»   » ವೀರಪ್ಪನ್ ಬೇಟೆಗೆ ಸಜ್ಜಾದ ಶಿವಣ್ಣ ತಂಡ

ವೀರಪ್ಪನ್ ಬೇಟೆಗೆ ಸಜ್ಜಾದ ಶಿವಣ್ಣ ತಂಡ

Posted By:
Subscribe to Filmibeat Kannada

ತೆಲುಗು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಆಕ್ಷನ್-ಕಟ್ ಹೇಳುತ್ತಿರುವ ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಕಿಲ್ಲಿಂಗ್ ವೀರಪ್ಪನ್ ಚಿತ್ರ ಪೂರ್ತಿಗೊಂಡಿದ್ದು, ನವೆಂಬರ್ 6 ರಂದು ತೆರೆ ಮೇಲೆ ಭರ್ಜರಿಯಾಗಿ ಅಪ್ಪಳಿಸಲಿದೆ.

ಅಕ್ಟೋಬರ್ 25ರಂದು ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮವಿದ್ದು, ನವೆಂಬರ್ 6ರಂದು ಇಡೀ ವಿಶ್ವದಾದ್ಯಂತ 'ಕಿಲ್ಲಿಂಗ್ ವೀರಪ್ಪನ್' ಬಾಕ್ಸಾಫೀಸ್ ಬೇಟೆ ಶುರು ಹಚ್ಚಿಕೊಳ್ಳಲಿದೆ.

ಇದೀಗ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಶೂಟಿಂಗ್ ಸೆಟ್ ನ ಕೆಲವಾರು ಸ್ಟಿಲ್ಸ್ ಗಳು ನಿಮ್ಮ ಕನ್ನಡ ಫಿಲ್ಮಿಬೀಟ್ ಗೆ ಸಿಕ್ಕಿದೆ. ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರು ವೀರಪ್ಪನ್ ಬೇಟೆಗೆ ಸಜ್ಜಾಗಿದ್ದಾರೆ ಅಂತ ಸ್ಪಷ್ಟವಾಗಿ ಕಾಣುತ್ತದೆ.[ಫ್ಲ್ಯಾಶ್ ನ್ಯೂಸ್: 3000 ಥಿಯೇಟರ್ ಗಳಲ್ಲಿ ಶಿವಣ್ಣ, ಕಿಲ್ಲಿಂಗ್ ವೀರಪ್ಪನ್]

shiva rajkumar

ಚಿತ್ರದ ಸ್ಟಿಲ್ಸ್ ನಲ್ಲಿ ಶಿವರಾಜ್ ಕುಮಾರ್ ಅವರು ಮಿಲ್ಟ್ರಿ ಹಾಗು ಪೊಲೀಸ್ ಡ್ರೆಸ್ಸ್ ಸೇರಿದಂತೆ ಹಲವಾರು ಅವತಾರಗಳಲ್ಲಿ ಮಿಂಚಿದ್ದು, ಶಿವಣ್ಣ ಜೊತೆ ಸಂಚಾರಿ ವಿಜಯ್ ಕೂಡ ಇದ್ದಾರೆ.

ವಿವಾದಾತ್ಮಕ ನಿರ್ದೇಶಕ ಅಂತಲೇ ಫೇಮಸ್ ಆಗಿರುವ ತೆಲುಗು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಸೆಟ್ ನಲ್ಲಿ ಕ್ಯಾಮರಾಮೆನ್ ಹಾಗೂ ಶಿವಣ್ಣ ಅವರಿಗೆ ಶಾಟ್ ಗಳ ಬಗ್ಗೆ ವಿವರಿಸುತ್ತಿದ್ದಾರೆ.[ನವೆಂಬರ್ 6ರಂದು ತೆರೆಗೆ ಅಪ್ಪಳಿಸಲಿದೆ 'ಕಿಲ್ಲಿಂಗ್ ವೀರಪ್ಪನ್']

ಒಟ್ನಲ್ಲಿ ನವೆಂಬರ್ 6 ರಂದು ಎಲ್ಲೆಡೆ ಸುಮಾರು 3000 ಸ್ಕ್ರೀನ್ ಗಳಲ್ಲಿ 'ಕಿಲ್ಲಿಂಗ್ ವೀರಪ್ಪನ್' ಅಬ್ಬರ ಆರಂಭವಾಗಲಿದ್ದು, ಚಿತ್ರ ಭರ್ಜರಿ ಯಶಸ್ಸು ಕಾಣುತ್ತಾ ಅಂತ ಕಾದು ನೋಡೋಣ.

    English summary
    Kannada Movie 'Killing Veerappan' has confirmed its release on November 6th in 3000 theatres in South India. For the first time controversial director Ram Gopal Varma and Dr Shivarajkumar has teamed up for Killing Veerappan, which is based on the real life story of smuggler Veerappan. Check out the making still of 'Killing Veerappan'

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada