»   » ಹ್ಯಾಟ್ರಿಕ್ ಹೀರೋ 'ಕಬೀರ' ಫಸ್ಟ್ ಲುಕ್ ಔಟ್

ಹ್ಯಾಟ್ರಿಕ್ ಹೀರೋ 'ಕಬೀರ' ಫಸ್ಟ್ ಲುಕ್ ಔಟ್

Posted By:
Subscribe to Filmibeat Kannada

ಇಷ್ಟು ದಿನ ಕೈಲಿ ಲಾಂಗು ಹಿಡಿದು, ಸ್ಯಾಂಡಲ್ ವುಡ್ ನಲ್ಲಿ ನೆತ್ತರು ಹರಿಸಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇದೀಗ ಸಂತ 'ಕಬೀರ'ನಾಗಿದ್ದಾರೆ. ಮಹಾತ್ಮ ಕಬೀರನ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಿ ದೋಹಾಗಳನ್ನ ಹೇಳಲಿದ್ದಾರೆ.

ಇದೇ ಯುಗಾದಿ ಹಬ್ಬದಂದು, ಅಂದ್ರೆ ಮಾರ್ಚ್ 21 ರಂದು ಶಿವರಾಜ್ ಕುಮಾರ್ ಅಭಿನಯದ 'ಕಬೀರ' ಚಿತ್ರದ ಮುಹೂರ್ತ ಅದ್ದೂರಿಯಾಗಿ ನೆರವೇರಲಿದೆ. 'ಕಬೀರ'ನ ಅವತಾರದಲ್ಲಿ ಅಣ್ಣಾವ್ರ ಮಗ ಹೇಗೆ ಕಾಣ್ತಾರೆ ಅಂತ ತಿಳಿದುಕೊಳ್ಳುವ ಕುತೂಹಲ ನಿಮಗೆ ಇದ್ಯಾ..? ಹಾಗಾದ್ರೆ, ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ......

ಹೀಗಿದ್ದಾರೆ ನೋಡಿ ಸ್ಯಾಂಡಲ್ ವುಡ್ 'ಕಬೀರ'...!

ಇಷ್ಟು ದಿನ ಕುತೂಹಲ ಕೆರಳಿಸಿದ್ದ 'ಕಬೀರ'ನ ಅವತಾರ ಇದೀಗ ರಿವೀಲ್ ಆಗಿದೆ. ಮಹಾತ್ಮ ಕಬೀರನಾಗಿರುವ ಶಿವಣ್ಣನನ್ನ ನೀವೇ ನಿಮ್ಮ ಕಣ್ಣಾರೆ ಕಣ್ತುಂಬಿಕೊಳ್ಳಿ. ['ಗೀತಾ' ಖ್ಯಾತಿಯ ಅಕ್ಷತಾ ರಾವ್ ಸೆಕೆಂಡ್ ಇನ್ನಿಂಗ್ಸ್]

ಸಂತ 'ಕಬೀರ'ನ ಯಶೋಗಾಥೆ

ಹೇಳಿ ಕೇಳಿ ಸಿನಿಮಾದ ಹೆಸರೇ 'ಕಬೀರ'. 15 ನೇ ಶತಮಾನದ ಸಂತ ಕಬೀರ್ ದಾಸ್ ಜೀವನಗಾಥೆ ಸಾರುವ ಚಿತ್ರ. ವಾರಣಾಸಿ ಸಮೀಪದ ಕಬೀರ್ ಚೌರಾದಲ್ಲಿ ಸಾಮಾನ್ಯ ನೇಕಾರನಾಗಿ ಭಕ್ತಿ ಮಾರ್ಗವನ್ನ ಅನುಸರಿಸಿದ ಕಬೀರ್ ದಾಸ್ ರ ಜೀವನ ಚರಿತ್ರೆಯೇ 'ಕಬೀರ' ಚಿತ್ರದ ಹೂರಣ. ಹೀಗಾಗಿ ಅಂದಿನ ಕಾಲಘಟ್ಟದ ವೇಷಭೂಷಣದಲ್ಲಿ ಶಿವಣ್ಣ ಮಿಂಚಿದ್ದಾರೆ.

ಸ್ಪೆಷಲ್ ವಿಗ್ ಮತ್ತು ಕಾಸ್ಟ್ಯೂಮ್

15ನೇ ಶತಮಾನದ ಕಥೆಯಾದ್ದರಿಂದ ಕಾಸ್ಟ್ಯೂಮ್ಸ್ ಬಗ್ಗೆ ಹೆಚ್ಚಿನ ಗಮನಹರಿಸಿರುವ ನಿರ್ದೇಶಕ ನರೇಂದ್ರ ಬಾಬು, ಕಾಸ್ಟ್ಯೂಮ್ ಡಿಸೈನಿಂಗ್ ನ ಮೈಸೂರು ಮೂಲದ ಚಿನ್ಮಯಿಗೆ ವಹಿಸಿದ್ದಾರೆ. [ಯುಗಾದಿ ಹಬ್ಬದಂದು ಶಿವಣ್ಣ ಸಂತ 'ಕಬೀರ' ಶುರು]

'ಕಬೀರ' ಚಿತ್ರದಲ್ಲಿ ಅಕ್ಷತಾ ರಾವ್ ಸೆಕೆಂಡ್ ಇನ್ನಿಂಗ್ಸ್

'ಗೀತಾ' ಚಿತ್ರ ಖ್ಯಾತಿಯ ನಟಿ ಅಕ್ಷತಾ ರಾವ್ 'ಕಬೀರ' ಸಿನಿಮಾದಲ್ಲಿ ಶಿವಣ್ಣನಿಗೆ ತಾಯಿಯಾಗಿ ನಟಿಸುತ್ತಿರುವುದು ವಿಶೇಷ. 'ಕಬೀರ'ನ ತಾಯಿ ನೀಮಾ ಪಾತ್ರಧಾರಿಯಾಗಿ ಅಕ್ಷತಾ ರಾವ್ ಕಾಣಿಸಿಕೊಳ್ಳುತ್ತಿದ್ದಾರೆ.

'ಕಬೀರ'ನಿಗೆ ಬಾಲಿವುಡ್ ಸಂಗೀತ ನಿರ್ದೇಶಕ

ಇಂಟ್ರೆಸ್ಟಿಂಗ್ ಅಂದ್ರೆ, ಬಾಲಿವುಡ್ ಖ್ಯಾತ ನಟ ಓಂ ಪುರಿ, ಕಾಲಿವುಡ್ ನಟ ಶರತ್ ಕುಮಾರ್ ಕೂಡ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. 'ದೇವ್ ದಾಸ್', 'ಹಮ್ ದಿಲ್ ದೇ ಚುಕೇ ಸನಂ' ಸೇರಿದಂತೆ ಬಾಲಿವುಡ್ ನಲ್ಲಿ ಸೂಪರ್ ಹಿಟ್ ಮ್ಯೂಸಿಕಲ್ ಬ್ಲಾಕ್ ಬಸ್ಟರ್ಸ್ ನೀಡಿರುವ ಸಂಗೀತ ನಿರ್ದೇಶಕ ಇಸ್ಮೈಲ್ ದರ್ಬಾರ್, 'ಕಬೀರ' ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.

'ಕಬೀರ'ನ ಮೇಲೆ ನಂಬಿಕೆ ಇದೆ

ಲಾಂಗು, ಮಚ್ಚು, ರೌಡಿಸಂ, ಲವ್ ಸ್ಟೋರಿಗಳು ಟ್ರೆಂಡಿಂಗ್ ನಲ್ಲಿರುವ ಈ ಕಾಲದಲ್ಲಿ ಕಬೀರ್ ದಾಸ್ ನ ಜೀವನಚರಿತ್ರೆ ಹಿಟ್ ಆಗುತ್ತಾ ಅನ್ನುವ ಮಾತು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. ಆದ್ರೆ, ಸಾಹಿತ್ಯ-ಸಂಸ್ಕೃತಿ ಬಗ್ಗೆ ಅಪಾರ ಅಭಿಮಾನ ಹೊಂದಿರುವ 'ಕಬ್ಬಡಿ' ನಿರ್ದೇಶಕ ನರೇಂದ್ರ ಬಾಬು, ''ಕಬೀರ್ ದಾಸ್ ನ ಮೇಲೆ ನಂಬಿಕೆ ಇಟ್ಟು ಸಿನಿಮಾ ಮಾಡುತ್ತಿದ್ದೇನೆ. ನಮ್ಮ ಸಾಹಿತ್ಯ-ಸಂಸ್ಕೃತಿ ಪರಂಪರೆ ಮುಂದುವರೆಯಬೇಕು. ಮಾರ್ಕೆಟ್ ನೋಡಿ ಸಿನಿಮಾ ಮಾಡುತ್ತಿಲ್ಲ'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ಪ್ರತಿಕ್ರಿಯೆ ನೀಡಿದ್ದಾರೆ.

English summary
Hat-Trick Hero Shivarajkumar starrer new movie 'Kabira' is all set to go on floors from March 21st. The Actor's look in 'Kabira' revealed. Check out in pics.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada