»   » ಚಿತ್ರಗಳು: ಸ್ಯಾಂಡಲ್ ವುಡ್ ನಟಿಯರ ಮಹಿಳಾ ದಿನಾಚರಣೆ ಸಂಭ್ರಮ

ಚಿತ್ರಗಳು: ಸ್ಯಾಂಡಲ್ ವುಡ್ ನಟಿಯರ ಮಹಿಳಾ ದಿನಾಚರಣೆ ಸಂಭ್ರಮ

Posted By:
Subscribe to Filmibeat Kannada

ಮಾರ್ಚ್ 8ನೇ ತಾರೀಖಿನಂದು ಇಡೀ ವಿಶ್ವದಾದ್ಯಂತ 'ವಿಶ್ವ ಮಹಿಳಾ ದಿನಾಚರಣೆ'ಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಎಲ್ಲಾ ಮಹಿಳಾ ಮಣಿಗಳು ತಮ್ಮ ದಿನವನ್ನು ಭಯಂಕರ ಖುಷಿಯಿಂದ ಸೆಲೆಬ್ರೇಟ್ ಮಾಡುತ್ತಾರೆ.

ಇದಕ್ಕೆ ನಮ್ಮ ಸ್ಯಾಂಡಲ್ ವುಡ್ ನ ತಾರೆಯರು ಹೊರತಾಗಿಲ್ಲ. ಇನ್ನು ನಮ್ಮ ಚಂದನವನದ ನಟಿಯರು ಸ್ವಲ್ಪ ಫಾಸ್ಟ್ ಬಿಡಿ. ಯಾಕಂತೀರಾ? ಯಾಕೆಂದರೆ, ಅರ್ಧಕ್ಕರ್ಧ ಮಂದಿ ನಟಿಮಣಿಗಳು ಎರಡು ದಿನಕ್ಕಿಂತ ಮುಂಚಿತವಾಗಿಯೇ 'ಮಹಿಳಾ ದಿನಾಚರಣೆ'ಯನ್ನು ಸೆಲೆಬ್ರೇಟ್ ಮಾಡಿದ್ದಾರೆ.[ಮಹಿಳಾ ದಿನಾಚರಣೆ ದಿನ ಮೋದಿ ಜತೆ ಚಹಾ ಚರ್ಚೆ]

ಅದೂ ಎಲ್ಲಿ ಗೊತ್ತಾ? ಸ್ಯಾಂಡಲ್ ವುಡ್ ನ ಒಬ್ಬ ಸ್ಟಾರ್ ನಟನ ಮನೆಯಲ್ಲಿ. ಶೂಟಿಂಗ್, ಔಟಿಂಗ್, ಶಾಪಿಂಗ್ ಅಂತ ಎಲ್ಲಾ ಕೆಲಸಗಳಿಂದ ಬಿಡುವು ಮಾಡಿಕೊಂಡು ಸ್ಟಾರ್ ನಟಿಯರು ರಾತ್ರಿ 'ಮಹಿಳಾ ದಿನಾಚರಣೆ' ಅಚರಿಸಿಕೊಂಡಿದ್ದಾರೆ.[ಮಹಿಳಾ ದಿನಾಚರಣೆ ಬಗ್ಗೆ ಮಹಿಳೆಯರಿಗೆಷ್ಟು ಗೊತ್ತು?]

ಅಂದಹಾಗೆ ಯಾರೆಲ್ಲಾ ನಟಿಯರು ಆಚರಿಸಿಕೊಂಡರು?, ಎಲ್ಲಿ ಆಚರಿಸಿಕೊಂಡರು?, ಯಾವ ಸ್ಟಾರ್ ನಟನ ಮನೆಯಲ್ಲಿ ಆಚರಿಸಿಕೊಂಡರು?, ಅಂತ ನೋಡಬೇಕೆ? ಹಾಗಿದ್ದರೆ, ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

ಗೋಲ್ಡನ್ ಸ್ಟಾರ್ ಗಣೇಶ್ ಮನೆಯಲ್ಲಿ ಸಂಭ್ರಮ

ಅಂದಹಾಗೆ ಚಂದನವನದ ಹಲವಾರು ಸ್ಟಾರ್ ನಟಿಯರು ಮಹಿಳಾ ದಿನಾಚರಣೆಯನ್ನು ಎರಡು ದಿನಕ್ಕೆ ಮುಂಚಿತವಾಗಿ ಆಚರಿಸಿಕೊಂಡಿದ್ದು, ಮಳೆ ಹುಡುಗ ಗೋಲ್ಡನ್ ಸ್ಟಾರ್ ಗಣೇಶ್ ಅವರ ಮನೆಯಲ್ಲಿ.[ವರುಣನ ಆರ್ಭಟಕ್ಕೆ, ಹೆದರಿದ ಗೋಲ್ಡನ್ ಸ್ಟಾರ್ ಏನ್ ಮಾಡಿದ್ರು, ಗೊತ್ತಾ?]

ಶಿಲ್ಪಾ ಗಣೇಶ್ ನೇತೃತ್ವದಲ್ಲಿ

ನಟ ಗಣೇಶ್ ಅವರ ಪತ್ನಿ ನಿರ್ಮಾಪಕಿ ಶಿಲ್ಪಾ ಗಣೇಶ್ ಅವರು ಮುಂದಾಳತ್ವ ವಹಿಸಿ ಕನ್ನಡ ಚಿತ್ರರಂಗದ ಸ್ಟಾರ್ ನಟಿಯರನ್ನು 'ಮಹಿಳಾ ದಿನಾಚರಣೆ' ಆಚರಿಸಲು ತಮ್ಮ ಮನೆಗೆ ಆಹ್ವಾನಿಸಿದ್ದರು.[ಗೋಲ್ಡನ್ ಸ್ಟಾರ್ ಗಣೇಶ್ ಮನೆ ಹೊಸ ಅತಿಥಿ ರಣ್ಬೀರ್!]

ಯಾರೆಲ್ಲಾ ಇದ್ರು

ನಟಿ ಪ್ರಿಯಾಂಕ ಉಪೇಂದ್ರ, ನಟಿ ಅಮೂಲ್ಯಾ, ನಟಿ ನಭಾ ನಟೇಶ್, ನಟಿ ಐಂದ್ರಿತಾ ರೇ, ನಟಿ ರೇಖಾ ಜಗದೀಶ್, ನಟಿ ಮಾಳವಿಕಾ ಅವಿನಾಶ್, ಶ್ರದ್ಧಾ ನಾಯಕ್, ಪ್ರಜ್ವಲ್ ದೇವರಾಜ್ ಅವರ ಪತ್ನಿ ನಟಿ ರಾಗಿಣಿ ಚಂದ್ರನ್, ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ರಾಘವೇಂದ್ರ ಮುಂತಾದವರು ಶಿಲ್ಪಾ ಗಣೇಶ್ ಅವರ ಮನೆಯಲ್ಲಿ ಸಂಭ್ರಮದಿಂದ 'ಮಹಿಳಾ ದಿನಾಚರಣೆ' ಆಚರಿಸಿಕೊಂಡರು.

ಗಣೇಶ್ ಅವರ ಪ್ಲ್ಯಾನ್

ಅಂದಹಾಗೆ ಮನೆಯಲ್ಲಿಯೇ 'ಮಹಿಳಾ ದಿನಾಚರಣೆ'ಯನ್ನು ಆಚರಿಸಲು ಪ್ಲ್ಯಾನ್ ಮಾಡಿದ್ದು ಗೋಲ್ಡನ್ ಸ್ಟಾರ್ ಗಣೇಶ್ ಅವರು. ಚಿತ್ರದಲ್ಲಿ ಸಾಧಕಿಯರು ಮತ್ತು ಸುಂದರಿಯರ ಫೊಟೋ ಕ್ಲಿಕ್ಕಿಸಿದ ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಂಭ್ರಮ ನೋಡಿ.

ಆಂಡಿ-ಪ್ರಿಯಾಂಕ ಮಸ್ತಿ

ಗ್ಲಾಮರ್ ಬೆಡಗಿ ಐಂದ್ರಿತಾ ರೇ ಮತ್ತು ನಟಿ ಕಮ್ ನಿರ್ಮಾಪಕಿ ಪ್ರಿಯಾಂಕ ಉಪೇಂದ್ರ ಅವರು ಪಾರ್ಟಿಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಖತ್ ಮಸ್ತಿ ಮಾಡಿದರು.

ಶಿಲ್ಪಾ ಗಣೇಶ್ ಜೊತೆ ನಟಿಯರು

ತಮ್ಮ ಮನೆಯಲ್ಲಿಯೇ ಪಾರ್ಟಿ ಆರೇಂಜ್ ಮಾಡಿದ ಶಿಲ್ಪಾ ಗಣೇಶ್ ಅವರು ಪ್ರಿಯಾಂಕ ಉಪೇಂದ್ರ ಮತ್ತು ಐಂದ್ರಿತಾ ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮ ಪಟ್ಟ ಪರಿ ನೋಡಿ.

ವಾವ್..!

ಮಾಳವಿಕಾ ಅವಿನಾಶ್, ಪ್ರಿಯಾಂಕ ಉಪೇಂದ್ರ, ನಭಾ ನಟೇಶ್ ಮೋಜು ಮಸ್ತಿ.

ಭರ್ಜರಿ ಪಾರ್ಟಿ

ಸ್ಟಾರ್ ನಟಿಯರಿಗೆ ನಿರ್ಮಾಪಕಿ ಶಿಲ್ಪಾ ಗಣೇಶ್ ಮತ್ತು ಗೋಲ್ಡನ್ ಸ್ಟಾರ್ ಗಣಿ ಅವರು ಭರ್ಜರಿ ಪಾರ್ಟಿ ಆರೇಂಜ್ ಮಾಡಿದ್ದರು.

ಬೇಬಿ ಡಾಲ್ ಅಮೂಲ್ಯಾ

ಗಣೇಶ್ ಅವರ ಜೊತೆ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸಿರುವ ಬೇಬಿ ಡಾಲ್ ಅಮೂಲ್ಯಾ ಅಲಿಯಾಸ್ ಅಮ್ಮು ಅವರು ಗಣೇಶ್ ಅವರ ಫ್ಯಾಮಿಲಿಗೆ ತುಂಬಾ ಕ್ಲೋಸ್ ಫ್ರೆಂಡ್.[ವಿಮರ್ಶೆ: ಉಡಾಫೆ ಕೃಷ್ಣ, ಬಜಾರಿ ರುಕ್ಕು ಕಥೆ ಚೆನ್ನಾಗಿದೆ]

English summary
In Pics: Kannada Actress Priyanka Upendra, Actress Amoolya, Actress Nabha Natesh, Actress Aindrita Ray Celebrate 'International women's day' in Actor ganesh's house.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada