India
  For Quick Alerts
  ALLOW NOTIFICATIONS  
  For Daily Alerts

  ಚಿತ್ರಗಳು: ಸ್ಯಾಂಡಲ್ ವುಡ್ ಸ್ಟಾರ್ಸ್ ನೈಟ್ ಅವಾರ್ಡ್ ಫಂಕ್ಷನ್

  By Suneetha
  |

  2014 ಹಾಗೂ 2015 ರಲ್ಲಿ ಕನ್ನಡ ಚಿತ್ರರಂಗ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸ್ಯಾಂಡಲ್ ವುಡ್ ಪ್ರತಿಭೆಗಳಿಗೆ ಗೌರವ ಸಲ್ಲಿಸುವ ಸ್ಯಾಂಡಲ್ ವುಡ್ ಸ್ಟಾರ್ಸ್ ನೈಟ್ ಮತ್ತು ಫ್ಲೇಮಿಂಗೋ ಸೆಲೆಬ್ರೆಟಿಸ್ ವರ್ಲ್ಡ್ ಪ್ರೈವೆಟ್ ಲಿಮಿಟೆಡ್ ಅವಾರ್ಡ್ ಕಾರ್ಯಕ್ರಮ ಬುಧವಾರ (ಅಕ್ಟೋಬರ್ 14) ಸಂಜೆ ಚೌಡಯ್ಯ ಮೆಮೋರಿಯಲ್ ಹಾಲ್ ಬೆಂಗಳೂರಿನಲ್ಲಿ ನಡೆಯಿತು.

  ಕನ್ನಡ ಚಿತ್ರರಂಗದಲ್ಲಿ ಸತತ 25 ವರ್ಷ ಪೂರೈಸಿದ ಹಿನ್ನಲೆಯಲ್ಲಿ ತಾರಾ ಅನುರಾಧ ಅವರಿಗೆ ವಿಶೇಷ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ತಾರಾ ಅವರು ನನ್ನ ಈ ಯಶಸ್ಸಿಗೆ ನನ್ನ ಪತಿ ಹೆಚ್.ಸಿ ವೇಣು ಅವರ ಗಟ್ಟಿಯಾದ ಬೆಂಬಲವೇ ಕಾರಣ ಎಂದರು.

  'ಮಹಾಶರಣ ಹರಳಯ್ಯ' ಸಿನಿಮಾ ಈ ವರ್ಷದ ಬೆಸ್ಟ್ ಫಿಲ್ಮ್ ಎಂಬ ಹಿರಿಮೆಗೆ ಭಾಜನವಾಯಿತು. ಚಿತ್ರದ ನಿರ್ದೇಶಕ ಪುರುಷೋತ್ತಮ ಅವರು ಪ್ರಶಸ್ತಿ ಸ್ವೀಕರಿಸಿದರು. ಇನ್ನುಳಿದಂತೆ ರೇಖಾ ದಾಸ್ ಹಾಗೂ ಅವರ ಮಗಳು ಶ್ರಾವ್ಯ, ಕಾಮಿಡಿ ನಟ ಸಂಕೇತ್ ಕಾಶಿ, ಸಿಂಗರ್ ಅಜಯ್ ವಾರಿಯರ್, ನಟ ಜೆ.ಕೆ ಮುಂತಾದವರು ವಿವಿಧ ಪ್ರಶಸ್ತಿಗಳನ್ನು ತಮ್ಮ ತಮ್ಮ ಬಗಲಿಗೆ ಹಾಕಿಕೊಂಡರು.

  ಇನ್ನು ಯಾರ್ಯಾರು ಯಾವ ಯಾವ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡರು ಎಂಬುದನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

  ನಟಿ ಮೇಘನಾ ಸುಂದರ್ ರಾಜ್

  ನಟಿ ಮೇಘನಾ ಸುಂದರ್ ರಾಜ್

  ಸ್ಯಾಂಡಲ್ ವುಡ್ ನಲ್ಲಿ ಸದ್ಯಕ್ಕೆ ಲೀಡ್ ನಲ್ಲಿರುವ ನಟಿ ಮೇಘನಾ ಸುಂದರ್ ರಾಜ್ ಅವರು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ನಟ ರಮೇಶ್ ಭಟ್ ಅವರಿಂದ ಪಡೆದುಕೊಳ್ಳುತ್ತಿರುವುದು.

  ನಟ ಜೆ.ಕೆ. ಅಲಿಯಾಸ್ ಕಾರ್ತಿಕ್ ಜಯರಾಂ

  ನಟ ಜೆ.ಕೆ. ಅಲಿಯಾಸ್ ಕಾರ್ತಿಕ್ ಜಯರಾಂ

  ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ 'ಅಶ್ವಿನಿ ನಕ್ಷತ್ರ' ಖ್ಯಾತಿಯ ನಟ ಜೆ.ಕೆ ಅಲಿಯಾಸ್ ಕಾರ್ತಿಕ್ ಜಯರಾಂ ಅವರು ತಾರಾ ಅವರಿಂದ ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸುತ್ತಿರುವುದು.

  ಹಾಡುಗಾರ ಅಜೇಯ್ ವಾರಿಯರ್

  ಹಾಡುಗಾರ ಅಜೇಯ್ ವಾರಿಯರ್

  ಖ್ಯಾತ ಹಾಡುಗಾರ ಅಜೇಯ್ ವಾರಿಯರ್ ಅವರಿಗೆ ನಟಿ ತಾರಾ ಅನುರಾಧ ಅವರು ಅತ್ಯುತ್ತಮ ಹಾಡುಗಾರ ಪ್ರಶಸ್ತಿ ನೀಡುತ್ತಿರುವುದು.

  ಕಾಮಿಡಿ ನಟ ತಬಲಾ ನಾಣಿ

  ಕಾಮಿಡಿ ನಟ ತಬಲಾ ನಾಣಿ

  ಕಾಮಿಡಿ ನಟ ತಬಲಾ ನಾಣಿ ಅವರು ಅತ್ಯುತ್ತಮ ಕಾಮಿಡಿ ನಟ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು

  ಹಿರಿಯ ನಟ ಕುಮಾರ್ ಗೋವಿಂದು

  ಹಿರಿಯ ನಟ ಕುಮಾರ್ ಗೋವಿಂದು

  ಸ್ಯಾಂಡಲ್ ವುಟ್ ನ ಹಿರಿಯ ನಟ ಕುಮಾರ್ ಗೋವಿಂದು ಅವರು ಅತ್ಯುತ್ತಮ ಹಿರಿಯ ನಟ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡರು.

  ನಿರ್ದೇಶಕ ಸಂತೋಷ್ ಆನಂದ್ ರಾಮ್

  ನಿರ್ದೇಶಕ ಸಂತೋಷ್ ಆನಂದ್ ರಾಮ್

  ಹಿಟ್ ಚಿತ್ರ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸ್ವೀಕರಿಸಿದರು.

  ತಬಲಾ ನಾಣಿ ರ‍್ಯಾಂಪ್ ವಾಕ್

  ತಬಲಾ ನಾಣಿ ರ‍್ಯಾಂಪ್ ವಾಕ್

  ಕನ್ನಡದ ಕಾಮಿಡಿ ನಟ ತಬಲಾ ನಾಣಿ ಅವರು ಬ್ಯೂಟಿಫುಲ್ ಬೆಡಗಿಯರೊಂದಿಗೆ ಒಂದು ಸುತ್ತು ರ‍್ಯಾಂಪ್ ವಾಕ್ ಮಾಡಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು.

  ಜಬರ್ದಸ್ತ್ ಡಾನ್ಸ್ ಝಲಕ್

  ಜಬರ್ದಸ್ತ್ ಡಾನ್ಸ್ ಝಲಕ್

  ಸ್ಯಾಂಡಲ್ ವುಡ್ ಸ್ಟಾರ್ಸ್ ನೈಟ್ ಮತ್ತು ಫ್ಲೇಮಿಂಗೋ ಸೆಲೆಬ್ರೆಟಿಸ್ ವರ್ಲ್ಡ್ ಕಾರ್ಯಕ್ರಮದ ಕಲರ್ ಫುಲ್ ವೇದಿಕೆಯಲ್ಲಿ ಜಬರ್ದಸ್ತ್ ಡಾನ್ಸ್ ಮಾಡುವ ಮೂಲಕ ನೆರೆದಿದ್ದ ಸ್ಯಾಂಡಲ್ ವುಡ್ ತಾರೆಯರನ್ನು ಹಾಗೂ ಗಣ್ಯರನ್ನು ಕಲಾವಿದರು ರಂಜಿಸಿದರು.

  ಕಲರ್ ಫುಲ್ ರ‍್ಯಾಂಪ್ ವಾಕ್

  ಕಲರ್ ಫುಲ್ ರ‍್ಯಾಂಪ್ ವಾಕ್

  ಫ್ಯಾಷನ್ ಬೆಡಗಿಯರು ತಮ್ಮ ಬೆಡಗು ಬಿನ್ನಾಣದ ಮೂಲಕ ವೇದಿಕೆಯಲ್ಲಿ ಕಲರ್ ಫುಲ್ ರ‍್ಯಾಂಪ್ ವಾಕ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು

  ಟ್ಯಾಲೆಂಟೆಡ್ ನಟ ಜೆ.ಕೆ

  ಟ್ಯಾಲೆಂಟೆಡ್ ನಟ ಜೆ.ಕೆ

  ಕಾರ್ಯಕ್ರಮದಲ್ಲಿ ಜೆ.ಕೆ ಅಲಿಯಾಸ್ ಕಾರ್ತಿಕ್ ಜಯರಾಮ್ ಅವರಿಂದ ಸಖತ್ ಪರ್ಫಾಮೆನ್ಸ್

  ಕಾವ್ಯ- ನಿರಂಜನ್ ದೇಶ್ ಪಾಂಡೆ

  ಕಾವ್ಯ- ನಿರಂಜನ್ ದೇಶ್ ಪಾಂಡೆ

  ಸ್ಯಾಂಡಲ್ ವುಡ್ ಸ್ಟಾರ್ಸ್ ನೈಟ್ ಸುಂದರ ಸಂಜೆಯ ಕಾರ್ಯಕ್ರಮದ ನಿರೂಪಣೆಯನ್ನು ನಟಿ-ನಿರೂಪಕಿ ಕಾವ್ಯ ಹಾಗೂ ನಟ-ನಿರೂಪಕ ನಿರಂಜನ್ ದೇಶ್ ಪಾಂಡೆ ಅವರು ನಡೆಸಿಕೊಟ್ಟರು.

  English summary
  Sandalwood stars night and flamingo celebrities world Pvt Ltd, Award function At October 14th Chaowdaiah Memorial hall Bangalore. Actress Meghana raj, Jayram Karthik, Thara, Rekha Das, Tabala Nani, Sundar Raj, Sanket Kashi, Kavya, Niranjan Deshpande at the event.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X