»   » ಈ 'ಚಿನ್ನ'ದಂಥ ಬಂಗಲೆ ಯಾರದ್ದು ಅಂತ ಗೊತ್ತಾದ್ರೆ ಸರ್ಪ್ರೈಸ್ ಆಗ್ತೀರಾ.!

ಈ 'ಚಿನ್ನ'ದಂಥ ಬಂಗಲೆ ಯಾರದ್ದು ಅಂತ ಗೊತ್ತಾದ್ರೆ ಸರ್ಪ್ರೈಸ್ ಆಗ್ತೀರಾ.!

Posted By:
Subscribe to Filmibeat Kannada

ದೂರದ ಊರಿನಿಂದ ಬೆಂಗಳೂರಿಗೆ ಬಂದು ಕೆಲಸ ಮಾಡುತ್ತಿರುವವರಿಗೆ, ಇಲ್ಲೇ ಮನೆ ಕಟ್ಟಿಸಿ ಸೆಟ್ಲ್ ಆಗ್ಬೇಕು ಎಂಬ ಆಸೆ ಇರುವುದು ಸಹಜ. ಆದ್ರೆ, ಎಷ್ಟು ಮಂದಿ ಆ ಆಸೆಯನ್ನ ಈಡೇರಿಸಿಕೊಳ್ಳುತ್ತಾರೆ.?

ಬೆಂಗಳೂರಿನಲ್ಲಿ ಈಗ ಚಿಕ್ಕ ಸೈಟ್ ಪಡೆಯಬೇಕು ಅಂದರೂ ಮಿನಿಮಂ ಅರ್ಧ ಕೋಟಿ ಬೇಕು. ಅದರಲ್ಲೂ ಪ್ರಮುಖ ಏರಿಯಾದಲ್ಲಿ ನಿವೇಶನ ಬೇಕು ಅಂದ್ರೆ ನೀವು ಕೋಟ್ಯಾಧಿಪತಿ ಆಗಿರಬೇಕು.!

ಸೈಟ್ ತೆಗೆದುಕೊಳ್ಳುವುದಕ್ಕೇ ಕೋಟಿ-ಕೋಟಿ ಕೊಡ್ತೀರಾ ಅಂದ್ಮೇಲೆ, ಮನೆ ಕಟ್ಟಲು ಇನ್ನೆಷ್ಟು ಕೋಟಿ ಖರ್ಚು ಮಾಡಲು ನೀವು ತಯಾರಿದ್ದೀರಾ.? [ಚಿನ್ನದ ಹುಡುಗ ಗಣೇಶ್ ಅದೃಷ್ಟವಂತ.! ಯಾಕೆ ಗೊತ್ತಾ?]

'ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು' ಅಂತ ದೊಡ್ಡವರು ಹೇಳ್ತಾರೆ. ಮಧ್ಯಮ ವರ್ಗದವರಿಗೆ ಈಗ ಎರಡೂ ಕಷ್ಟದ ಮಾತೇ ಬಿಡಿ...

ಅಂದ್ಹಾಗೆ, 'ಮನೆ' ಬಗ್ಗೆ ನಾವು ಇಷ್ಟೆಲ್ಲಾ, ಅದರಲ್ಲೂ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಹೇಳ್ತಿರೋದಕ್ಕೆ ಕಾರಣ 'ಚಿನ್ನದ ಮನೆ'..! ಹಾಗಂದ ಕೂಡಲೆ, ಚಿನ್ನದಿಂದ ನಿರ್ಮಾಣವಾಗಿರುವ ಮನೆ ಬಗ್ಗೆ ನಾವು ಹೇಳ್ತಿದ್ದೀವಿ ಅಂದುಕೊಳ್ಳಬೇಡಿ.

