»   » 'ಜಾಗ್ವಾರ್' ಅಡ್ಡದಿಂದ ಬಂದಿರುವ ತಾಜಾ ಫೋಟೋ ಇದು.!

'ಜಾಗ್ವಾರ್' ಅಡ್ಡದಿಂದ ಬಂದಿರುವ ತಾಜಾ ಫೋಟೋ ಇದು.!

Posted By:
Subscribe to Filmibeat Kannada

ಕಾಂಗ್ರೆಸ್ ನಾಯಕ ಎಚ್.ಎಂ.ರೇವಣ್ಣ ಪುತ್ರ ಅನೂಪ್ ರೇವಣ್ಣ 'ಲಕ್ಷ್ಮಣ' ಆಗಿ ಅಬ್ಬರಿಸಿದ್ದು ಆಯ್ತು. ಚೆಲುವರಾಯಸ್ವಾಮಿ ಪುತ್ರ ಸಚಿನ್ 'ಹ್ಯಾಪಿ ಬರ್ತಡೆ' ಸಂಭ್ರಮದಲ್ಲಿದ್ದಾರೆ. ಇವರಿಬ್ಬರ ನಡುವೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅಭಿನಯದ 'ಜಾಗ್ವಾರ್' ಆಗಾಗ ಸದ್ದು-ಸುದ್ದಿ ಮಾಡುತ್ತಲಿದೆ.

ಕಳೆದ ವಾರವಷ್ಟೇ 'ಜಾಗ್ವಾರ್' ಚಿತ್ರದ ಮೇಕಿಂಗ್ ಟೀಸರ್ ಬಿಡುಗಡೆ ಆಗಿತ್ತು. ಅದರಲ್ಲಿ ನಿಖಿಲ್ ಕುಮಾರ್ ಮತ್ತು ಕುಮಾರಸ್ವಾಮಿ ಹೈಲೈಟ್ ಆಗಿದ್ದರು ಎಂಬುದನ್ನು ಬಿಟ್ಟರೆ, 'ಜಾಗ್ವಾರ್' ಚಿತ್ರದ ಇತರೆ ತಾರಾಬಳಗದ ಪರಿಚಯ ನಿಮಗೆ ಆಗಿರ್ಲಿಲ್ಲ. [ವಿಡಿಯೋ: 'ಕ್ಲಾಸ್'ಗೂ 'ಮಾಸ್'ಗೂ ನಿಖಿಲ್ ಕುಮಾರ್ 'ಬಾಸ್' ಆಗ್ಬಹುದು.!]


ಹೀಗಾಗಿ, 'ಜಾಗ್ವಾರ್' ಅಡ್ಡದಿಂದ ನಿಮಗಾಗಿ ನಾವು ಒಂದು ಸ್ಪೆಷಲ್ ಫೋಟೋ ಹೊತ್ತು ತಂದಿದ್ದೀವಿ. ಅದನ್ನ ನೋಡಲು ಕೆಳಗಿನ ಫೋಟೋ ಸ್ಲೈಡ್ ಕ್ಲಿಕ್ ಮಾಡಿ....


'ಜಾಗ್ವಾರ್' ಸೆಟ್ ನಲ್ಲಿ 'ಬ್ರಹ್ಮಾನಂದಂ' ನೋಡಿದ್ದೀರಾ.?

ನಿಖಿಲ್ ಕುಮಾರ್ ರವರ ಚೊಚ್ಚಲ ಸಿನಿಮಾ 'ಜಾಗ್ವಾರ್' ನಲ್ಲಿ ತೆಲುಗಿನ ಪ್ರಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ಅಭಿನಯಿಸುತ್ತಿರುವ ಬಗ್ಗೆ ನಾವೇ ಮೊದಲು ನಿಮಗೆ ತಿಳಿಸಿದ್ವಿ. ನೆನಪಿದೇ ತಾನೆ... ['ಜಾಗ್ವಾರ್' ಚಿತ್ರಕ್ಕೆ ಬ್ರಹ್ಮಾನಂದಂ ಕಾಮಿಡಿ ಕಿಕ್!]


ಈ ಫೋಟೋ ನೋಡಿ....

ಈಗ 'ಜಾಗ್ವಾರ್' ಸಿನಿಮಾದ ಸೆಟ್ ನಲ್ಲಿ ನಟ ನಿಖಿಲ್ ಕುಮಾರ್ ಜೊತೆ ಬ್ರಹ್ಮಾನಂದಂ ಇರುವ ಫೋಟೋ ಹೊತ್ತು ತಂದಿದ್ದೀವಿ ನೋಡಿ.... [ತಡರಾತ್ರಿ ಎಚ್.ಡಿ.ಕುಮಾರಸ್ವಾಮಿ ಬಲ್ಗೇರಿಯಾಗೆ ಹಾರಿದ್ದು ಯಾಕೆ.?]


