Don't Miss!
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Sports
ಟಿ20 ವಿಶ್ವಕಪ್ ಗೆದ್ದ ಶಫಾಲಿ ವರ್ಮಾ ಪಡೆಗೆ ಬಿಸಿಸಿಐ ಸನ್ಮಾನ: 5 ಕೋಟಿ ರುಪಾಯಿ ಬಹುಮಾನ
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕನ್ನಡ ಚಿತ್ರರಂಗದ ಸಂತ್ರಸ್ತರ ನೆರವಿಗೆ ಧಾವಿಸಿದ ಇನ್ಫೋಸಿಸ್ ಫೌಂಡೇಶನ್
ಕನ್ನಡ ಚಿತ್ರರಂಗದ ಸಾವಿರಾರು ಕಾರ್ಮಿಕರು ಕೊರೊನಾ ಮಹಾಮಾರಿಯಿಂದಾಗಿ ಸಮಸ್ಯೆಗೆ ಸಿಲುಕಿದ್ದಾರೆ. ಕಾರ್ಮಿಕರ ನೆರವಿಗೆ ಸುಧಾಮೂರ್ತಿ ನೇತೃತ್ವದ ಇನ್ಫೋಸಿಸ್ ಫೌಂಡೇಶನ್ ಮುಂದಾಗಿದೆ. ಸಿನಿಮಾ ಕಾರ್ಮಿಕರ 18 ಸಂಘಟನೆಗಳ ಸಹಯೋಗದಲ್ಲಿ ಕಾರ್ಮಿಕರುಗಳಿಗೆ ಅಗತ್ಯವಿರುವ ಆಹಾರ ಸಾಮಗ್ರಿಗಳನ್ನು ಇನ್ಫೋಸಿಸ್ ಫೌಂಡೇಶನ್ ವಿತರಿಸಲಿದ್ದು, ಈ ಕಾರ್ಯಕ್ಕೆ ನಗರದ ಬನಶಂಕರಿ ಪೋಸ್ಟ್ ಆಫೀಸ್ ಬಳಿಯಲ್ಲಿ ಚಾಲನೆ ನೀಡಲಾಯಿತು.
ನಿರ್ಮಾಪಕ ರಮೇಶ್ ರೆಡ್ಡಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಲ್ಯಾಣ ನಿಧಿ ಅಧ್ಯಕ್ಷರಾದ ಸಾ ರಾ ಗೋವಿಂದು, ಕಾರ್ಮಿಕರ ಸಂಘದ ಉಪಾಧ್ಯಕ್ಷರಾದ ರವಿ ಶಂಕರ್ ಸೇರಿದಂತೆ ಹಲವರು ಈ ಕಾರ್ಯಕ್ಕೆ ಚಾಲನೆ ನೀಡಿದರು. ಇನ್ಫೋಸಿಸ್ ಫೌಂಡೇಷನ್ ವತಿಯಿಂದ ಇಂದು ಸಾಂಕೇತಿಕವಾಗಿ ಚಾಲನೆ ನೀಡಿದ್ದು, ಮುಂಬರುವ ದಿನಗಳಲ್ಲಿ ಕಾರ್ಮಿಕರ ಸಂಘಟನೆಗಳ ಪದಾಧಿಕಾರಿಗಳು ವಿತರಣೆಯ ಕಾರ್ಯವನ್ನು ಮುಂದುವರೆಸಲಿದ್ದಾರೆ.

ಗಾಳೀಪಟ – 2 ಸಿನೆಮಾದ ನಿರ್ಮಾಪಕರಾದ ರಮೇಶ್
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗಾಳೀಪಟ - 2 ಸಿನೆಮಾದ ನಿರ್ಮಾಪಕರಾದ ರಮೇಶ್ ರೆಡ್ಡಿ, ಇನ್ಫೋಸಿಸ್ ಫೌಂಡೇಷನ್ ವತಿಯಿಂದ ದೇಶ ಹಾಗೂ ರಾಜ್ಯದಲ್ಲಿ ಅನೇಕ ಒಳ್ಳೆಯ ಕೆಲಸಗಳು ಆಗುತ್ತಿವೆ. ಈ ತೊಂದರೆಯ ಸಮಯದಲ್ಲಿ ಚಲನಚಿತ್ರ ಕಾರ್ಮಿಕರ ಬಗ್ಗೆ ಕಾಳಜಿಯನ್ನು ತೋರಿಸಿರುವುದು ಸ್ವಾಗತಾರ್ಹ ವಿಷಯವಾಗಿದೆ ಎಂದು ಹೇಳಿದರು.

ಕೆಎಫ್ ಸಿಸಿ ಪರವಾಗಿ ಸಾರಾ ಗೋವಿಂದು ಮಾತನಾಡಿ
ಸಾರಾ ಗೋವಿಂದು ಮಾತನಾಡಿ, 18 ಚಲನ ಚಿತ್ರ ಕಾರ್ಮಿಕ ಸಂಘಟನೆಗಳ ಅಡಿಯಲ್ಲಿ ಸಾವಿರಾರು ಕುಟುಂಬಗಳು ಜೀವನ ಸಾಗಿಸುತ್ತಿವೆ. ಕರೋನಾ ಕರ್ಪ್ಯೂದಿಂದಾಗಿ ಎಲ್ಲರ ಜೀವನ ತೊಂದರೆಗೆ ಸಿಲುಕಿದೆ. ಅವರ ಜೀವನಕ್ಕೆ ಅಗತ್ಯವಿರುವ ವಸ್ತುಗಳನ್ನು ನೀಡಲು ಇನ್ಫೋಸಿಸ್ ಫೌಂಡೇಷನ್ ಮುಂದಾಗಿರುವುದು ಬಹಳ ಸಂತಸದ ವಿಷಯವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಾರ್ಮಿಕರ ಸಂಘದ ಉಪಾಧ್ಯಕ್ಷರಾದ ರವಿ ಶಂಕರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
|
ಕರ್ನಾಟಕದ ಸಿನಿ ಕಾರ್ಮಿಕರಿಗೆ ರಿಲಯನ್ಸ್ ನೆರವು
ಉದ್ಯಮಿ ಮುಖೇಶ್ ಅಂಬಾನಿ ಹಾಗೂ ಪತ್ನಿ ನೀತಾ ನೇತೃತ್ವ ರಿಲಯನ್ಸ್ ಫೌಂಡೇಶನ್ ವತಿಯಿಂದಲೂ ಕನ್ನಡ ಸಿನಿಕಾರ್ಮಿಕರಿಗೆ ನೆರವು ಸಿಕ್ಕಿದೆ. ಸುಮಾರು 6000 ಕುಟುಂಬಗಳಿಗೆ ಸಹಾಯವಾಗುವಂತೆ 2 ಕೋಟಿ ರು ದೇಣಿಗೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಕಾರ್ಮಿಕರಿಗೆ ನೆರವಾದ ಸಿನಿತಾರೆಯರು
ಬಿಜೆಪಿ ನಾಯಕಿ ತಾರಾ ಅನುರಾಧಾ, ರುದ್ರೇಶ್, ಮರಿಸ್ವಾಮಿ ಎಂಬುವರು ಕೆಲದಿನಗಳ ಹಿಂದೆ ಸಿನಿ ಕಾರ್ಮಿಕರಿಗೆ ಆಗುತ್ತಿರುವ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಕಿಚ್ಚ ಸುದೀಪ, ದರ್ಶನ್, ಯಶ್, ಪುನೀತ್, ನಿಖಿಲ್ ಕುಮಾರಸ್ವಾಮಿ, ಉಪೇಂದ್ರ, ಪ್ರಣೀತಾ, ರಾಧಿಕಾ, ದೀಪಕಾ ದಾಸ್ ಸೇರಿದಂತೆ ಅನೇಕ ನಟ ನಟಿಯರು ತಮ್ಮ ಕೈಲಾದ ರೀತಿಯಲ್ಲಿ ನೆರವಾಗುತ್ತಿದ್ದಾರೆ.