»   » ಮಲ್ಟಿಪ್ಲೆಕ್ಸ್ ವಿರುದ್ಧ ಟ್ವಿಟ್ಟರ್ ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳು

ಮಲ್ಟಿಪ್ಲೆಕ್ಸ್ ವಿರುದ್ಧ ಟ್ವಿಟ್ಟರ್ ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳು

Posted By:
Subscribe to Filmibeat Kannada

ಕವಿರಾಜ್ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದಿರುವ 'ಮದುವೆಯ ಮಮತೆಯ ಕರೆಯೋಲೆ' ಸಿನಿಮಾ ಇದೀಗ ಸಂಕಷ್ಟದ ಹಾದಿಯಲ್ಲಿದೆ. ಮೊಟ್ಟ ಮೊದಲ ಬಾರಿಗೆ ಪಕ್ಕಾ ಫ್ಯಾಮಿಲಿ ಸೆಂಟಿಮೆಂಟ್ ಇರುವ ಮನೋರಂಜನಾತ್ಮಕ ಸಿನಿಮಾ ನೀಡಿರುವ ಕವಿರಾಜ್ ಅವರು ಸಿನಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿಕೊಂಡಿದ್ದರು.

ಆದರೆ ಪರಭಾಷಾ ಚಿತ್ರಗಳ ಹಾವಳಿಯಿಂದ ಮತ್ತು ಮಲ್ಟಿಪ್ಲೆಕ್ಸ್ ಗಳ ದರ್ಬಾರಿನಿಂದ ಇದೀಗ 'ಮದುವೆಯ ಮಮತೆಯ ಕರೆಯೋಲೆ' ಸಿನಿಮಾಗೆ ಅನ್ಯಾಯ ಜರುಗುತ್ತಿದೆ.

ಹೌದು ನಿನ್ನೆ ರಾತ್ರಿ ಬೆಂಗಳೂರಿನ ಒರೆಯಾನ್ ಮಾಲ್ ನಲ್ಲಿ ಜರುಗಿದ ಘಟನೆಯಿಂದಾಗಿ ಬೇಸರಗೊಂಡಿರುವ ನಿರ್ದೇಶಕ ಕವಿರಾಜ್, ನಿರ್ಮಾಪಕ ದಿನಕರ್ ತೂಗುದೀಪ, ನಟ ಸೂರಜ್ ಗೌಡ ಮುಂತಾದವರು ಚಲನಚಿತ್ರ ಮಂಡಳಿ ಎದುರು ಧರಣಿ ಮಾಡುತ್ತಿದ್ದಾರೆ.['ಮಮಕ' ಚಿತ್ರಕ್ಕೆ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಿಂದ ಅನ್ಯಾಯ]

ಕರ್ನಾಟಕದಲ್ಲೇ ಕನ್ನಡ ಚಿತ್ರಗಳಿಗೆ ಮಲತಾಯಿ ಧೋರಣೆ ಮಾಡುತ್ತಿದ್ದಾರೆ ಎಂದು ಇಡೀ ಟ್ವಿಟ್ಟರ್ ನಾದ್ಯಂತ #WeAllSupportMMk ಎಂದು ಕನ್ನಡ ಸಿನಿರಸಿಕರು ಟ್ರೆಂಡ್ ಶುರು ಮಾಡಿದ್ದಾರೆ.

'ಒಳ್ಳೆ ಕನ್ನಡ ಸಿನಿಮಾ ಮಾಡಿದ್ರೆ ಕೊನೆಗೆ ಸಿಗೋ ಪ್ರತಿಫಲ ಇದೇನಾ?' ಎಂದು ಕನ್ನಡದ ಸಿನಿ ಪ್ರೇಕ್ಷಕರು ರೊಚ್ಚಿಗೆದ್ದಿದ್ದಾರೆ. ಜೊತೆಗೆ ನಿಮ್ಮ ಸಪೋರ್ಟ್ ಗೆ ನಾವಿದ್ದೇವೆ ಎಂದು ಟ್ವಿಟ್ಟರ್ ನಾದ್ಯಂತ ಬೆಂಬಲ ಸೂಚಿಸಿದ್ದಾರೆ. ಮುಂದೆ ಓದಿ.. ಸ್ಲೈಡುಗಳಲ್ಲಿ...

ಕೆ.ಎಫ್.ಸಿ.ಸಿ ಕಛೇರಿ ಎದುರು ಧರಣಿ ಕುಳಿತಿರುವ 'ಮಮಕ'

ಮಲ್ಟಿಪ್ಲೆಕ್ಸ್ ನಿಂದ ತಮಗಾದ ಅನ್ಯಾಯಕ್ಕೆ ನ್ಯಾಯ ದೊರಕಿಸಿ ಕೊಡಿ ಎಂದು 'ಮದುವೆಯ ಮಮತೆಯ ಕರೆಯೋಲೆ' ಚಿತ್ರತಂಡ, ಚಿತ್ರದ ನಿರ್ದೇಶಕ ಕವಿರಾಜ್, ನಿರ್ಮಾಪಕ ದಿನಕರ್ ತುಗುದೀಪ್, ನಟ ಸೂರಜ್ ಗೌಡ. ಕನ್ನಡ ಚಿತ್ರಗಳಿಗೆ ಕರ್ನಾಟಕದಲ್ಲೇ ಮಲತಾಯಿ ಧೋರಣೆಯಾಗುತ್ತಿದೆ ಎಂದು ಕನ್ನಡ ಸಿನಿ ರಸಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಮೂಲ್ಯ ಲವರ್ಸ್

ಒಳ್ಳೆ ವಿಮರ್ಶೆ ಇರುವ ಚಿತ್ರಗಳಿಗೆ ಬೆಲೆ ಇಲ್ಲ. ಒಳ್ಳೆ ಕನ್ನಡ ಸಿನಿಮಾ ಮಾಡಿದ್ರೆ ಕೊನೆಗೆ ಸಿಗೋ ಪ್ರತಿಫಲ ಇದೇನಾ.. ಎಂದು ಗೋಲ್ಡನ್ ನಟಿ ಅಮೂಲ್ಯ ಅವರ ಅಭಿಮಾನಿ ಸಂಘದವರು ಟ್ವಿಟ್ಟರ್ ನಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಅಮೂಲ್ಯ ಅಭಿಮಾನಿಗಳು

'ನೋಡಿ, ಕೋಟಿ ಕೋಟಿ ಖರ್ಚು ಮಾಡಿ ಒಂದು ಒಳ್ಳೆ ಕನ್ನಡ ಸಿನಿಮಾ ಮಾಡಿದ್ರೆ, ಕೊನೆಗೆ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಸಿಗೋ ಪ್ರತಿಫಲ ಇದೇನಾ... ಎಂದು ನಟಿ ಅಮೂಲ್ಯ ಅವರ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.

ನಮ್ಮ ಕುಡ್ಲ ಕನ್ನಡ

ಈ "Multi"Plex ಅವರಿಗೆ ಯಾರಾದ್ರೂ ಬುದ್ದಿ ಕಲಿಸ್ರಪ್ಪ.....Support 'ಮದುವೆಯ ಮಮತೆಯ ಕರೆಯೋಲೆ' ಎಂದು ಅಬಿಮಾನಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಭಿಮಾನಿ ನಂದನ್ ರಾವ್

'ಕನ್ನಡ ಚಿತ್ರಗಳಿಗೆ ಬೆಲೆ ಕೊಡದ ಮಾಲ್ ಗಳನ್ನು ಬಲವಂತವಾಗಿ ಮುಚ್ಚಿಸೋಣ, ಬ್ಯಾನ್ ಮಾಡ್ಲೇಬೇಕು ಈ ಮಾಲ್ ಗಳನ್ನು.....ಎಂದು ಕನ್ನಡ ಸಿನಿಮಾ ಅಭಿಮಾನಿ ನಂದನ್ ರಾವ್ ಅವರು ಟ್ವೀಟ್ ಮಾಡಿದ್ದಾರೆ.

ನಮ್ಮ ಕುಡ್ಲ ಕನ್ನಡ

ಈ ಮಲ್ಟಿಪ್ಲೆಕ್ಸ್ ಗಳಿಗಿಂತ ಉಗ್ರಗಾಮಿಗಳೇ ಎಷ್ಟೋ ವಾಸಿ. ಅವರಾದರೆ, ನೇರವಾಗಿ ಕೊಂದಾದರೂ ಹಾಕುತ್ತಾರೆ. ಎಂದು ನಮ್ಮ ಕುಡ್ಲದವರು ಟ್ಬೀಟ್ ಮಾಡಿದ್ದಾರೆ.

ಕಿಚ್ಚ ಸುದೀಪ್ ಅಭಿಮಾನಿಗಳು

'ತೆಲುಗು-ತಮಿಳು ಚಿತ್ರ ಹಾಕೋ ಹುನ್ನಾರದಲ್ಲಿ ಕನ್ನಡ ಚಿತ್ರವನ್ನ ತುಳಿಯುತ್ತಿರುವ ಮಲ್ಟಿಪ್ಲೆಕ್ಸ್ ಗಳಿಗೆ ನಮ್ಮ ದಿಕ್ಕಾರ ಎಂದು ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ.

ಅಭಿಮಾನಿ ಶಂಕರ್ ಸಿ.ಎಂ

'ಯಾವ್ದೋ ಕೆಟ್ಟ ಪರಭಾಷೆ ಚಿತ್ರಗಳನ್ನು ಹಾಕಿ ಥೂ ಅನ್ನಿಸಿಕೊಳ್ಳುವ ಬದಲು ಒಳ್ಳೆ ಕನ್ನಡ ಚಿತ್ರ ಹಾಕಿ ಸೈ ಅನ್ನಿಸಿಕೊಳ್ಳುವುದು ಲೇಸೆಂದ ಸರ್ವಜ್ಞ. ಎಂದು ದರ್ಶನ್ ಅವರ ಅಭಿಮಾನಿ ಶಂಕರ್ ಸಿ.ಎಂ ಟ್ವೀಟ್ ಮಾಡಿದ್ದಾರೆ.

ಕಾರ್ತಿಕ್ ಬಿ.ಜೆ ದರ್ಶು

'ಮದುವೆಯ ಮಮತೆಯ ಕರೆಯೋಲೆ'ಯಂತಹ ಕೌಟುಂಬಿಕ ಚಿತ್ರಕ್ಕೆ ಈ ರೀತಿಯಾದರೇ ಹೇಗೆ.. ಎಂದು ಅಭಿಮಾನಿ ಕಾರ್ತಿಕ್ ಬಿ.ಜೆ ದರ್ಶು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಭಿಮಾನಿ ಶಶಿ ಕಿರಣ

'ಮಮಕ' ಚಿತ್ರಕ್ಕೆ ನೋಡಿ ಯಾವ ಗತಿ ಬಂದಿದೆ ರಾಜದಾನಿಯಲ್ಲಿ. ಕನ್ನಡ ಸಿನಿಮಾ ಹಾಕಿ ಎಂದು ಬೇಡಿಕೊಳ್ಳುವ ಸ್ಥಿತಿ, ಹೇಳಿ...ಎಂದು ಅಭಿಮಾನಿಯೊಬ್ಬರು ಬೇಸರ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

English summary
Injustice for 'Maduveya Mamatheya Kareyole': Twitter reaction. Kannada Actress Amoolya, Kannada Actor Sooraj Gowda in the lead role. The movie is directed by Kaviraj.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada