ಸಿದ್ಧತೆ ನಡೆಸಿದ್ದಾರೆ. ಮಲೆಯಾಳಿ ಕುಟ್ಟಿ ಅಸಿನ್ ಹಾಗೂ ತಮಿಳು ಪೆಣ್ಣು ತ್ರಿಷಾರನ್ನು ಬಾಲಿವುಡ್ ಅಪ್ಪಿಕೊಂಡ ಬಳಿಕ ಇಲಿಯಾನಾರನ್ನು ಕೈಬೀಸಿ ಕರೆಯುತ್ತಿದೆ. ಸದ್ಯಕ್ಕೆ ತೆಲುಗು ಚಿತ್ರರಂಗದಲ್ಲಿ ಅತ್ಯಧಿಕ ಸಂಭಾವನೆ ಪಡೆಯುವ ನಟಿಯಾಗಿ ಇಲಿಯಾನಾ ಗುರುತಿಸಿಕೊಂಡಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  "People are thinking that I have lost too much weight and became a size zero baby. But can we make it here official that my size is 4, not size 0. Trust me, shall I show my jeans to prove this?" says sizzling actress Ileana."

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X