For Quick Alerts
  ALLOW NOTIFICATIONS  
  For Daily Alerts

  ದಶಕವೇ ಕಳೆದರು ಕುಂದಿಲ್ಲ ಅಣ್ಣಾವ್ರ ಗರಿಮೆ: ಈಗಲೂ ನಂಬರ್ 1 ನಟ ಅವರೇ!

  |

  ಕರ್ನಾಟಕ ಎಂದಿಗೂ ಮರೆಯಲಾಗದ ಹೆಸರು ಡಾ.ರಾಜ್‌ಕುಮಾರ್. ಕನ್ನಡ ಸಿನಿಮಾ ರಂಗಕ್ಕೆ, ಕನ್ನಡ ಭಾಷೆ, ಸಂಸ್ಕೃತಿಗೆ ಅವರು ನೀಡಿದ ಕೊಡುಗೆ ಅಪಾರ.

  ದಶಕಗಳು ಕಳೆದ್ರು ಇಂದಿಗೂ ರಾಜಣ್ಣನೆ ನಂಬರ್ ಒನ್ | Dr Rajkumar | Filmibeat Kannada

  ಡಾ.ರಾಜ್‌ಕುಮಾರ್, ನಮ್ಮನ್ನಗಲಿ ದಶಕದ ಮೇಲಾಯಿತು. ಆದರೆ ಇಂದಿಗೂ ಅವರ ಗರಿಮೆ ತುಸುವೂ ಕುಂದಿಲ್ಲ. ಇದಕ್ಕೆ ತಾಜಾ ಉದಾಹರಣೆಯೊಂದಿದೆ.

  ಸರ್ಚ್‌ ಎಂಜಿನ್ ಯಾಹೂ ನ ಸ್ಟೈಲ್ ವಿಭಾಗವು, 'ಭಾರತದ ಸಾರ್ವಕಾಲಿಕ ಅತ್ಯುತ್ತಮ ನಟ ಯಾರು?' ಎಂದು ಆನ್‌ಲೈನ್ ಸಮೀಕ್ಷೆ ನಡೆಸಿದೆ. ಭಾರತದ ಹಲವು ಭಾಷೆಗಳ ಟಾಪ್ ನಟರುಗಳ ಹೆಸರು ನೀಡಿ ಮತ ಹಾಕುವಂತೆ ಆಹ್ವಾನ ನೀಡಿದೆ.

  ಒಬ್ಬ ಬಳಕೆದಾರ ಹತ್ತು ಮಂದಿಗೆ ಮತ ಚಲಾಯಿಸಲು ಅವಕಾಶ ನೀಡಲಾಗಿದೆ. ಈ ಸಮೀಕ್ಷೆಯಲ್ಲಿ ಅತಿ ಹೆಚ್ಚು ಮತ ಪಡೆದಿರುವುದು ಕರ್ನಾಟಕದ ಹೆಮ್ಮೆ ಡಾ.ರಾಜ್‌ಕುಮಾರ್. ಎನ್‌ಟಿಆರ್, ಅಮಿತಾಬ್ ಬಚ್ಚನ್, ಎಂಜಿಆರ್, ಕಮಲ್ ಹಾಸನ್, ರಜನೀಕಾಂತ್, ಶಾರುಖ್ ಖಾನ್, ಅಮೀರ್ ಖಾನ್ ಇನ್ನೂ ಅನೇಕ ಖ್ಯಾತ ನಾಮರ ಹೆಸರುಗಳು ಪಟ್ಟಿಯಲ್ಲಿವೆ, ಆದರೆ ಅತಿ ಹೆಚ್ಚು ಮತ ಗಳಿಸಿರುವುದು ಡಾ.ರಾಜ್‌ಕುಮಾರ್.

  ಡಾ.ರಾಜ್‌ಕುಮಾರ್ ಡಿಸೆಂಬರ್ 10 ನೇ ತಾರೀಖಿನವರೆಗೆ ಒಟ್ಟು ಮತದಲ್ಲಿ ಶೇ 16 ಮತ ಪಡೆದಿದ್ದಾರೆ. ತೆಲುಗು ರಾಜ್ಯದ ಸ್ಟಾರ್ ನಟ ದಿವಂಗತ ಎನ್‌ಟಿಆರ್ ಎರಡನೇ ಸ್ಥಾನದಲ್ಲಿದ್ದಾರೆ. ಆದರೆ ಡಿಸೆಂಬರ್ 10 ರ ವರೆಗೆ ಒಟ್ಟು ಚಲಾವಣೆ ಆಗಿರುವ ಮತಗಳ ಸಂಖ್ಯೆ 5.67 ಲಕ್ಷ ಮಾತ್ರ.

  English summary
  Dr Rajkumar gets highest votes in India's all time best actor poll. NTR in second place.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X