ನಮ್ಮ ಸ್ಯಾಂಡಲ್ ವುಡ್ ನ 'ಚಿನ್ನದ ಹುಡುಗ' ಅರ್ಥಾತ್ ಗೋಲ್ಡನ್ ಸ್ಟಾರ್ ಗಣೇಶ್ 'ಹೊಸ ಮನೆ' ಹೇಗಿದೆ ಅಂತ ಫೋಟೋ ಸಮೇತ ಇವತ್ತು ನಿಮಗೆ ತೋರಿಸ್ತಿದ್ದೀವಿ. ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ ಮಾಹಿತಿ ಸಮೇತ ಓದಿರಿ....

'ಗೋಲ್ಡನ್ ಸ್ಟಾರ್' ಗಣೇಶ್ ಮನೆ ಇದೇ.!

ಇದೇ ನೋಡಿ 'ಮಳೆ ಹುಡುಗ' ಗಣೇಶ್ ರವರ ನಿವಾಸ.

ಗಣೇಶ್ ಮನೆ ಯಾವ ಏರಿಯಾದಲ್ಲಿದೆ.?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಸ್ಯಾಂಡಲ್ ವುಡ್ ನ ಅನೇಕ ಸ್ಟಾರ್ ನಟರು ವಾಸವಾಗಿರುವ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲೇ ಗಣೇಶ್ ಬಂಗಲೆ ಇರುವುದು.

'ಗಣಪ'ದಲ್ಲಿ ಗಣೇಶ್.!

ಗಣೇಶ್ ನಿವಾಸಕ್ಕೆ 'ಗಣಪ' ಅಂತ ಹೆಸರಿಡಲಾಗಿದೆ.

ಒಳಾಂಗಣ ವಿನ್ಯಾಸ ಹೇಗಿದೆ ನೋಡಿ...

ಇಟಾಲಿಯನ್ ಡಿಸೈನ್ ನಲ್ಲಿ ಗಣೇಶ್ ನಿವಾಸ 'ಗಣಪ' ನಿರ್ಮಾಣವಾಗಿದೆ. ಒಳಾಂಗಣ ವಿನ್ಯಾಸವನ್ನ ಪತ್ನಿ ಶಿಲ್ಪಾ ಗಣೇಶ್ ಮಾಡಿರುವುದು ವಿಶೇಷ.

20 ಕೋಟಿಗೂ ಅಧಿಕ ವೆಚ್ಚ

ಬರೋಬ್ಬರಿ 20 ಕೋಟಿಗೂ ಅಧಿಕ ವೆಚ್ಚದಲ್ಲಿ ಈ ಬಂಗಲೆ ನಿರ್ಮಾಣವಾಗಿದೆ.

ಮಡದಿಯ ಪ್ರೀತಿಯ ಕಾಣಿಕೆ

ಅಂದ್ಹಾಗೆ, 'ಗಣಪ' ನಿವಾಸವನ್ನ ಗಣೇಶ್ ಗೆ ಉಡುಗೊರೆ ರೂಪದಲ್ಲಿ ಸರ್ ಪ್ರೈಸ್ ನೀಡಿದವರು ಪತ್ನಿ ಶಿಲ್ಪಾ ಗಣೇಶ್.

ಬರ್ತಡೆಗೆ ಗಿಫ್ಟ್

ಪ್ರತಿ ಹುಟ್ಟುಹಬ್ಬಕ್ಕೂ ಒಂದಲ್ಲಾ ಒಂದು ಉಡುಗೊರೆ ನೀಡ್ತಾನೆ ಬಂದಿದ್ದ ಶಿಲ್ಪಾ ಗಣೇಶ್, ಕಳೆದ ಬಾರಿ ಪತಿ ಗಣೇಶ್ ಗೆ ಈ 'ಅರಮನೆ'ಯನ್ನ ಗಿಫ್ಟ್ ಮಾಡಿದ್ರು.

ಎರಡು ವರ್ಷ ಬೇಕಾಯ್ತು.!

ಸತತ ಎರಡು ವರ್ಷಗಳ ಕಾಲ ಖುದ್ದಾಗಿ ನಿಂತು ಶಿಲ್ಪಾ ಗಣೇಶ್ ಈ ಬಂಗಲೆಯನ್ನ ಕಟ್ಟಿಸಿದ್ದಾರೆ.

