twitter
    For Quick Alerts
    ALLOW NOTIFICATIONS  
    For Daily Alerts

    ರೂಪಾಯಿ ಮೌಲ್ಯ ಕುಸಿತ; ಬಾಲಿವುಡ್ ಸ್ಟಾರ್ಸ್ ಕಿವಿ ಹಿಂಡಿದ ಪ್ರಕಾಶ್ ರಾಜ್

    |

    ಬಹುಭಾಷಾ ನಟ ಪ್ರಕಾಶ್ ರಾಜ್ ತಮ್ಮದೇ ಶೈಲಿಯಲ್ಲಿ ರಾಜಕೀಯ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯಿಸುತ್ತಿರುತ್ತಾರೆ. ಅದರಲ್ಲೂ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಧೋರಣೆಗಳ ಬಗ್ಗೆ ಜಸ್ಟ್ ಆಸ್ಕಿಂಗ್ ಅಂತ ಪ್ರಶ್ನೆ ಮಾಡುತ್ತಲೇ ಬರುತ್ತಿದ್ದಾರೆ. ಸದ್ಯ ದಿನದಿಂದ ದಿನಕ್ಕೆ ಡಾಲರ್ ಎದುರು ರೂಪಾಯಿ ನಿರಂತರವಾಗಿ ಕುಸಿಯುತ್ತಿದೆ. ಮಂಗಳವಾರ ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಕುಸಿತ ಕಂಡಿದ್ದು, ರೂಪಾಯಿ 80ಕ್ಕೆ ತಲುಪಿದೆ ಈ ವಿಚಾರಕ್ಕೆ ಸಂಬಂಧಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪ್ರಕಾಶ್ ರಾಜ್, 'ಒಂದು ಕಾಲದಲ್ಲಿ. ನನ್ನ ದೇಶದಲ್ಲಿ' ಈ ರೀತಿ ಪ್ರಶ್ನಿಸಿದ್ದರು ಎಂದು ಟ್ವೀಟ್ ಮಾಡಿದ್ದಾರೆ.

    ಈ ಹಿಂದಿನ ಕೇಂದ್ರ ಸರ್ಕಾರದ ಆಡಳಿತಾವಧಿಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಾಗ ಬಾಲಿವುಡ್ ಸೆಲೆಬ್ರೆಟಿಗಳು ವ್ಯಂಗ್ಯಭರಿತ ಟ್ವೀಟ್‌ಗಳ ಮೂಲಕ ಅಸಮಾಧಾನ ಹೊರ ಹಾಕಿದ್ದರು. ಆದರೆ ಈಗ ಯಾಕೆ ಮಾತನಾಡುತ್ತಿಲ್ಲ ಅಂತ ಕೆಲವರು ಕೇಳುತ್ತಿದ್ದಾರೆ. ಅಂದು ಸೆಲೆಬ್ರೆಟಿಗಳು ಮಾಡಿದ ಟ್ವೀಟ್‌ಗಳನ್ನು ಪೋಸ್ಟ್ ಮಾಡಿ ನಟ ಪ್ರಕಾಶ್ ರಾಜ್ ಕೂಡ ಅದಕ್ಕೆ ದನಿಗೂಡಿಸಿದ್ದಾರೆ. ಅಂದು ಮನಮೋಹನ್ ಸಿಂಗ್ ಸರ್ಕಾರವನ್ನು ಪ್ರಶ್ನಿಸಿದ್ದ ಸೆಲೆಬ್ರೆಟಿಗಳು ಈಗ ಯಾಕೆ ಸುಮ್ಮನಿದ್ದಾರೆ ಅಂತ ಪ್ರಕಾಶ್ ರಾಜ್ ಟೀಕೆ ಮಾಡಿದ್ದಾರೆ. ಪ್ರಕಾಶ್ ರಾಜ್ ಮಾಡಿರೋ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ರೈತ ಪ್ರತಿಭಟನೆ ಬಗ್ಗೆ ಪ್ರಕಾಶ್ ರೈ ಟ್ವೀಟ್, ನಟಿಯ ಬೆಂಬಲರೈತ ಪ್ರತಿಭಟನೆ ಬಗ್ಗೆ ಪ್ರಕಾಶ್ ರೈ ಟ್ವೀಟ್, ನಟಿಯ ಬೆಂಬಲ

    ಕಾಶ್ಮೀರಿ ಫೈಲ್ಸ್ ಸಿನಿಮಾ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ, ಹಿರಿಯ ನಟ ಅನುಪಮ್ ಖೇರ್, ಶಿಲ್ಪಾ ಶೆಟ್ಟಿ, ಜೂಹಿ ಚಾವ್ಲಾ, ಅಮಿತಾಬ್ ಬಚ್ಚನ್ ಹಿಂದಿನ ಕೇಂದ್ರ ಸರ್ಕಾರವನ್ನು ಟೀಕಿಸಿದ್ದ ಟ್ವೀಟ್‌ಗಳನ್ನು ಪ್ರಕಾಶ್ ರಾಜ್ ಪೋಸ್ಟ್ ಮಾಡಿದ್ದಾರೆ. ಅದರಲ್ಲೂ ನಿರ್ದೇಶಕ ಅಗ್ನಿಹೋತ್ರಿ ಟ್ವೀಟ್ ಅನ್ನು ಟಾಪ್‌ ಪ್ಲೇಸ್‌ನಲ್ಲಿ ಇಟ್ಟಿದ್ದಾರೆ. 'ನಿಮ್ಮ ಸಂತೋಷ ಪೆಟ್ರೋಲ್ ದರದ ರೀತಿ ಹೆಚ್ಚಬೇಕು, ನಿಮ್ಮ ಕಷ್ಟ ಇಂಡಿಯನ್ ರೂಪಾಯಿ ರೀತಿ ಕುಸಿಯಬೇಕು, ಅದೇ ರೀತಿ ಭಾರತದಲ್ಲಿರೋ ಭ್ರಷ್ಟಾಚಾರದಂತೆ ಸಂತೋಷ ನಿಮ್ಮ ಹೃದಯ ತುಂಬಬೇಕು' ಅಂತ ಟ್ವೀಟ್ ಮಾಡಿದ್ದರು.

     ಬಿಟೌನ್ ಸೆಲೆಬ್ರೆಟಿಗಳ ಅಂದಿನ ಟ್ವೀಟ್‌ಗಳೇನು?

    ಬಿಟೌನ್ ಸೆಲೆಬ್ರೆಟಿಗಳ ಅಂದಿನ ಟ್ವೀಟ್‌ಗಳೇನು?

    ಅಮಿತಾಬ್ ಬಚ್ಚನ್ ರೂಪಾಯಿಗೆ ಹೊಸ ಅರ್ಥ ಕಲ್ಪಿಸಿ, ವ್ಯಂಗ್ಯ ಮಾಡಿ ಪರೋಕ್ಷವಾಗಿ ಟೀಕಿಸಿದ್ದರು. ಅನುಪಮ್ ಖೇರ್ ಕೂಡ ವಿವಾದಾತ್ಮಕವಾಗಿ ಟ್ವೀಟ್‌ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದರು. ನಟಿ ಶಿಲ್ಪಾ ಶೆಟ್ಟಿ ಟ್ವೀಟ್ ಮಾಡಿ 'ಡಾಲರ್ ಎಸ್ಕಲೇಟರ್‌ನಲ್ಲಿದ್ರೆ, ರೂಪಾಯಿ ವೆಂಟಿಲೇಟರ್‌ನಲ್ಲಿದೆ. ದೇಶ ಐಸಿಯುನಲ್ಲಿದ್ದು, ನಾವೆಲ್ಲಾ ಕೋಮಾದಲ್ಲಿದ್ದೇವೆ. ಈರುಳ್ಳಿ ಶೋರೂಮ್‌ನಲ್ಲಿದೆ ಈ ದೇಶವನ್ನು ದೇವರೇ ಕಾಪಾಡಬೇಕು' ಅಂತ ವ್ಯಂಗ್ಯಭರಿತ ಟ್ವೀಟ್ ಮಾಡಿದ್ದರು.

    Prakash Raj: ರಾಜ್ಯಸಭೆಗೆ ಪ್ರಕಾಶ್ ರೈ! ರೇಸ್‌ನಲ್ಲಿ ಇನ್ನೂ ಕೆಲವರುPrakash Raj: ರಾಜ್ಯಸಭೆಗೆ ಪ್ರಕಾಶ್ ರೈ! ರೇಸ್‌ನಲ್ಲಿ ಇನ್ನೂ ಕೆಲವರು

     ಜೂಹಿ ಚಾವ್ಲಾ ಒಳ ಉಡುಪಿನ ಟ್ವೀಟ್ ವೈರಲ್

    ಜೂಹಿ ಚಾವ್ಲಾ ಒಳ ಉಡುಪಿನ ಟ್ವೀಟ್ ವೈರಲ್

    ರೂಪಾಯಿ ಮೌಲ್ಯ ಕುಸಿದ ವಿಚಾರವನ್ನು ಒಳುಡುಪಿಗೆ ಹೋಲಿಸಿ ನಿಂಬೆ ಹಣ್ಣಿನಂತ ಹುಡುಗಿ ಮಾಡಿದ್ದ ಟ್ವೀಟ್ ಭಾರೀ ಚರ್ಚೆ ಹುಟ್ಟಾಕ್ಕಿತ್ತು. 'ನಮ್ಮ ಒಳಉಡುಪಿನ ಹೆಸರು ಡಾಲರ್, ರೂಪಾಯಿ ಅಂತ ಇದ್ದಿದ್ರೆ ಪದೇ ಪದೇ ಕುಸಿಯುತ್ತಿತ್ತು' ಅಂತ ಟ್ವೀಟ್ ಮಾಡಿದ್ದರು.

     ಪ್ರಕಾಶ್‌ ರಾಜ್‌ ಪರ ಬ್ಯಾಟಿಂಗ್

    ಪ್ರಕಾಶ್‌ ರಾಜ್‌ ಪರ ಬ್ಯಾಟಿಂಗ್

    ಜಸ್ಟ್ ಆಸ್ಕಿಂಗ್‌ ಹ್ಯಾಶ್‌ಟ್ಯಾಗ್‌ನಲ್ಲಿ ಪ್ರಕಾಶ್ ರಾಜ್‌ ಮಾಡಿರೋ ಟ್ವೀಟ್‌ಗೆ ಭಾರೀ ಬೆಂಬಲ ವ್ಯಕ್ತವಾಗ್ತಿದೆ. ಆ ಟ್ವೀಟ್‌ಗೆ ಸಾವಿರಾರು ಜನ ಪ್ರತಿಕ್ರಿಯಿಸಿದ್ದಾರೆ. ಅದರಲ್ಲಿ ನೆಟ್ಟಿಗರೊಬ್ಬರು 'ನಮ್ಮ ದೇಶದ ಹೆಮ್ಮೆಯ ಪ್ರಧಾನಿಗಳು ಡಾ.ಮನಮೋಹನ್ ಸಿಂಗ್ ಅವರು ತಾವು ಮಾತನಾಡದೆ ಮೌನಿಯಾಗಿದ್ದು, ಬೇರೆ ಅವರಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದರು. ಆದರೆ ಈಗ ಇದೆಲ್ಲವನ್ನು ಕಿತ್ತುಕೊಳ್ಳಲಾಗಿದೆ. ಅವರು ಮಾತ್ರ ಮಾತನಾಡುತ್ತಾರೆ. ಇವರೆಲ್ಲರೂ ಮೌನಿಗಳಾಗಿದ್ದಾರೆ' ಅಂತ ಬರೆದಿದ್ದಾರೆ.

     ಹೊಸ ರಾಷ್ಟ್ರೀಯ ಲಾಂಛನ ಶಿಲ್ಪ ವಿರೋಧಿಸಿದ್ದ ಪ್ರಕಾಶ್ ರಾಜ್

    ಹೊಸ ರಾಷ್ಟ್ರೀಯ ಲಾಂಛನ ಶಿಲ್ಪ ವಿರೋಧಿಸಿದ್ದ ಪ್ರಕಾಶ್ ರಾಜ್

    ಇನ್ನು ಇತ್ತೀಚೆಗೆ ಜಸ್ಟ್ ಆಸ್ಕಿಂಗ್ ಹ್ಯಾಷ್ ಟ್ಯಾಗ್ ಅಡಿ 'ನಾವು ಎತ್ತ ಸಾಗುತ್ತಿದ್ದೇವೆ' ಎಂದು ಪ್ರಕಾಶ್‌ ರಾಜ್ ಪ್ರಶ್ನೆ ಮಾಡಿದ್ದರು. ಈ ಪ್ರಶ್ನೆಯ ಜೊತೆಗೆ ಬದಲಾವಣೆಯಾದ ರಾಮನ, ಹನುಮಂತನ ಫೋಟೋಗಳನ್ನು ಹಾಕಿದ್ದರು. ಬಹುಭಾಷಾ ನಟನ ಈ ಟ್ವೀಟ್‌ ಅನ್ನು ಸಾಕಷ್ಟು ಜನ ಖಂಡಿಸಿದ್ದರು.

    English summary
    Indian Rupees Drop: South Actor Prakash Raj Taunt In Social Media, Know More.
    Thursday, July 21, 2022, 9:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X