»   » ಚಿತ್ರಗಳು: 'ಕುರುಕ್ಷೇತ್ರ'ದಲ್ಲಿ 'ಗಜ' ದರ್ಶನ್ ದರ್ಬಾರ್

ಚಿತ್ರಗಳು: 'ಕುರುಕ್ಷೇತ್ರ'ದಲ್ಲಿ 'ಗಜ' ದರ್ಶನ್ ದರ್ಬಾರ್

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಜೆಟ್ ನಲ್ಲಿ ತಯಾರಾಗುತ್ತಿರುವ ಸಿನಿಮಾ 'ಕುರುಕ್ಷೇತ್ರ'. ಇದು ದರ್ಶನ್ ರವರ 50 ನೇ ಸಿನಿಮಾ ಬೇರೆ. ಹೀಗಾಗಿ, 'ಕುರುಕ್ಷೇತ್ರ' ಸಿನಿಮಾ ಸೆಟ್ಟೇರಿದಾಗಿನಿಂದಲೂ ಸಿಕ್ಕಾಪಟ್ಟೆ ಸದ್ದು-ಸುದ್ದಿ ಮಾಡುತ್ತಲಿದೆ.

'ಕುರುಕ್ಷೇತ್ರ' ಚಿತ್ರದ ಚಿತ್ರೀಕರಣಕ್ಕಾಗಿ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ 18-20 ಸೆಟ್ ಗಳನ್ನು ಅದ್ಧೂರಿಯಾಗಿ ನಿರ್ಮಿಸಲಾಗಿದೆ. ಚಿತ್ರೀಕರಣದ ಕೊನೆಯ ಹಂತದಲ್ಲಿ ಇರುವ 'ಕುರುಕ್ಷೇತ್ರ' ಅಡ್ಡಕ್ಕೆ ಮೊನ್ನೆಯಷ್ಟೇ ಕನ್ನಡ ಮಾಧ್ಯಮ ಹಾಗೂ ಪತ್ರಕರ್ತರೆಲ್ಲ ಭೇಟಿ ಕೊಟ್ಟಿದ್ದರು.


ಆಗ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ದುರ್ಯೋಧನನಾಗಿ ಎಂಟ್ರಿ ಕೊಡುವ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. 'ಸುಯೋಧನ'ನಾಗಿ ದರ್ಶನ್ ಹೇಗೆ ಕಾಣ್ತಾರೆ ಗೊತ್ತಾ.? ಈ ಫೋಟೋಗಳತ್ತ ಒಮ್ಮೆ ಕಣ್ಣಾಡಿಸಿ...


'ಉರಗ ಪತಾಕ' ದುರ್ಯೋಧನ

ಧೃತರಾಷ್ಟ್ರನ ಹಿರಿಯ ಪುತ್ರ.. ಕರ್ಣನ ಆಪ್ತಮಿತ್ರ.. ಉರಗ ಪತಾಕ.. 'ದುರ್ಯೋಧನ'ನಾಗಿ 'ಕುರುಕ್ಷೇತ್ರ' ಚಿತ್ರದಲ್ಲಿ ದರ್ಶನ್ ಎಂಟ್ರಿ ಕೊಡುವುದು ಹೀಗೆ....


ಕುರುಕ್ಷೇತ್ರ ಸೆಟ್ ಗೆ ಹೋಗಿದ್ದ ಪತ್ರಕರ್ತರಿಗೆ ಸಿಕ್ಕ ಸರ್ಪ್ರೈಸ್ ಸಂಗತಿಗಳುಗಜ ಗಾಂಭೀರ್ಯ

'ಕುರುಕ್ಷೇತ್ರ' ಚಿತ್ರದಲ್ಲಿ 'ದುರ್ಯೋಧನ'ನ ಪರಿಚಯ ಆಗುವುದು ಹೀಗೆ...ಗಜ ಗಾಂಭೀರ್ಯ, ರಾಜ ಗಾಂಭೀರ್ಯದಿಂದ 'ದುರ್ಯೋಧನ'ನ ಆಗಮನ ಆಗುವುದು ಇದೇ ರೀತಿ...


'ಕೃಷ್ಣ'ನಾಗಿ ಕ್ರೇಜಿ ಸ್ಟಾರ್ ರವಿಚಂದ್ರನ್ ಹೇಗೆ ಕಾಣ್ತಾರೆ ಅಂತ ನೀವೇ ನೋಡಿ...ನೂರಾರು ಡ್ಯಾನ್ಸರ್ಸ್ ಭಾಗಿ

'ಕುರುಕ್ಷೇತ್ರ' ಚಿತ್ರದ ಬಹುತೇಕ ಚಿತ್ರೀಕರಣ ಈಗಾಗಲೇ ಕಂಪ್ಲೀಟ್ ಆಗಿದೆ. ಇಂಟ್ರೋಡಕ್ಷನ್ ಸಾಂಗ್ ಚಿತ್ರೀಕರಣ ಮಾತ್ರ ಸದ್ಯ ಹೈದರಾಬಾದ್ ನಲ್ಲಿ ನಡೆಯುತ್ತಿದೆ. ಹಾಡಿಗಾಗಿ ನೂರಾರು ಡ್ಯಾನ್ಸರ್ ಗಳು ಭಾಗಿಯಾಗಿದ್ದಾರೆ.


ಸೌತ್ ಇಂಡಿಯಾದ ಚಿತ್ರಗಳಲ್ಲಿ 'ದರ್ಶನ್ ಕುರುಕ್ಷೇತ್ರ' ನಂ-2, ಏಕೆ?'ಕುರುಕ್ಷೇತ್ರ' ಬಿಡುಗಡೆ ಯಾವಾಗ.?

ಜನವರಿ 5 ರಂದು ಚಿತ್ರಕ್ಕೆ ಕುಂಬಳಕಾಯಿ ಹೊಡೆಯಲಿದ್ದು, ಮಾರ್ಚ್ ಮೊದಲ ವಾರ 'ಕುರುಕ್ಷೇತ್ರ' ಬಿಡುಗಡೆ ಆಗುವ ಸಾಧ್ಯತೆ ಇದೆ.


English summary
Check out the pictures of Challenging Star Darshan's (Duryodhana) introduction song in Kannada Movie 'Kurukshetra'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X