ಮನೆಯಲ್ಲೇ ಲಿಫ್ಟ್, ಥಿಯೇಟರ್, ಸ್ವಿಮ್ಮಿಂಗ್ ಪೂಲ್!

ಮನೆಯ ಒಳಾಂಗಣದಲ್ಲೇ ಲಿಫ್ಟ್, ಹೋಮ್ ಥಿಯೇಟರ್, ಟಾಪ್ ಫ್ಲೋರ್ ನಲ್ಲಿ ಸ್ವಿಮ್ಮಿಂಗ್ ಪೂಲ್, ಜಿಮ್ ಸೇರಿದಂತೆ ಅತ್ಯಾಧುನಿಕ ಎಲ್ಲಾ ಸೌಲಭ್ಯಗಳಿವೆ.

ದೊಡ್ಡ ಡೈನಿಂಗ್ ಹಾಲ್

ಅಡುಗೆ ಮನೆ ಪಕ್ಕದಲ್ಲೇ ವಿಶಾಲವಾದ ಡೈನಿಂಗ್ ಹಾಲ್ ಇದೆ.

ವಿಶಾಲವಾಗಿರುವ ಲಿವಿಂಗ್ ಏರಿಯಾ

'ಗಣಪ' ಮನೆ ಒಳಗೆ ಹೊಕ್ಕ ಕೂಡಲೆ ಗಣೇಶ್ ಫೋಟೋ ಕಲೆಕ್ಷನ್ ಇರುವ ವಿಶಾಲವಾಗಿರುವ ಹಾಲ್ ಇದೆ.

ಗಣೇಶ್ ಗೆ ಇದೇ ಸ್ವರ್ಗ

ಗಣೇಶ್ ಪಾಲಿಗೆ ಈ 'ಅರಮನೆ'ಯೇ ಸ್ವರ್ಗ.!

ಗಣೇಶ್ ಕನಸಿಗೆ ತಕ್ಕಂತೆ ನಿರ್ಮಾಣವಾಗಿರುವ 'ಗಣಪ' ಬಂಗಲೆ

ಪತಿಯ ಇಚ್ಛೆ, ಆಸೆಗೆ ತಕ್ಕಂತೆ ಪತ್ನಿ ಶಿಲ್ಪಾ ಗಣೇಶ್ 'ಗಣಪ' ಬಂಗಲೆ ನಿರ್ಮಿಸಿದ್ದಾರೆ.

ಕಳೆದ ವರ್ಷ 'ಗಣಪ' ಗೃಹ ಪ್ರವೇಶ ನೆರವೇರಿತ್ತು

ಕಳೆದ ವರ್ಷ ಗಣೇಶ್ ಹುಟ್ಟುಹಬ್ಬದ ಬಳಿಕ 'ಗಣಪ' ಗೃಹ ಪ್ರವೇಶ ಕಾರ್ಯಕ್ರಮ ನಡೆದಿತ್ತು. ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ಮಾತ್ರ ಆಹ್ವಾನವಿತ್ತು.

ಗೋಲ್ಡನ್ ಸ್ಟಾರ್ ಗಣೇಶ್ ಅದೃಷ್ಟವಂತ ಅಲ್ಲವೇ?

ಗಾಂಧಿನಗರದಲ್ಲಿ ಗಾಡ್ ಫಾದರ್ ಇಲ್ಲದೆ, ಸ್ವಂತ ಪ್ರತಿಭೆಯಿಂದ ಯಶಸ್ಸಿನ ಏಣಿ ಏರುತ್ತಿರುವ ಗಣೇಶ್ ನಿಜಕ್ಕೂ ಅದೃಷ್ಟವಂತ ಅಲ್ಲವೇ.?

English summary
Have you seen Golden Star Ganesh's house in Rajarajeshwarinagar, Bengaluru.? Know more about Ganesh's residence 'Ganapa' here through pictures.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada