For Quick Alerts
  ALLOW NOTIFICATIONS  
  For Daily Alerts

  'ಆಟೋ ರಾಜ' ಶಂಕರ್ ನೆನಪಲ್ಲಿ ಹುಟ್ಟುಹಬ್ಬದ ಸಂಭ್ರಮ

  By Harshitha
  |

  ನವೆಂಬರ್ 9...ಈ ದಿನ ಪ್ರತಿಭಾವಂತ ಮೇರುನಟ ಶಂಕರ್ ನಾಗ್ ರನ್ನ ನೆನೆಯದ ಕನ್ನಡಿಗರೇ ಇಲ್ಲ..! ಆಟೋ ಚಾಲಕರಿಗಂತೂ ಈ ದಿನ ಸುದಿನ.

  1954 ನವೆಂಬರ್ 9, ಶಂಕರ್ ನಾಗ್ ಅನ್ನೋ ಅತ್ಯದ್ಭುತ ಕಲಾವಿದ ಕಣ್ಬಿಟ್ಟ ದಿನ. ಉತ್ತರಕನ್ನಡದ ಹೊನ್ನಾವರ ತಾಲೂಕಿನ ಮಲ್ಲಾಪುರ ಅನ್ನೋ ಪುಟ್ಟ ಗ್ರಾಮದ ಕೊಡುಗೆ ಈ ನಾಗರಕಟ್ಟೆ ಶಂಕರ. [ರಾತ್ರೋರಾತ್ರಿ ಶಂಕರ್ ನೆನೆದು ಗದ್ಗದಿತರಾಗಿದ್ದ ಅನಂತ್ ನಾಗ್.!]

  'ಆಟೋ ರಾಜ', 'ಸಿಬಿಐ ಶಂಕರ್', 'ಎಸ್.ಪಿ.ಸಾಂಗ್ಲಿಯಾನ', 'ಸೀತಾರಾಮು' ಸೇರಿದಂತೆ ಅನೇಕ ಸೂಪರ್ ಡ್ಯೂಪರ್ ಹಿಟ್ ಗಳನ್ನು ಕೊಟ್ಟ 'ಕರಾಟೆ ಕಿಂಗ್' ಶಂಕರ್ ನಾಗ್ ರವರ 63ನೇ ಹುಟ್ಟುಹಬ್ಬವನ್ನು ಇಂದು ಶಂಕರಣ್ಣನ ಆಟೋ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿದರು.

  in-pics-fans-celebrated-shankar-nag-s-63rd-birthday

  ಶಂಕರ್ ನಾಗ್ ಹುಟ್ಟುಹಬ್ಬದ ಪ್ರಯುಕ್ತ ಇಂದು ಬೆಂಗಳೂರಿನ 'ಶಂಕರ್ ನಾಗ್ ವೃತ್ತ'ದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಶಂಕರ್ ನಾಗ್ ರವರ ಪುತ್ಥಳಿಗೆ ಹೂವಿನ ಹಾರ ಹಾಕಿ, ಸಿಹಿ ಹಂಚುವ ಮೂಲಕ ಇಂದು 'ಕರಾಟೆ ಕಿಂಗ್' ಜನ್ಮದಿನವನ್ನು ಅಭಿಮಾನಿಗಳು ಆಚರಿಸಿದರು.

  ರಂಗಭೂಮಿ, ಸಿನಿಮಾ ಸೇರಿದಂತೆ ಏಕಕಾಲದಲ್ಲಿ ಹತ್ತು ಹಲವು ಕ್ಷೇತ್ರಗಳಲ್ಲಿ, ಪ್ರಯೋಗಶೀಲ ಕೆಲಸಗಳಲ್ಲಿ ತೊಡಗಿಕೊಂಡಿದ್ದ ಶಂಕರ್ ನಾಗ್, ಬಹುಬೇಗನೇ ತಮ್ಮ ಮಿಂಚಿನ ಓಟ ಮುಗಿಸಿ ಮರೆಯಾಗಿಬಿಟ್ಟರು.

  ಶಂಕರ್ ನಾಗ್, ನಮ್ಮನ್ನೆಲ್ಲಾ ಅಗಲಿ 26 ವರ್ಷಗಳು ಕಳೆದರೂ, ಕೋಟ್ಯಾಂತರ ಕನ್ನಡಿಗರ ಹೃದಯದಲ್ಲಿ ಅವರು ಈಗಲೂ ಜೀವಂತ. ಅದಕ್ಕೆ ಇಂದು ನಡೆದ ಜನ್ಮದಿನದ ಆಚರಣೆಯೇ ಸಾಕ್ಷಿ.

  English summary
  Remembering Shankar Nag on his 63rd birthday. Sandalwood's veteran actor 'Karate King' Late Shankar Nag fan's celebrated 63rd birthday today (November 9th). Check out the pics

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X