ಕಾಮಿಡಿ ಕಿಕ್ ಗ್ಯಾರೆಂಟಿ.!

ಟಾಲಿವುಡ್ ಅಂಗಳದಲ್ಲಿ ನಟ ಬ್ರಹ್ಮಾನಂದಂ ಕಾಮಿಡಿ ಕಿಂಗ್. ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವಲ್ಲಿ ನಟ ಬ್ರಹ್ಮಾನಂದಂ ಫೇಮಸ್. ಈಗ ಅದೇ ಇಮೇಜ್ ನಲ್ಲಿ ಬ್ರಹ್ಮಾನಂದಂ 'ಜಾಗ್ವಾರ್' ಸೆಟ್ ಗೆ ಕಾಲಿಟ್ಟಿದ್ದಾರೆ.


ಬ್ರಹ್ಮಾನಂದಂ ಗೆ ಇದೆ ಪ್ರಮುಖ ಪಾತ್ರ

ಕಾಮಿಡಿ ಪಾತ್ರ ಅಂದಕೂಡಲೆ, ಎರಡ್ಮೂರು ಸೀನ್ ಗಳಿಗೆ ಮಾತ್ರ ಸೀಮಿತ ಅಂತ ಅಂದುಕೊಳ್ಳಬೇಡಿ. 30 ದಿನಗಳ ಕಾಲ ಬ್ರಹ್ಮಾನಂದಂ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ ಅಂದ್ರೆ ಅವರಿಗೆ 'ಜಾಗ್ವಾರ್' ಚಿತ್ರದಲ್ಲಿ ಮುಖ್ಯ ಪಾತ್ರ ಇದೆ ಅಂತರ್ಥ.


'ನಿನ್ನಿಂದಲೇ' ಚಿತ್ರದಲ್ಲಿ ನಟಿಸಿದ್ದರು.!

ಈ ಹಿಂದೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ನಿನ್ನಿಂದಲೇ' ಸಿನಿಮಾದಲ್ಲಿ ಬ್ರಹ್ಮಾನಂದಂ ನಟಿಸಿದ್ದರು.


ಕನ್ನಡಿಗರು ನಕ್ಕು-ನಲಿಯಬಹುದಲ್ವಾ.?

ಪ್ರಮುಖ ಪಾತ್ರದಲ್ಲಿ ನಟ ಬ್ರಹ್ಮಾನಂದಂ ಇದ್ದಾರೆ ಅಂದ್ರೆ ನಕ್ಕು-ನಲಿಯಬಹುದಲ್ವಾ ಅಂತ ನೀವೆಲ್ಲಾ ಯೋಚಿಸುತ್ತಿದ್ದರೆ ಇಲ್ಲೊಂದು ಟ್ವಿಸ್ಟ್ ಇದೆ.


ಏನು ಆ ಟ್ವಿಸ್ಟ್.?

ತೆಲುಗು ಹಾಗೂ ಕನ್ನಡ ಭಾಷೆಯಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ 'ಜಾಗ್ವಾರ್' ಚಿತ್ರದ ತೆಲುಗು ಅವತರಣಿಕೆಯಲ್ಲಿ ಮಾತ್ರ ಬ್ರಹ್ಮಾನಂದಂ ನಟಿಸಿದ್ದಾರಂತೆ.!


ಕನ್ನಡದಲ್ಲಿ ಯಾರು.?

ಮೂಲಗಳ ಪ್ರಕಾರ, ಕನ್ನಡದಲ್ಲಿ ಬ್ರಹ್ಮಾನಂದರ ಅವರ ಪಾತ್ರ ಪೋಷಿಸುತ್ತಿರುವವರು ಹಾಸ್ಯ ನಟ ಸಾಧು ಕೋಕಿಲ.


ಹಾಸ್ಯಕ್ಕೆ ಮೋಸ ಇಲ್ಲ.!

ಸಾಧು ಕೋಕಿಲ ಇದ್ದ ಮೇಲೆ ನಗುವಿಗೆ ಮೋಸವಿಲ್ಲ.


'ಜಾಗ್ವಾರ್' ಕುರಿತು....

ಎಚ್.ಎಸ್.ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕಥೆ ರಚಿಸಿರುವ, ಮಹದೇವ್ ಆಕ್ಷನ್ ಕಟ್ ಹೇಳಿರುವ ಚಿತ್ರ 'ಜಾಗ್ವಾರ್'. ಎಚ್.ಡಿ.ಕುಮಾರಸ್ವಾಮಿ ಹೋಮ್ ಬ್ಯಾನರ್ ಚೆನ್ನಾಂಬಿಕ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ 'ಜಾಗ್ವಾರ್' ರೆಡಿಯಾಗುತ್ತಿದೆ.


English summary
Popular Telugu Actor Brahmanandam is roped into play prominent role in Karnataka Ex CM H.D.Kumaraswamy son Nikhil Kumar's debut movie 'Jaguar' (Telugu Version). Check out the picture.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada