»   » 'ಲೂಸ್ ಮಾದ' ಯೋಗೀಶ್-ಸಾಹಿತ್ಯ ಎಂಗೇಜ್ಮೆಂಟ್ ಚಿತ್ರಗಳು

'ಲೂಸ್ ಮಾದ' ಯೋಗೀಶ್-ಸಾಹಿತ್ಯ ಎಂಗೇಜ್ಮೆಂಟ್ ಚಿತ್ರಗಳು

Posted By:
Subscribe to Filmibeat Kannada

'ದುನಿಯಾ' ಚಿತ್ರದಲ್ಲಿ 'ಲೂಸ್ ಮಾದ' ಆಗಿ ನಟಿಸಿದ ಯೋಗೀಶ್, ತಮ್ಮ 'ಸಿಂಗಲ್' ಸ್ಟೇಟಸ್ ಗೆ ಗುಡ್ ಬೈ ಹೇಳಿ.. ಗೃಹಸ್ಥಾಶ್ರಮಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ತಮ್ಮ ಜೀವದ ಗೆಳತಿ ಸಾಹಿತ್ಯ ಜೊತೆ ನಟ ಯೋಗೀಶ್ ನಿಶ್ಚಿತಾರ್ಥ ನಿನ್ನೆಯಷ್ಟೇ ಯಡಿಯೂರಿನಲ್ಲಿ ನಡೆಯಿತು. ಸಾಹಿತ್ಯ ಮನೆಯಲ್ಲಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮ ಸರಳವಾಗಿದ್ದು, ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ಮಾತ್ರ ಆಹ್ವಾನ ಇತ್ತು.

ಸರಳವಾಗಿ ನಡೆಯಿತು ಲೂಸ್ ಮಾದ ಯೋಗೀಶ್ - ಸಾಹಿತ್ಯ ನಿಶ್ಚಿತಾರ್ಥ

ನಟ ಯೋಗೀಶ್-ಸಾಹಿತ್ಯ ರವರ ನಿಶ್ಚಿತಾರ್ಥದ ಚಿತ್ರಗಳು ಇಲ್ಲಿವೆ, ನೋಡಿರಿ....

ಸಾಹಿತ್ಯ ಮನೆಯಲ್ಲಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮ

ಬೆಂಗಳೂರಿನ ಯಡಿಯೂರಿನಲ್ಲಿರುವ ಸಾಹಿತ್ಯ ರವರ ನಿವಾಸದಲ್ಲಿ ನಿನ್ನೆ (ಜೂನ್ 11) ನಿಶ್ಚಿತಾರ್ಥ ಸಮಾರಂಭ ಸಿಂಪಲ್ಲಾಗಿ ನಡೆಯಿತು.

ಇದೀಗ ಬಂದ ಸುದ್ದಿ: ಲೂಸ್ ಮಾದ ಯೋಗಿ ಮದುವೆ ದಿನಾಂಕ ಫಿಕ್ಸ್

ಉಂಗುರ ಬದಲಾಯಿಸಿಕೊಂಡ ಜೋಡಿ

ನಿನ್ನೆ ಮಧ್ಯಾಹ್ನ 12.30 ರ ಸುಮಾರಿಗೆ ನಗುಮೊಗದಿಂದಲೇ ಸಾಹಿತ್ಯ ಹಾಗೂ ಯೋಗೀಶ್ ಪರಸ್ಪರ ಉಂಗುರ ಬದಲಾಯಿಸಿಕೊಂಡರು.

ಅತ್ತೆ-ಸೊಸೆ

ಉಂಗುರ ಬದಲಾಯಿಸಿಕೊಳ್ಳುವ ಮೊದಲು ನಟ ಯೋಗೀಶ್ ತಾಯಿ ಅಂಬುಜಾ, ಭಾವಿ ಸೊಸೆಗೆ ಹಸಿರು ಗಾಜಿನ ಬಳೆ ತೊಡಿಸಿದರು.

ಲೂಸ್ ಮಾದ ಯೋಗಿ 'ರಿಯಲ್' ಲವ್ ಸ್ಟೋರಿ ಬಹಿರಂಗ.!

ಮದುವೆ ಯಾವಾಗ.?

ಸ್ಕೂಲ್ ನಲ್ಲಿ ಒಟ್ಟಿಗೆ ವ್ಯಾಸಂಗ ಮಾಡುತ್ತಿದ್ದ ಯೋಗೀಶ್-ಸಾಹಿತ್ಯ ನಡುವೆ ಪ್ರೇಮಾಂಕುರವಾಗಿದ್ದು, ಈಗ ಗುರು ಹಿರಿಯರ ಸಮ್ಮತಿ ಪಡೆದು ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಸಾಹಿತ್ಯ ಹಾಗೂ ನಟ ಯೋಗೀಶ್ ಮದುವೆ ನವೆಂಬರ್ 2 ರಂದು ನಡೆಯಲಿದೆ.

English summary
Kannada Actor Yogesh got engaged to his long-time girl friend Sahitya on June 11th in Bengaluru. Check out the pics

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada