Just In
Don't Miss!
- News
ಕೈ ತಪ್ಪಿದ ಸಚಿವ ಸ್ಥಾನ; ಅಪಚ್ಚು ರಂಜನ್ ಆಕ್ರೋಶ
- Sports
ಭಾರತ vs ಆಸ್ಟ್ರೇಲಿಯಾ: 4ನೇ ಟೆಸ್ಟ್ ಬ್ರಿಸ್ಬೇನ್, ದಿನ 3, Live ಸ್ಕೋರ್
- Lifestyle
"ಭಾನುವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ "
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಟಾಟಾ ಆಲ್ಟ್ರೊಜ್ ಐಟರ್ಬೋ ಕಾರಿನ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್
- Finance
ಬಜೆಟ್ 2021: MSME ವಲಯಕ್ಕೆ ಏನು ಸಿಗಬಹುದು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅನು ಪ್ರಭಾಕರ್-ರಘು ಮುಖರ್ಜಿ ದಂಪತಿಯ ಮುದ್ದು ಮಗಳನ್ನು ನೋಡಿದ್ದೀರಾ.?

ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಸಂಭ್ರಮ ನಟಿ ಅನು ಪ್ರಭಾಕರ್ ಹಾಗೂ ರಘು ಮುಖರ್ಜಿ ದಂಪತಿಯ ಮನೆಯಲ್ಲಿ ಜೋರಾಗಿದೆ. ಅದರಲ್ಲೂ ಈ ವರ್ಷದ ದೀಪಾವಳಿ ಅನು ಪ್ರಭಾಕರ್-ರಘು ಮುಖರ್ಜಿ ದಂಪತಿಗೆ ಸಿಕ್ಕಾಪಟ್ಟೆ ಸ್ಪೆಷಲ್. ಯಾಕಂದ್ರೆ, ಇದು ತಮ್ಮ ಮುದ್ದು ಮಗಳೊಂದಿಗೆ ಮೊದಲ ದೀಪಾವಳಿ.
ಹೌದು, ಕಳೆದ ಆಗಸ್ಟ್ 15 ರಂದು ಮುದ್ದಾದ ಹೆಣ್ಣು ಮಗುವಿಗೆ ನಟಿ ಅನು ಪ್ರಭಾಕರ್ ಜನ್ಮ ನೀಡಿದ್ದರು. ಇದೀಗ ತಮ್ಮ ಮೂರು ತಿಂಗಳ ಮಗಳೊಂದಿಗೆ ದೀಪಾವಳಿ ಹಬ್ಬ ಆಚರಿಸುತ್ತಿದ್ದಾರೆ 'ಮುಖರ್ಜಿ' ದಂಪತಿ.
'ಅಮ್ಮ'ನಾದ ಅನು ಪ್ರಭಾಕರ್: ಸಂತಸ ಹಂಚಿಕೊಂಡ ರಘು ಮುಖರ್ಜಿ
ಅಂದ್ಹಾಗೆ, ಅನು ಪ್ರಭಾಕರ್-ರಘು ಮುಖರ್ಜಿಯ ಮುದ್ದಿನ ಮಗಳು ಹೇಗಿದ್ದಾಳೆ ಗೊತ್ತಾ.? ಮುದ್ದು ಮಗಳ ಫೋಟೋವನ್ನ ರಘು ಮುಖರ್ಜಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ.
ಈ ವರ್ಷ ನಮ್ಮ ದೀಪಾವಳಿ ಬಹಳ ವಿಶೇಷ... ನಮ್ಮ ಮಗಳು ಹಾಗು ನಮಿಂದ ನಿಮ್ಮೆಲ್ಲರಿಗು ಹಬ್ಬದ ಹಾರ್ದಿಕ ಶುಭಾಶಯಗಳು✨🎉🎊✨!!! pic.twitter.com/vH2dpm5lAJ
— Raghu mukherjee (@RaghuMukherjee) November 7, 2018
ಅನು ಪ್ರಭಾಕರ್-ರಘು ಮುಖರ್ಜಿ 'ಎರಡನೇ' ವಿವಾಹ ಮಹೋತ್ಸವ
ಎರಡು ವರ್ಷಗಳ ಹಿಂದೆ, ಅಂದ್ರೆ 2016 ರಲ್ಲಿ ರಘು ಮುಖರ್ಜಿ ಹಾಗೂ ಅನು ಪ್ರಭಾಕರ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಕುಟುಂಬ ಹಾಗೂ ಆಪ್ತರ ಸಮ್ಮುಖದಲ್ಲಿ ಹೊಸ ಜೀವನ ಪ್ರಾರಂಭಿಸಿದ ಈ ಜೋಡಿಯ ಮನದಲ್ಲಿ ಸಂತಸ ಮನೆ ಮಾಡಿದೆ.